ದುಬೈ: ಕೇರಳ ಮೂಲದ ಕಾರು ಚಾಲಕನಿಗೆ ₹40 ಕೋಟಿ ಬಂಪರ್ ಲಾಟರಿ!

0
186
Tap to know MORE!

ದುಬೈ: ಇಲ್ಲಿ ಕಾರು ಚಾಲಕರಾಗಿ ಕಾರ್ಯನಿರ್ವಹಿಸುತ್ತಿರುವ ಕೇರಳ ಮೂಲದ ರಂಜಿತ್‌ ಸೋಮರಾಜನ್‌ ಮತ್ತು ಅವರ 9 ಸ್ನೇಹಿತರು ದುಬೈನಲ್ಲಿ ಭರ್ಜರಿ ₹ 40 ಕೋಟಿ ಮೊತ್ತದ ಲಾಟರಿ ಗೆದ್ದಿದ್ದಾರೆ.

ದುಬೈ ಸರ್ಕಾರ ನಡೆಸುವ ಲಾಟರಿ ಸ್ಪರ್ಧೆಯಲ್ಲಿ ರಂಜಿತ್‌ ಮತ್ತು ವಿವಿಧ ದೇಶಗಳಿಗೆ ಸೇರಿದ 10 ಜನರು ಸೇರಿ ತಲಾ 2000 ರು. ತೆತ್ತು ಬಂಪರ್‌ ಲಾಟರಿಯ ಟಿಕೆಟ್‌ ಖರೀದಿಸಿದ್ದರು. ನಾನು ಯಾವಾಗಲಾದರೂ 2 ಮತ್ತು 3ನೇ ಬಹುಮಾನ ಬರಬಹುದು ಎಂದು ನಿರೀಕ್ಷಿಸುತ್ತಿದ್ದೆ. ಇದಕ್ಕಾಗಿಯೇ ಕಳೆದ 3 ವರ್ಷಗಳಿಂದ ಟಿಕೆಟ್‌ ಖರೀದಿಸುತ್ತಿದ್ದೆ. ಒಂದಲ್ಲಾ ಒಂದು ದಿನ ಲಾಟರಿ ಹೊಡೆಯಬಹುದು ಎಂಬ ಆಸೆ ಇತ್ತು. ಆದರೆ ಬಂಪರ್‌ ಬಹುಮಾನದ ನಿರೀಕ್ಷೆ ಇರಲಿಲ್ಲ ಎಂದು ರಂಜಿತ್ ಹೇಳಿದರು.

ಕೋವಿಡ್ ಲಸಿಕೆ ಪಡೆದವರು ಡೆಲ್ಟಾ ರೂಪಾಂತರದಿಂದ ಹೆಚ್ಚಿನ ರಕ್ಷಣೆಯನ್ನು ಪಡೆಯುತ್ತಾರೆ: ಐಸಿಎಂಆರ್

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ಇದೀಗ, ಒಟ್ಟು 10 ಮಂದಿ ಸ್ನೇಹಿತರಿಗೆ ತಲಾ 4 ಕೋಟಿ ರು.ನಷ್ಟು ಹಣ ಸಿಗಲಿದೆ. 2008ರಿಂದಲೂ ಅವರು ದುಬೈನಲ್ಲಿ ಟ್ಯಾಕ್ಸಿ ಸೇರಿದಂತೆ ವಿವಿಧ ವಾಹನಗಳ ಚಾಲಕನಾಗಿ ಕೆಲಸ ಮಾಡುತ್ತಿದ್ದರು. ಕಳೆದ ವರ್ಷ ಕೋವಿಡ್‌ ಹಿನ್ನೆಲೆಯಲ್ಲಿ ಅವರ ಸಂಬಳ ಕಡಿತಗೊಂಡಿತ್ತು. ಹೀಗಾಗಿ 9 ಜನರೊಂದಿಗೆ ಸೇರಿ ಜೂನ್‌ 29ರಂದು ಲಾಟರಿ ಖರೀದಿಸಿದ್ದರು.

LEAVE A REPLY

Please enter your comment!
Please enter your name here