ಕಾಸರಗೋಡು: ಬಿಜೆಪಿ ಜಿಲ್ಲಾಧ್ಯಕ್ಷ ಶ್ರೀಕಾಂತ್ ಸಲ್ಲಿಸಿದ್ದ ಗಡಿ ತೆರವುಗೊಳಿಸುವಂತೆ ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಕೇರಳ ಸರ್ಕಾರಕ್ಕೆ ಮಧ್ಯಂತರ ಆದೇಶ ನೀಡಿದೆ. ಈ ಮೂಲಕ ಕೇರಳ ಸರ್ಕಾರಕ್ಕೆ ಗಡಿ ಬಂದ್ ತೆರವುಗೊಳಿಸುವಂತೆ ಹೈಕೋರ್ಟ್ ಸೂಚನೆ ನೀಡಿದೆ.
ಸುಳ್ಯದ ಜಾಲ್ಸೂರು, ಪಾಣತ್ತೂರು, ಮಾಣಿಮೂಲೆ, ಸಾರಡ್ಕ, ಸೇರಿ ನಾಲ್ಕು ಗಡಿಗಳಲ್ಲಿ ವಿಧಿಸಲಾಗಿರುವ ಬಂದ್ ತೆರವುಗೊಳಿಸುವಂತೆ ಸೂಚನೆ ನೀಡಿದೆ. ಎರಡು ದಿನಗಳ ಹಿಂದೆ ದೇಶಾದ್ಯಂತ ರಾಜ್ಯಗಳ ಬಂದ್ ತೆರವುಗೊಳಿಸುವಂತೆ ಹೊಸ ಮಾರ್ಗಸೂಚಿ ನೀಡಿತ್ತು. ಆದರೂ ಕೇರಳ ಸರ್ಕಾರ ಗಡಿ ಬಂದ್ ತೆರವುಗೊಳಿರಲಿಲ್ಲ. ಇದೀಗ ಈ ಆದೇಶದಿಂದ ದ.ಕ. ಜಿಲ್ಲಾ ವಾಹನ ಸಂಚಾರಕ್ಕೆ ಅನುವು ದೊರೆತಂತಾಗಿದೆ. ಕಾಸರಗೋಡು ದ.ಕ. ಜಿಲ್ಲೆಯ ಗಡಿ ಬಾಗದ ಜನತೆಗೆ ಅನುಕೂಲವಾಗಲಿದೆ