ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ, ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿಯು 15,000 ಕೋಟಿ ರೂ.ಗಳ ಮೌಲ್ಯದ “ಪಶುಸಂಗೋಪನೆ ಮೂಲಸೌಕರ್ಯ ಅಭಿವೃದ್ಧಿ ನಿಧಿ” (ಎಎಚ್ಐಡಿಎಫ್) ಸ್ಥಾಪಿಸಲು ಅನುಮೋದನೆ ನೀಡಿದೆ. ಆರ್ಥಿಕ ನಿಧಿಯನ್ನು ಪುನರುಜ್ಜೀವನಗೊಳಿಸಲು, ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಘೋಷಿಸಿದ ಆತ್ಮ ನಿರ್ಭರ ಭಾರತ್ ಅಭಿಯಾನ್ ಪ್ಯಾಕೇಜಿನ ಒಂದು ಭಾಗ ಇದಾಗಿದೆ.
ಪಶುಸಂಗೋಪನೆ ಮೂಲಸೌಕರ್ಯ ಅಭಿವೃದ್ಧಿ ನಿಧಿಯು ಡೈರಿ ಮತ್ತು ಮಾಂಸ ಸಂಸ್ಕರಣೆ ಮತ್ತು ಮೌಲ್ಯವರ್ಧನೆ ಮೂಲಸೌಕರ್ಯ ಮತ್ತು ಖಾಸಗಿ ವಲಯದಲ್ಲಿ ಪಶು ಆಹಾರ ಘಟಕವನ್ನು ಸ್ಥಾಪಿಸಲು ಹೂಡಿಕೆಗೆ ಅಗತ್ಯವಾದ ಪ್ರೋತ್ಸಾಹವನ್ನು ಒದಗಿಸುತ್ತದೆ.