ಕೇರಳದ ಕೊಚ್ಚಿ ನಗರ ಪೊಲೀಸ್ ವ್ಯಾಪ್ತಿಯಲ್ಲಿ 14 ವರ್ಷದ ಬಾಲಕಿ ಗ್ಯಾಂಗ್ ರೇಪ್ ಗೆ ಒಳಗಾದ ಘಟನೆ ಬೆಳಕಿಗೆ ಬಂದಿದೆ. ಘಟನೆಗೆ ಸಂಬಂಧಿಸಿ ಉತ್ತರ ಪ್ರದೇಶದ ಮೂವರು ಕಾರ್ಮಿಕರನ್ನು ಆರೋಪಿಗಳೆಂದು ಬಂಧಿಸಲಾಗಿದೆ.
ಲಾಕ್ಡೌನ್ ಸಮಯದಲ್ಲಿ ಅತ್ಯಾಚಾರವೆಸಗಲಾಗಿದ್ದು ತಡವಾಗಿ ಬೆಳಕಿಗೆ ಬಂದಿದೆ. ಮನೆಯ ಹತ್ತಿರದಲ್ಲಿ ವಾಸವಿದ್ದ ಉತ್ತರ ಪ್ರದೇಶದ ಕಾರ್ಮಿಕರು ಬಾಲಕಿಯ ಹೆತ್ತವರು ಮನೆಯಲ್ಲಿ ಇಲ್ಲದೇ ಇರುವ ಸಮಯದಲ್ಲಿ ಹಲವು ಬಾರಿ ಅತ್ಯಾಚಾರ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನು ನೋಡಿ : ಬಾಲಕಿಯ ಅತ್ಯಾಚಾರಗೈದು ಇಟ್ಟಿಗೆಯಿಂದ ಕೊಲೆಗೈದ ಕಾಮುಕರು
ಬಾಲಕಿಯ ಶಾಲೆಯಲ್ಲಿ ನಡೆಸಿದ ಕೌನ್ಸೆಲಿಂಗ್ನಲ್ಲಿ ಆಕೆಯ ನಡತೆಯಲ್ಲಿ ಬದಲಾವಣೆ ಕಂಡು ಬಂದ ಹಿನ್ನೆಲೆಯಲ್ಲಿ ಶಿಕ್ಷಕರು ಈ ವಿಷಯವನ್ನು ತಿಳಿದುಕೊಂಡಿದ್ದಾರೆ. ಇನ್ನುಳಿದ ಆರೋಪಿಗಳು ರಾಜ್ಯವನ್ನೇ ಬಿಟ್ಟು ಹೋಗಿರಬಹುದೆಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ. ಆರೋಪಿಗಳ ಪತ್ತೆಗೆ ಶೀಘ್ರ ಕಾರ್ಯಾಚರಣೆ ನಡೆಸಲಾಗುತ್ತಿದೆ.
[…] ಇದನ್ನೂ ನೋಡಿ : ಅಪ್ರಾಪ್ತೆಯ ಮೇಲೆ ಸಾಮೂಹಿಕ ಅತ್ಯಾಚಾರ […]