ಕೇರಳದ ಗ್ರಾಮವೊಂದಕ್ಕೆ ಕಮಾಂಡೋ ಕಾವಲು

0
172
Tap to know MORE!

ತಿರುವನಂತಪುರಂ: ಕೇರಳದ ತಿರುವನಂತಪುರಂನ ಗ್ರಾಮವೊಂದು ಈಗ ಕಮಾಂಡೋಗಳ ಕಣ್ಗಾವಲಿನಲ್ಲಿದೆ. ಸುಮಾರು 25ರಷ್ಟು ಕಮಾಂಡೋಗಳನ್ನು ಈ ಗ್ರಾಮದಲ್ಲಿ ನೇಮಿಸಲಾಗಿದೆ.

ಇಲ್ಲಿನ ಪೂಂಥುರಾ ಗ್ರಾಮದಲ್ಲಿ ಒಂದಕ್ಕಿಂತ ಹೆಚ್ಚು ಕೊರೊನಾ ಸೂಪರ್ ಸ್ಪ್ರೆಡರ್ ಗಳು ಪತ್ತೆಯಾದ ಹಿನ್ನಲೆಯಲ್ಲಿ ಸ್ಥಳೀಯ ಮಟ್ಟದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹಬ್ಬಿದೆ. ಈ ಗ್ರಾಮವು ಕೇರಳದ ಮೊದಲ ಕೊರೊನಾ ಕ್ಲಸ್ಟರ್ ಆಗುವ ಸಂದೇಹವನ್ನು ತಜ್ಞರು ವ್ಯಕ್ತಪಡಿಸಿದ್ದಾರೆ.

ಹೀಗಾಗಿ ಇಲ್ಲಿ ಕಮಾಂಡೋಗಳನ್ನು ನಿಯೋಜಿಸಲಾಗಿದೆ. ಜತೆಗೆ, ದಿನದ 24 ಗಂಟೆಯೂ ಆಂಬ್ಯುಲೆನ್ಸ್ ಗಳು, ಪೊಲೀಸ್ ವಾಹನಗಳು ಇಲ್ಲಿನ ವಾರ್ಡ್ ಗಳಲ್ಲಿ ಸಂಚರಿಸುತ್ತವೆ. ಕಳೆದ 5 ದಿನಗಳಲ್ಲಿ 600 ಮಂದಿಯ ಪರೀಕ್ಷೆ ನಡೆಸಲಾಗಿದ್ದು ಈ ಪೈಕಿ 119 ವರದಿಗಳು ಪಾಸಿಟಿವ್ ಬಂದಿದೆ. ಒಟ್ಟಿನಲ್ಲಿ ಸೋಂಕು ಇನ್ನಷ್ಟು ಮಂದಿಗೆ ವ್ಯಾಪಿಸದಂತೆ ಕ್ರಮ ಕೈಗೊಳ್ಳಲಾಗುತ್ತಿದೆ.

LEAVE A REPLY

Please enter your comment!
Please enter your name here