ಕೇರಳದಲ್ಲಿ ಏಕದಿನ ಗರಿಷ್ಟ : ಒಂದೇ ದಿನ 300ಕ್ಕೂ ಅಧಿಕ ಸೋಂಕಿತರ ವರದಿ!

0
53

ಇಂದು ಕೇರಳದಲ್ಲಿ 301 ಕೊರೋನಾ ಸೋಂಕಿತರ ವರದಿಯಾಗುವ ಮೂಲಕ ರಾಜ್ಯದಲ್ಲಿ ಮೊದಲ ಬಾರಿಗೆ 300ಕ್ಕೂ ಅಧಿಕ ಪ್ರಕರಣಗಳು ದಾಖಲಾದಂತಿದೆ.

301 ಪ್ರಕರಣಗಳಲ್ಲಿ 99 ಸೋಂಕಿತರು ವಿದೇಶದಿಂದ ಬಂದವರಾಗಿದ್ದು, 95 ಇತರ ರಾಜ್ಯಗಳಿಂದ ಬಂದವರು ಮತ್ತು 90 ಕೇಸ್ ಗಳು ಇತರ ಪ್ರಕರಣಗಳೊಂದಿಗಿನ ಸಂಪರ್ಕದ ಮೂಲಕ ಬಂದಿರುತ್ತದೆ. ಇದುವರೆಗೆ ಕೇರಳದಲ್ಲಿ 6196 ಸೋಂಕಿತರ ವರದಿಯಾಗಿದ್ದು ,2605 ಆಕ್ಟಿವ್ ಪ್ರಕರಣಗಳು ಇವೆ. 3559 ಮಂದಿ ಗುಣಮುಖರಾಗಿದ್ದಾರೆ. 28 ಕೊರೊನಾ ರೋಗಿಗಳು ಸಾವನ್ನಪ್ಪಿದ್ದಾರೆ.

ಇಂದು ರಾಜಧಾನಿ ತಿರುವನಂತಪುರದಲ್ಲಿ 64 ಪ್ರಕರಣಗಳು ವರದಿಯಾಗಿದೆ. ಇದೇ ಮೊದಲ ಬಾರಿಗೆ ಈ ಜಿಲ್ಲೆಯಲ್ಲಿ ಸೋಂಕಿತರ ವರದಿಯಾಗಿರುತ್ತದೆ. ರಾಜ್ಯದಲ್ಲಿ ಮಲ್ಲಪುರಂ ಜಿಲ್ಲೆಯಲ್ಲಿ ಅತೀ ಹೆಚ್ಚು (801) ಸೋಂಕಿತರಿದ್ದಾರೆ. ಪಾಲಕ್ಕಾಡ್ (698) ಮತ್ತು ಕಣ್ಣೂರು (641) ನಂತರದ ಸ್ಥಾನದಲ್ಲಿದೆ.

LEAVE A REPLY

Please enter your comment!
Please enter your name here