ಕೆಮ್ರಾಲ್: ಗ್ರಾಮ ಕರಣಿಕರಿಗೆ ಮಾನಸಿಕ ಕಿರುಕುಳ ನೀಡಿ ಕರ್ತವ್ಯಕ್ಕೆ ಅಡ್ಡಿ; ನೈತಿಕ ಧೈರ್ಯ ತುಂಬಿದ ಗ್ರಾಮಸ್ಥರು

0
191
Tap to know MORE!

ಮೂಲ್ಕಿ: ಕೆಮ್ರಾಲ್ ಗ್ರಾಮ ಪಂಚಾಯತ್‌ನ ಗ್ರಾಮ ಕರಣಿಕ ಶಿವಾನಂದ ಅವರು ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾಗ ಕೆಲವರು ಕಚೇರಿಯ ಮುಂದೆ ಪ್ರತಿಭಟನೆ ಹೆಸರಿನಲ್ಲಿ ಮಾನಸಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದು, ಗ್ರಾಮ ಕರಣಿಕ ಶಿವಾನಂದ ಅವರಿಗೆ ನೈತಿಕ ಧೈರ್ಯ ನೀಡಲು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‌ನ ಮಾಜಿ ಸದಸ್ಯರಾದ ವಿನೋದ್‌ಕುಮಾರ್ ಬೊಳ್ಳೂರು ಅವರ ನೇತೃತ್ವದಲ್ಲಿ ಗ್ರಾಮಕರಣಿಕರ ಕಚೇರಿಗೆ ಗ್ರಾಮಸ್ಥರು ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಪ್ರತಿಭಟನೆಯ ಹೆಸರಿನಲ್ಲಿ ನಡೆದ ಘಟನೆಯನ್ನು ವಿವರಿಸಿ, ತಾನು ಕಾನೂನು ಮೀರಿ ಯಾವುದೇ ಕ್ರಮವನ್ನು ಜರಗಿಸುವುದಿಲ್ಲ ಎಂದು ತಿಳಿಸಿದ್ದು, ಕೆಲವೊಂದು ದಾಖಲೆಗಳನ್ನು ಪ್ರತಿಭಟನಾಕಾರರು ತಿಳಿಸಿದಂತೆ ಮಾಡಲು ಸಾಧ್ಯವಿಲ್ಲ, ಈ ಬಗ್ಗೆ ಅವರಿಗೆ ಸ್ಪಷ್ಟನೆ ನೀಡಿದ್ದೇನೆ ನಾನು ಯಾವುದೇ ತಪ್ಪು ಮಾಡಿಲ್ಲ ಆದರೂ ನನ್ನ ವಿರುದ್ಧ ಮಾತನಾಡುವವರು ದಾಖಲೆ ಸಹಿತ ನನ್ನ ತಪ್ಪನ್ನು ತೋರಿಸಲಿ ಎಂದು ಸವಾಲು ಹಾಕಿದರು.

ನಿಮ್ಮ ಊರಿನ, ಸ್ಥಳೀಯ ಸುದ್ದಿಗಳನ್ನು ಸುದ್ದಿವಾಣಿಯಲ್ಲಿ ಪ್ರಕಟಿಸಲಾಗುವುದು. ಆದ ಜನ ಸ್ನೇಹಿ ಕಾರ್ಯಕ್ರಮಗಳ ವರದಿಯನ್ನು suddivani20@gmail.com ಗೆ mail ಮಾಡಿ

ಕೆಮ್ರಾಲ್: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ

ನಾನು ಈ ಘಟನೆಯ ಬಗ್ಗೆ ಸ್ಪಷ್ಟನೆ ನೀಡಿದ್ದರೂ ಸಹ ನನ್ನ ಹೇಳಿಕೆಯನ್ನು ದಾಖಲಿಸಿದೇ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡಲಾಗಿದೆ. ತಹಶೀಲ್ದಾರ್ ಅವರು ಸ್ಥಳದಲ್ಲಿಯೇ ಇದ್ದರೂ ಅವರ ಮುಂದೇಯೇ ಹೇಳಿಕೆ ನೀಡಿದ್ದೇನೆ. ನಾನು ಗ್ರಾಮದ ಜನರಿಗೆ ಸೇವೆಯನ್ನು ಸರಕಾರದ ಸೌಲಭ್ಯವನ್ನು ದೊರಕಿಸಿಕೊಡುವವವಾನಿಗಿದ್ದು ರಾಜಕೀಯ ಇದರಲ್ಲಿ ಇಲ್ಲ ಎಂದು ಹೇಳಿದರು.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ಈ ಬಗ್ಗೆ ಮಾತನಾಡಿದ ವಿನೋದ್ ಬೊಳ್ಳೂರು, ಗ್ರಾಮಕರಣಿಕರನ್ನು ಬೆದರಿಸುವ ತಂತ್ರ ಸರಿಯಲ್ಲ ಜನರಿಗೆ ತಪ್ಪು ಮಾಹಿತಿ ನೀಡಬಾರದು, ಗ್ರಾಮಕರಣಿಕರಿಗೆ ಮಾನಸಿಕ ಕಿರುಕುಳ ನೀಡಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದರಿಂದ ಅವರಿಗೆ ನಾವು ನೈತಿಕ ಸ್ಥೈರ್ಯವನ್ನು ನೀಡಿದ್ದೇವೆ ಇದರಲ್ಲಿ ಯಾವುದೇ ರಾಜಕೀಯ ಇಲ್ಲ, ಈ ಬಗ್ಗೆ ಮನವಿಯನ್ನು ತಹಶೀಲ್ದಾರ್ ಅವರಿಗೂ ನೀಡಲಿದ್ದೇವೆ, ಮುಂದಿನ ದಿನದಲ್ಲಿಯೂ ನಮ್ಮ ಸಹಕಾರ ನೀಡುತ್ತೇವೆ ಎಂದರು.

ಸುಧಾಕರ ಶೆಟ್ಟಿ, ಬೇಬಿ ಕೋಟ್ಯಾನ್, ಸಚಿನ್ ಶೆಟ್ಟಿ, ಧನುಶ್ ಕುಲಾಲ್, ಧನ್‌ರಾಜ್, ರಾಜೇಶ್‌ದಾಸ್, ಜಯಂತಿ ಶೆಟ್ಟಿ, ಶೋಭಾ, ಪವಿತ್ರ, ಅಮೃತ, ಹರಿಪ್ರಸಾದ್ ಶೆಟ್ಟಿ, ರಾಜೇಶ್ ಪಂಜ, ಸೀತಾರಾಮ ಪಂಜ, ಅಶ್ವಿತ್, ಶಂಭು ಶೆಟ್ಟಿ, ಜಯ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here