ಕೇಶ – ಪೋಷ

0
214
Tap to know MORE!

ಇತ್ತೀಚಿನ ದಿನಗಳಲ್ಲಿ ಕೂದಲು ಉದುರುವ ಸಮಸ್ಯೆ ಬಹಳವಾಗಿ ಕಾಣುತ್ತಿದ್ದೇವೆ.ಇನ್ನೂ ಹಲವು ಜಾಹೀರಾತುಗಳಲ್ಲಿ ನೀಳವಾದ ,ರೇಷ್ಮೆಯಂತಹ ಕೇಶರಾಶಿ ನಿಮ್ಮದಾಗಬೇಕೆ? ಈ ತೈಲವನ್ನು ಬಳಸಿ ಎಂದು ಮಾಯಲೋಕಕ್ಕೆ ಕೊಂಡೊಯ್ಯುತ್ತಾರೆ. ಅದೇನೇ ಇರಲಿ ಆದರೆ ಈ ಕೂದಲು ಉದುರುವಿಕೆಗೆ ಹಲವು ಕಾರಣಗಳಿರುತ್ತವೆ.ರಕ್ತಹೀನತೆ,ನಿದ್ರಾಹೀನತೆ, ಕೆಲಸದ ಒತ್ತಡ, ಕೆಲವು ರಾಸಾಯನಿಕ ಉತ್ಪನ್ನಗಳ ಬಳಕೆ ಇತ್ಯಾದಿ.

ಇದರಲ್ಲಿ ಮುಖ್ಯ ಕಾರಣ ಹೊಟ್ಟೆಯೂ ಹೌದು.ಹೊಟ್ಟೆಗೂ ಕೂದಲಿಗೂ ಏನು ಸಂಬಂಧ ಅಂತ ಯೋಚನೆ ಮಾಡಿದರೆ ಇದಕ್ಕೆ ಆಯುರ್ವೇದದ ನೆಲೆಗಟ್ಟು ಇಂತಿವೆ. ಮನುಷ್ಯನ ದೇಹ “ಸಪ್ತಧಾತು”ಗಳಿಂದ ಮಾಡಲ್ಪಟ್ಟಿದೆ. ಅವುಗಳೆಂದರೆ:- ರಸ, ರಕ್ತ, ಮಾಂಸ, ಮಜ್ಜಾ, ಮೇಧಾ,ಅಸ್ಥಿ,ಶುಕ ಈ ಸಪ್ತಧಾತುಗಳಿಗೂ ಉಪಧಾತುಗಳಿವೆ.ಇದರಲ್ಲಿ “ಅಸ್ಥಿ”ಯ ಉಪಧಾತುವೇ ಈ “ಕೇಶ”(ಕೂದಲು).
ಈ ಅಸ್ಥಿ ಇರುವ ಜಾಗ ಹೊಟ್ಟೆಯಲ್ಲಿರುವ ದೊಡ್ಡ ಹಾಗೂ ಸಣ್ಣ ಕರುಳು ಕೂಡುವ ಭಾಗದಲ್ಲಿ ಇದನ್ನು “ಅಸ್ಥಿಧರಾ ಕಲಾ” ಎಂದು ಸಂಸ್ಕೃತದಲ್ಲಿ ಕರೆಯುತ್ತಾರೆ.ಈ ಧಾತುಗಳು ಮೂಳೆ ಹಾಗೂ ಮಜ್ಜೆಗಳಿಗೂ ಸಂಬಂಧಿಸಿದೆ.ಮೂಳೆಗಳಿಗೆ ಯಾ ಕರುಳಿಗೆ ಸಂಬಂಧಿಸಿದ ಖಾಯಿಲೆಗಳು, ಉದಾಹರಣೆಗೆ ವಿಷಮ ಶೀತ ಜ್ವರ(typhoid fever) ಬಂದರೆ ಹೆಚ್ಚಾಗಿ ಕೂದಲು ಉದುರುವುದನ್ನು ಕಾಣುತ್ತೇವೆ. ಇದಕ್ಕೆ ಕಾರಣ ಕರುಳಿನ ಸಂಧಿಯಲ್ಲಿ ಆ ಧಾತುಗಳ ಉತ್ಪನ್ನ ಕಡಿಮೆಯಾದರೆ ಕೂದಲು ಉದುರುವ ಸಮಸ್ಯೆಗೆ ಒಂದು ರೀತಿಯಲ್ಲಿ ಕಾರಣವಾಗುತ್ತದೆ.

ಇದಕ್ಕೆ ಪರಿಹಾರವೇನೆಂದರೆ ನಮ್ಮ “ಆಹಾರದ ಸಮತೋಲನ” ಅಂದ್ರೆ “diet”. ಇಂದಿನ ಆಧುನಿಕ ಯುಗದಲ್ಲಿ ನಾವು diet ಅಂದರೆ ಇಷ್ಟೇ ಆಹಾರ,ವಿಟಮಿನ್, ಪ್ರೋಟೀನ್ ಇಷ್ಟು ಪ್ರಮಾಣದಲ್ಲಿ ತಿನ್ನಬೇಕು ಅನ್ನೋದು. ಆದರೆ ಹಿಂದೆ ಋಷಿ ಮುನಿಗಳು ಈ “ಷಡ್ರಸಯುಕ್ತ ಆಹಾರ”ವನ್ನೇ ಆಹಾರದ ಸಮತೋಲನ (diet) ಎಂದು ಕರೆಯುತ್ತಿದ್ದರು.ಅಂದರೆ ಉಪ್ಪು, ಹುಳಿ, ಖಾರ, ಸಿಹಿ, ಕಹಿ ಮತ್ತು ಒಗರು ಇವೆಲ್ಲವೂ ಸರಿಯಾದ ಪ್ರಮಾಣದಲ್ಲಿ ತಿನ್ನುವುದು.

ಈ ಅಸ್ಥಿ ಧಾತುಗಳ ಉತ್ಪನ್ನಕ್ಕೆ ಮೂಲ ಕಾರಣ “ತಿಕ್ತ” ಅಥವಾ “ಕಹಿ”. ನಮ್ಮ ಆಹಾರದ ಸೇವನೆಯಲ್ಲಿ ಕಹಿ ಇರುವ ಪದಾರ್ಥಗಳು ಉದಾಹರಣೆಗೆ ಹಾಗಲಕಾಯಿ, ಬೇವಿನ ಎಲೆ, ಬಿಲ್ವ ಪತ್ರೆ ಸೇವಿಸದ್ದಲ್ಲಿ ಈ ಕಾರಣದಿಂದಾದ ಕೂದಲು ಉದುರುವಿಕೆಯ ಸಮಸ್ಯೆಯನ್ನು ನಿವಾರಿಸಬಹುದು.ಹಾಗೆಯೇ ಕೂದಲಿನ ಪೋಷಣೆಗೆ ನೈಸರ್ಗಿಕ ತೈಲದ ಬಳಕೆಯೂ ಮುಖ್ಯ!!.

ಜಪ
ಕುಂದಾಪುರ

LEAVE A REPLY

Please enter your comment!
Please enter your name here