ಕೋವಿಡ್ 19: ಕೇರಳದಲ್ಲಿ ಸುಳ್ಳು ಸಾವಿನ ಲೆಕ್ಕಾಚಾರ | ವರದಿಯಲ್ಲಿದೆ ಭಾರೀ ವ್ಯತ್ಯಾಸ

0
166
Tap to know MORE!

ತಿರುವನಂತಪುರಂ: ಅನೇಕ ರಾಜ್ಯಗಳು ತಮ್ಮಲ್ಲಿ ಸಂಭವಿಸಿದ ವಾಸ್ತವ ಕೋವಿಡ್ 19 ಸಾವುಗಳನ್ನು ಮುಚ್ಚಿಟ್ಟು, ಸುಳ್ಳು ಲೆಕ್ಕಾಚಾರಗಳನ್ನು ನೀಡುತ್ತಿವೆ ಎಂಬ ಆರೋಪದ ನಡುವೆ, ಕೇರಳದಲ್ಲಿಯೂ ಸಾವಿನ ನಿಖರ ಸಂಖ್ಯೆಯನ್ನು ನಮೂದಿಸುವಲ್ಲಿ ಅಧಿಕಾರಿಗಳು ವಿಫಲರಾಗಿರುವುದು ಬೆಳಕಿಗೆ ಬಂದಿದೆ.

ಜೂನ್ 30ರ ವೇಳೆಗೆ, ಅರ್ಹ ವೈದ್ಯರು ಪ್ರಮಾಣ ನೀಡಿರುವ 6,000ಕ್ಕೂ ಅಧಿಕ ಕೋವಿಡ್ 19 ಸಾವುಗಳನ್ನು ರಾಜ್ಯ ಆರೋಗ್ಯ ಇಲಾಖೆ ಅಧಿಕಾರಿಗಳು ಅಧಿಕೃತ ದಾಖಲೆಯಲ್ಲಿ ಸೇರ್ಪಡೆ ಮಾಡಿಲ್ಲ. ಇದು ದಾಖಲಾದ ಕೋವಿಡ್ ಸಾವುಗಳು ಮತ್ತು ಘೋಷಿಸಿದ ಕೋವಿಡ್ ಸಾವುಗಳ ನಡುವೆ ಭಾರಿ ವ್ಯತ್ಯಾಸ ಉಂಟಾಗಲು ಕಾರಣವಾಗಿದೆ.

ಆರ್‌ಟಿಐ ಮೂಲಕ ‘ಟೈಮ್ಸ್ ಆಫ್ ಇಂಡಿಯಾ’ ಪಡೆದಿರುವ ಮಾಹಿತಿಗಳ ಪ್ರಕಾರ, ಮುಖ್ಯ ನೋಂದಣಾಧಿಕಾರಿ ಕಚೇರಿಗೆ (ಜನನ ಮತ್ತು ಮರಣ) ಅನುಗುಣವಾಗಿ ಸ್ಥಳೀಯ ಸಂಸ್ಥೆಗಳು ನೋಂದಾಯಿಸಿರುವ ವಾಸ್ತವ ಕೋವಿಡ್ ಮರಣ ಸಂಖ್ಯೆ ಜೂನ್ ಅಂತ್ಯದವರೆಗೆ 19,584. ಆದರೆ ರಾಜ್ಯ ಸರ್ಕಾರ ಘೋಷಣೆ ಮಾಡಿರುವುದು 13,235 ಸಾವುಗಳು. ಅಂದರೆ ಸುಮಾರು 6,349 ಸಾವುಗಳ ಸಂಖ್ಯೆ ಇಲ್ಲಿ ಲೆಕ್ಕಕ್ಕೆ ಸಿಗುತ್ತಿಲ್ಲ.

ಕೋವಿಡ್ ಸಮಸ್ಯೆಗಳನ್ನು ಎದುರಿಸಲು ಕೇಂದ್ರದಿಂದ ₹23,000 ಕೋಟಿ ಪ್ಯಾಕೇಜ್: ಆರೋಗ್ಯ ಸಚಿವ ಮಾಂಡವಿಯಾ

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ಸಂಬಂಧಿತ ವೈದ್ಯಕೀಯ ಅಧಿಕಾರಿಗಳು ಸೂಚಿತ ಸ್ವರೂಪದಲ್ಲಿ ನೀಡುವ ವರದಿಗಳ ಆಧಾರದಲ್ಲಿ ಕೋವಿಡ್ 19 ಸಾವುಗಳೆಂದು ಮರಣ ಕಾರಣವನ್ನು ದಾಖಲಿಸಲಾಗುತ್ತದೆ ಎಂದು ಮುಖ್ಯ ನೋಂದಣಾಧಿಕಾರಿ (ಜನನ ಮತ್ತು ಮರಣ) ಎಂ. ರಾಮನ್‌ಕುಟ್ಟಿ ಹೇಳಿದ್ದಾರೆ.

ಸ್ಥಳೀಯ ಸಂಸ್ಥೆಗಳಲ್ಲಿ ಕಾನೂನು ಮತ್ತು ಸಾಂಖ್ಯಿಕ, ಹೀಗೆ ಎರಡು ಭಾಗಗಳಲ್ಲಿ ಮರಣ ನೋಂದಣಿ ಮಾಡಲಾಗುತ್ತದೆ. ಅಧ್ಯಯನ ಹಾಗೂ ವಿಶ್ಲೇಷಣೆ ಉದ್ದೇಶಗಳಿಗೆ ರಿಜಿಸ್ಟರ್‌ನಲ್ಲಿ ಮರಣದ ಕಾರಣವನ್ನು ದಾಖಲಿಸಲಾಗುತ್ತದೆ. ಆರ್‌ಟಿಐ ಮೂಲಕ ಕೋವಿಡ್ ಮರಣ ನೋಂದಣಿಯ ವಿವರಗಳನ್ನು ಪಡೆದುಕೊಳ್ಳಲಾಗಿದೆ.

LEAVE A REPLY

Please enter your comment!
Please enter your name here