ಕೇರಳದಲ್ಲಿ ತಿಂಗಳ ಎಲ್ಲಾ ಶನಿವಾರ ಬ್ಯಾಂಕ್ ಬಂದ್

0
143
Tap to know MORE!

ತಿರುವನಂತಪುರಂ: ಕೊರೊನಾ ಮುಂಜಾಗ್ರತೆಗಾಗಿ ನಾಳೆಯಿಂದ ಪ್ರತಿ ಶನಿವಾರ ಕೇರಳ ರಾಜ್ಯದಲ್ಲಿ ಬ್ಯಾಂಕ್ ರಜಾ ದಿನಗಳಾಗಿರುತ್ತವೆ. ಕೋವಿಡ್ ಮುಂಜಾಗೃತಿ ಕ್ರಮದ ಭಾಗವಾಗಿ ಕೇರಳ ಸರ್ಕಾರ ಈ ಆದೇಶ ಹೊರಡಿಸಿದೆ.

ಎರಡನೇ ಮತ್ತು ನಾಲ್ಕನೇ ಶನಿವಾರ ಈಗಾಗಲೇ ಬ್ಯಾಂಕ್ ರಜೆ ಇದ್ದು, ಇನ್ನು ಮುಂದಿನ ಸೂಚನೆ ಬರುವವರೆಗೆ ತಿಂಗಳ ಎಲ್ಲಾ ಶನಿವಾರಗಳಂದು ರಜೆ ಘೋಷಿಸಲಾಗಿದೆ.

ಬ್ಯಾಂಕ್ ಕಾರ್ಯಾಚರಣೆ ದಿನಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಮತ್ತು ಇತರ ಸುರಕ್ಷತಾ ಮುನ್ನೆಚ್ಚರಿಕೆಗಳನ್ನು ಪಾಲಿಸುವಂತೆ ಎಲ್ಲಾ ಬ್ಯಾಂಕ್ ವ್ಯವಸ್ಥಾಪಕರಿಗೆ ಸರಕಾರ ನಿರ್ದೇಶನ ನೀಡಿದೆ.

ಕೊರೊನಾ ಸೋಂಕು ವ್ಯಾಪಿಸುವಿಕೆ ಹಿನ್ನೆಲೆಯಲ್ಲಿ ಇತರ ಸರಕಾರಿ ಸಂಸ್ಥೆಗಳಂತೆ ಬ್ಯಾಂಕುಗಳಿಗೂ ಶನಿವಾರ ರಜೆ ನೀಡುವಂತೆ ಬ್ಯಾಂಕ್ ಸಿಬ್ಬಂದಿಗಳ ಸಂಘಟನೆ ಬೇಡಿಕೆ ಇಟ್ಟಿತ್ತು ಇದರ ಫಲವಾಗಿ ನಾಳೆಯಿಂದ ಎಲ್ಲಾ ಶನಿವಾರಗಳಂದು ಬ್ಯಾಂಕುಗಳು ತೆರೆಯದು ಎಂದು ರಾಜ್ಯ ಮುಖ್ಯ ಕಾರ್ಯದರ್ಶಿ ವಿಶ್ವಾಸ್ ಮೆಹ್ತಾ ಹೇಳಿದ್ದಾರೆ.

LEAVE A REPLY

Please enter your comment!
Please enter your name here