ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲು ಡಿಕೆಶಿಗೆ ಯಡಿಯೂರಪ್ಪ ಅನುಮತಿ

0
164
Tap to know MORE!

ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕಾಂಗ್ರೆಸ್ ಪಕ್ಷದ ಟ್ರಬಲ್ ಶೂಟರ್ ಡಿ.ಕೆ. ಶಿವಕುಮಾರ್ ರವರಿಗೆ, ಕೋವಿಡ್-೧೯ ಭೀತಿಯಿಂದ ಜಾರಿಯಲ್ಲಿರುವ ಲಾಕ್‌ಡೌನ್ ಮಾನದಂಡಗಳಿಗೆ ಅನುಸಾರವಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುವ ಕಾರ್ಯಕ್ರಮ ನಡೆಸಲು ಅನುಮತಿಯನ್ನು ನೀಡಿದ್ದಾರೆ ಎಂದು ಪಕ್ಷದ ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.

“ಯಡಿಯೂರಪ್ಪ ಅವರು ಬುಧವಾರ ಶಿವಕುಮಾರ್ ಅವರೊಂದಿಗೆ ಮಾತನಾಡಿದರು ಮತ್ತು ಸಾರ್ವಜನಿಕ ಸಮಾರಂಭದಲ್ಲಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲು ರಾಜ್ಯ ಸರ್ಕಾರದಿಂದ ಯಾವುದೇ ಆಕ್ಷೇಪವಿಲ್ಲ. ಆದರೆ ಅದು ಲಾಕ್ಡೌನ್ ಮಾರ್ಗಸೂಚಿಗಳ ಪ್ರಕಾರ ಇರಬೇಕು ಎಂದಿದ್ದಾರೆ” ಎಂದು ಕಾಂಗ್ರೆಸ್ ಅಧಿಕಾರಿ ಎಂ.ಎ. ಸಲೀಮ್ ಮಾಧ್ಯಮ ಪ್ರತಿನಿಧಿಗಳಿಗೆ ಹೇಳಿದರು.

ಜೂನ್ 30 ರವರೆಗೆ ವಿಸ್ತರಿಸಿದ ಲಾಕ್‌ಡೌನ್ ಮಾನದಂಡಗಳಿಂದಾಗಿ 50 ಕ್ಕೂ ಹೆಚ್ಚು ಜನರನ್ನು ಒಟ್ಟು ಸೇರಿಸಲು ಅವಕಾಶವಿಲ್ಲದ ಕಾರಣ ಮಂಗಳವಾರ ರಾಜ್ಯ ಕಂದಾಯ ಅಧಿಕಾರಿಯೊಬ್ಬರು ಶಿವಕುಮಾರ್‌ಗೆ ಅನುಮತಿ ನಿರಾಕರಿಸಿದ ನಂತರ ಮುಖ್ಯಮಂತ್ರಿಯವರು ಈ ಅನುಮತಿಯನ್ನು ನೀಡಿದ್ದಾರೆ.

“ಈ ಮೊದಲು, ಅನುಮತಿ ನಿರಾಕರಿಸಿದ್ದರಿಂದ, ಜೂನ್ 14 ರಂದು ನಿಗದಿಯಾಗಿದ್ದ ಕಾರ್ಯಕ್ರಮವನ್ನು ಡಿಕೆಶಿ ರದ್ದುಗೊಳಿಸಿ, ಜೂನ್ 21 ರ ಅಮಾವಾಸ್ಯೆಯ ನಂತರ ಹೊಸ ದಿನಾಂಕವನ್ನು ನಿಗದಿಪಡಿಸಲು ನಿಶ್ಚಯಿಸಲಾಗಿತ್ತು. ಬಹುಷಃ, ಅವರು ಜೂನ್ 28 ರಂದು ಅಧಿಕಾರ ವಹಿಸಿಕೊಳ್ಳುತ್ತಾರೆ”, ಎಂದು ಸಲೀಮ್ ಸುಳಿವು ನೀಡಿದರು.

LEAVE A REPLY

Please enter your comment!
Please enter your name here