ಸೋಂಕಿತೆಯನ್ನು ಆಸ್ಪತ್ರೆಗೆ ಕರೆದೊಯ್ಯುವ ಬದಲು ಅತ್ಯಾಚಾರವೆಸಗಿದ ಆಂಬುಲೆನ್ಸ್ ಚಾಲಕ!

0
272
Tap to know MORE!

ತಿರುವನಂತಪುರಂ: ಕೇರಳದ ರಾಜಧಾನಿಯಿಂದ 100 ಕಿ.ಮೀ ಉತ್ತರದ ಪಥನಮತ್ತಟ್ಟಾ ಜಿಲ್ಲೆಯಲ್ಲಿ ಶನಿವಾರ ತಡರಾತ್ರಿ ಆಂಬ್ಯುಲೆನ್ಸ್ ಚಾಲಕರಿಂದ ಕೋವಿಡ್-19 ಸೋಂಕಿತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆರೋಪದ ಮೇಲೆ ಚಾಲಕ ನೌಫಲ್‌ನನ್ನು ಈಗಾಗಲೇ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪಾಂಡಲಂ ಪೊಲೀಸ್ ಠಾಣೆಯ ಅಧಿಕಾರಿಗಳ ಪ್ರಕಾರ, ಶನಿವಾರ ತಡರಾತ್ರಿ, ಆರೋಪಿಯು ಇಬ್ಬರು ಸೋಂಕಿತರನ್ನು – ವೃದ್ಧ ಮಹಿಳೆ ಮತ್ತು 19 ವರ್ಷದ ಯುವತಿ – ಅತ್ಯಾಚಾರದಿಂದ ಬದುಕುಳಿದವರನ್ನು ಆಂಬುಲೆನ್ಸ್‌ನಲ್ಲಿ ವಿವಿಧ ಆಸ್ಪತ್ರೆಗಳಿಗೆ ಕರೆದೊಯ್ಯುತ್ತಿದ್ದಾಗ ಅತ್ಯಾಚಾರ ಎಸಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಮೊದಲಿಗೆ, ವೃದ್ಧ ಮಹಿಳೆಯನ್ನು ಚಾಲಕನು ಗಾಡಿಯಿಂದ ಕೆಳಗಿಳಿಸಿ, ಬಳಿಕ ಯುವತಿಯನ್ನು ಪಂಡಲಂನ ಆಸ್ಪತ್ರೆಗೆ ಕರೆದೊಯ್ಯಬೇಕಾಗಿತ್ತು. “ಇದರ ಬದಲಿಗೆ, ಆಂಬ್ಯುಲೆನ್ಸ್ ಚಾಲಕನು ವಾಹನವನ್ನು ಒಂದು ಮೈದಾನದ ಕಡೆಗೆ ತಿರುಗಿಸಿ ಯುವತಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ” ಎಂದು ಪೊಲೀಸರು ತಿಳಿಸಿದ್ದಾರೆ.

“ಚಾಲಕನು ಅತ್ಯಾಚಾರ ಎಸಗಿದ್ದು ಮಾತ್ರವಲ್ಲದೇ ಇದರ ಬಗ್ಗೆ ಯಾರಿಗಾದರೂ ಬಹಿರಂಗಪಡಿಸಿದರೆ ಅವಳು ಇನ್ನಷ್ಟು ಭೀಕರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಒಡ್ಡಿದ್ದಾನೆ” ಎಂದು ಆಸ್ಪತ್ರೆಗೆ ದಾಖಲಾದ ನಂತರ ಘಟನೆಯ ಬಗ್ಗೆ ಅವರು ವೈದ್ಯರಿಗೆ ತಿಳಿಸಿದರು.

ಬಳಿಕ ನಡೆದ, ವೈದ್ಯಕೀಯ ಪರೀಕ್ಷೆಯಲ್ಲಿ ಲೈಂಗಿಕ ದೌರ್ಜನ್ಯ ಎಸಗಿರುವುದು ದೃಢಪಟ್ಟಿದೆ.

ಕೊಲೆ ಯತ್ನ ಸೇರಿದಂತೆ ಹಲವಾರು ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿ ನೌಫಲ್ (29) ಭಾಗಿಯಾಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

LEAVE A REPLY

Please enter your comment!
Please enter your name here