ಕೇರಳ : ಸರ್ಕಾರಿ ಕಛೇರಿಯಲ್ಲಿ ಕಾಣಿಸಿಕೊಂಡ ಬೆಂಕಿ – ಪ್ರಮುಖ ಫೈಲ್‌ಗಳು ನಾಶ?

0
208
Tap to know MORE!

ತಿರುವನಂತಪುರಂ: ಕೇರಳ ಕಾರ್ಯದರ್ಶಿ ಕಛೇರಿಯಲ್ಲಿ ಇಂದು ಬೆಂಕಿ ಕಾಣಿಸಿಕೊಂಡಿದ್ದು, ಕೆಲವು ದಾಖಲೆಗಳು ಸುಟ್ಟು ಹೋಗಿದೆ ಹಾಗೂ ರಾಜಕೀಯ ವಿವಾದಕ್ಕೆ ನಾಂದಿ ಹಾಡಿದೆ. ನಾರ್ತ್ ಸ್ಯಾಂಡ್‌ವಿಚ್ ಬ್ಲಾಕ್‌ನ ಪ್ರೋಟೋಕಾಲ್ ಕಚೇರಿಯಲ್ಲಿ ಈ ಘಟನೆ ನಡೆದಿದ್ದು, ಹಲವಾರು ಊಹಾಪೋಹಗಳು ಮತ್ತು ಆರೋಪಗಳನ್ನು ಹುಟ್ಟುಹಾಕಿದೆ.

ಘಟನೆಯಲ್ಲಿ ಯಾರೂ ಗಾಯಗೊಂಡಿಲ್ಲ. ಆದರೆ ಕೆಲವು ದಾಖಲೆಗಳು ಸುಟ್ಟುಹೋಗಿದೆ.

ಕೇರಳ, ಬೆಂಕಿ ಅವಘಡ,
ಸುಟ್ಟು ಹೋಗಿರುವ ದಾಖಲೆ ಪತ್ರಗಳು!

ಅವಘಡದಲ್ಲಿ ಯಾವುದೇ ಪ್ರಮುಖ ದಾಖಲೆಗಳಿಗೂ ಹಾನಿಯಾಗಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. “ಅತಿಥಿ ಗೃಹಗಳಲ್ಲಿನ ಕೋಣೆಗಳ ಬುಕಿಂಗ್‌ಗೆ ಸಂಬಂಧಿಸಿದ ಕೆಲವು ಫೈಲ್‌ಗಳು ಮಾತ್ರ ನಾಶವಾಗಿವೆ. ಕಂಪ್ಯೂಟರ್‌ನ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದೆ” ಎಂದು ಜನರಲ್ ಅಡ್ಮಿನಿಸ್ಟ್ರೇಷನ್ ವಿಭಾಗದ ಕಾರ್ಯದರ್ಶಿ ಪಿ ಹನಿ ಹೇಳಿದರು

ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಿದರು. ಅಲ್ಲಿ ಕೆಲಸ ಮಾಡುವ ಉದ್ಯೋಗಿಯೊಬ್ಬರಲ್ಲಿ ಇತ್ತೀಚೆಗೆ ಕೊರೋನಾ ದೃಢಪಟ್ಟ ಹಿನ್ನೆಲೆಯಲ್ಲಿ, ಕಚೇರಿಯು ಕನಿಷ್ಠ ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಿಸುತ್ತಿತ್ತು.

ಚಿನ್ನದ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದ ಕೆಲವು ಸಾಕ್ಷ್ಯಗಳನ್ನು ನಾಶಮಾಡುವ ಉದ್ದೇಶಪೂರ್ವಕ ಪ್ರಯತ್ನವಾಗಿದೆ ಎಂದು ರಾಜ್ಯ ವಿಧಾನಸಭೆಯಲ್ಲಿ ಪ್ರತಿಪಕ್ಷದ ನಾಯಕ ರಮೇಶ್ ಚೆನ್ನಿಥಾಲಾ ಆರೋಪಿಸಿದ್ದಾರೆ.

ಬಿಜೆಪಿ ರಾಜ್ಯ ಅಧ್ಯಕ್ಷ ಕೆ.ಸುರೇಂದ್ರನ್ ಕೂಡ ಇದೇ ರೀತಿಯ ಆರೋಪಗಳನ್ನು ಮಾಡಿದ್ದಾರೆ. ಘಟನೆ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಅವರು ಒತ್ತಾಯಿಸಿದರು.

LEAVE A REPLY

Please enter your comment!
Please enter your name here