ಕೆ-ಸಿಇಟಿ ಪರೀಕ್ಷೆ – ಮರುಪರಿಶೀಲಿಸುವಂತೆ ಸರ್ಕಾರಕ್ಕೆ ನ್ಯಾಯಾಲಯ ಆದೇಶ

0
156
Tap to know MORE!

ವಿದ್ಯಾರ್ಥಿಗಳು ಸಲ್ಲಿಸಿದ್ದ ಕೆ-ಸಿಇಟಿ 2020 ಪರೀಕ್ಷೆ ಮುಂದೂಡಬೇಕೆಂಬ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಿಚಾರಣೆ ನಡೆಸಿದೆ. ನ್ಯಾಯಾಧೀಶರಾದ ಸಿಜೆ ಅಭಯ್ ಓಕಾ ಮತ್ತು ನ್ಯಾಯಮೂರ್ತಿ ಸಂದೇಶ್ ಅವರ ನ್ಯಾಯಪೀಠವು ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸುತ್ತಿದೆ. ಕೆ-ಸಿಇಟಿ 2020 ನಡೆಸುವ ನಿರ್ಧಾರವನ್ನು ಮರುಪರಿಶೀಲಿಸುವಂತೆ ನ್ಯಾಯಾಲಯವು ಕರ್ನಾಟಕ ಸರ್ಕಾರವನ್ನು ಕೋರಿದೆ. ನಾಳೆ ಜುಲೈ 29 ರಂದು ಸರ್ಕಾರವು ಉತ್ತರವನ್ನು ನೀಡುವ ನಿರೀಕ್ಷೆಯಿದೆ. ಪರೀಕ್ಷೆಯು ಜುಲೈ 30 ಮತ್ತು 31, 2020 ರಂದು ನಡೆಸಲು ನಿರ್ಧರಿಸಲಾಗಿದೆ.

ರಾಜ್ಯದಲ್ಲಿ COVID19 ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇದ್ದರೂ, ಜುಲೈ 30 ಮತ್ತು 31 ರಂದು ಕೆ-ಸಿಇಟಿ ಪರೀಕ್ಷೆಯನ್ನು ನಡೆಸುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ನಿರ್ಧಾರವನ್ನು ಪ್ರಶ್ನಿಸಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹೂಡಲಾಯಿತು. ಇದರ ಬಗ್ಗೆ ಹಲವು ಅಭ್ಯರ್ಥಿಗಳು ಕಳವಳ ವ್ಯಕ್ತಪಡಿಸಿದರು.

ಈ ಅರ್ಜಿಯನ್ನು ತುರ್ತು ವಿಷಯ ಎಂದು ಪರಿಗಣಿಸಿ, ಮುಖ್ಯ ನ್ಯಾಯಮೂರ್ತಿಯು ನ್ಯಾಯಾಲಯದ ಮುಂದೆ ಇದನ್ನು ಇಟ್ಟರು ಮತ್ತು ಇಂದು ಇದರೊಂದಿಗೆ ಹಲವಾರು ವಿಚಾರಣೆಗಳನ್ನು ನಡೆಸಲಾಯಿತು. ಅರ್ಜಿದಾರರನ್ನು ಪ್ರತಿನಿಧಿಸುವ ವಕೀಲರು ಕಳೆದ ಎರಡು ವಾರಗಳಲ್ಲಿ ರಾಜ್ಯದಲ್ಲಿ ಪ್ರತಿದಿನ 5000 ಕ್ಕೂ ಹೆಚ್ಚು ಪ್ರಕರಣಗಳು ಮತ್ತು ಬೆಂಗಳೂರು ನಗರದಲ್ಲಿ ಸುಮಾರು 1-2 ಸಾವಿರ ಪ್ರಕರಣಗಳು ಕಂಡುಬಂದಿವೆ. 5000 ಕ್ಕೂ ಹೆಚ್ಚು ಪ್ರದೇಶಗಳನ್ನು ಕಂಟೇನ್ಮೆಂಟ ವಲಯಗಳೆಂದು ಘೋಷಿಸಲಾಗಿದ್ದು, ಅರ್ಜಿದಾರರು ಸಾರ್ವಜನಿಕ ಸಾರಿಗೆಯ ಲಭ್ಯತೆ ಮತ್ತು ಕಂಟೇನ್ಮೆಂಟ ವಲಯಗಳಲ್ಲಿನ ವಿದ್ಯಾರ್ಥಿಗಳ ದುಃಸ್ಥಿತಿಯ ಬಗ್ಗೆ ವಾದಿಸಿದರು. ಇದಲ್ಲದೆ, ಅಂತರ್ರಾಜ್ಯ ಪ್ರಯಾಣದ ಬಗ್ಗೆಯೂ ಉಲ್ಲೇಖಿಸಲಾಗಿತ್ತು.

ಇದರ ಬಗ್ಗೆ ರಾಜ್ಯವು ತಕ್ಷಣ ಮರುಪರಿಶೀಲಿಸಬೇಕು ಮತ್ತು ಜುಲೈ 29 ರ ಮಧ್ಯಾಹ್ನದೊಳಗೆ ತನ್ನ ನಿರ್ಧಾರವನ್ನು ದಾಖಲೆಯಲ್ಲಿ ಇಡಬೇಕು ಎಂದು ನ್ಯಾಯಾಲಯ ಆದೇಶಿಸಿದೆ. “ಅರ್ಜಿದಾರರು ಬಹಳ ತಡವಾಗಿ ನ್ಯಾಯಾಲಯವನ್ನು ಸಂಪರ್ಕಿಸಿದ್ದಾರೆ ಎಂಬುದು ನಿಜ. ಆದರೆ COVID-19 ಪ್ರಕರಣಗಳ ತೀವ್ರ ಏರಿಕೆಯನ್ನು ಪರಿಗಣಿಸಿ, ರಾಜ್ಯ ಸರ್ಕಾರವು ಕೆ-ಸಿಇಟಿ ಪರೀಕ್ಷೆಯನ್ನು ನಡೆಸುವ ನಿರ್ಧಾರವನ್ನು ತಕ್ಷಣ ಮರುಪರಿಶೀಲಿಸಬೇಕಾಗಿದೆ. ಕೊರೋನಾ ಭೀತಿಯಿಂದಾಗಿ ವಿದ್ಯಾರ್ಥಿಗಳು ಪರೀಕ್ಷೆಯಿಂದ ದೂರ ಉಳಿಯುವ ಸಾಧ್ಯತೆಯಿದೆ ” ಎಂದಿದೆ.

LEAVE A REPLY

Please enter your comment!
Please enter your name here