ತಿರುವನಂತಪುರ: ಹೊರ ರಾಜ್ಯಗಳಿಂದ ಕೇರಳಕ್ಕೆ ಬರುವ ಯಾವುದೇ ವ್ಯಕ್ತಿಯು 7 ದಿನಗಳಿಗಿಂತ ಹೆಚ್ಚು ಕಾಲ ತಂಗುವಂತಿಲ್ಲ ಎಂದು ರಾಜ್ಯ ಸರಕಾರ ಅಂತರರಾಜ್ಯ ಪ್ರಯಾಣಿಕರಿಗೆ ಸೂಚಿಸಿದೆ.
ವ್ಯಾಪಾರ ಹಾಗೂ ಕಚೇರಿ ಸಂಬಂಧಿತ ಕೆಲಸ, ವೈದ್ಯಕೀಯ ಮತ್ತು ಕೋರ್ಟ್ ವ್ಯವಹಾರ ಹಾಗೂ ಶಿಕ್ಷಣಕ್ಕೆ ಸಂಬಂಧಿಸಿದ ಕಾರ್ಯಗಳಿಗೆ ಬರುವವರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಪ್ರವಾಸಿಗರಿಗೆ ಅನುಮತಿ ನೀಡಲಾಗಿಲ್ಲ.
ಕೇರಳ ಪ್ರಯಾಣಿಸುವವರು ಕೋವಿಡ್ 19 ಜಾಗ್ರತ ಪೋರ್ಟಲ್ ನಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು. ಭೇಟಿ ನೀಡುವ ಉದ್ದೇಶ, ತಂಗುವ ಸ್ಥಳದ ವಿವರವನ್ನು ನಮೂದಿಸಬೇಕು. ಈ ಮಾಹಿತಿ ಅಧರಿಸಿಯೇ ಜಿಲ್ಲಾಧಿಕಾರಿಗಳು ಪಾಸ್ ಜಾರಿ ಮಾಡುತ್ತಾರೆ. 8ನೇ ದಿನ ಕಡ್ಡಾಯವಾಗಿ ಹಿಂತಿರುಗಬೇಕು.