ಕೇರಳದಿಂದ ಕರ್ನಾಟಕ ಪ್ರವೇಶಿಸುವವರಿಗೆ ನೆಗೆಟಿವ್ ವರದಿ ಕಡ್ಡಾಯ | ದಿನನಿತ್ಯದ ಪ್ರಯಾಣಿಕರಿಗೆ 15 ದಿನಕ್ಕೊಮ್ಮೆ ಟೆಸ್ಟ್!

0
170
Tap to know MORE!

ಬೆಂಗಳೂರು: ಕೇರಳದಿಂದ ಕರ್ನಾಟಕ ಪ್ರವೇಶಕ್ಕೆ ಪ್ರತ್ಯೇಕ ಮಾರ್ಗಸೂಚಿ ರಚಿಸಿರುವ ಕರ್ನಾಟಕ ಸರ್ಕಾರ ವಿಮಾನ, ರೈಲು, ಬಸ್, ಕಾರು, ಟ್ಯಾಕ್ಸಿ ಸೇರಿದಂತೆ ಯಾವುದೇ ಮಾರ್ಗದ ಪ್ರಯಾಣಿಕರಿಗೆ 72 ಗಂಟೆಗಳ ಒಳಗಿನ ನೆಗೆಟಿವ್ ರಿಪೋರ್ಟ್ ಕಡ್ಡಾಯಗೊಳಿಸಿದೆ. ದಕ್ಷಿಣಕನ್ನಡ, ಕೊಡಗು, ಮೈಸೂರು, ಚಾಮರಾಜನಗರ ಜಿಲ್ಲೆಗಳ ಗಡಿಯಲ್ಲಿ ತಪಾಸಣೆಗೆ ವಿಶೇಷ ಚೆಕ್‌ಪೋಸ್ಟ್ ರಚಿಸಲು ಆದೇಶಿಸಲಾಗಿದೆ.

KSRTC ಹೆಸರು ಕೇರಳ ಪಾಲು, ವಾಸ್ತವಕ್ಕೆ ದೂರವಾದ ಸಂಗತಿ: ಕೆಎಸ್‌ಆರ್‌ಟಿಸಿ ಸ್ಪಷ್ಟನೆ

ನಿತ್ಯ ಕರ್ನಾಟಕ ಪ್ರವೇಶಿಸುವ ವಿದ್ಯಾರ್ಥಿಗಳು, ವ್ಯವಹಾರಸ್ಥರು ಮತ್ತು ಇತರರು 15 ದಿನಕ್ಕೊಮ್ಮೆ ಆರ್​ಟಿಪಿಸಿಆರ್ ಪರೀಕ್ಷೆಗೆಗೆ ಒಳಪಡಬೇಕು. 2 ಸಲ ಲಸಿಕೆ ಪಡೆದಿರುವವರಿಗೆ, 2 ವರ್ಷದ ಕೆಳಗಿನ ಮಕ್ಕಳಿಗೆ ಹೆಲ್ತ್ ಕೇರ್ ಸಿಬ್ಬಂದಿ, ಸಾಂವಿಧಾನಿಕ ಹುದ್ದೆಯಲ್ಲಿರುವವರಿಗೆ ಆರ್‌ಟಿಪಿಸಿಆರ್ ನೆಗೆಟಿವ್ ರಿಪೋರ್ಟ್‌ನಿಂದ ವಿನಾಯಿತಿ ನೀಡಲಾಗಿದೆ.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

LEAVE A REPLY

Please enter your comment!
Please enter your name here