ಕೈಬೆರಳಿನ ಚಮತ್ಕಾರ

0
197
Tap to know MORE!

ಮ್ಮಲ್ಲಿ ಕೆಲವರು ದೋಸೆಯನ್ನು, ರೊಟ್ಟಿಯನ್ನು ಚಮಚದಲ್ಲಿ ತಿನ್ನುವವರಿದ್ದಾರೆ.ಒಂದೆಡೆ ಕೈಯಲ್ಲಿ ತಿನ್ನುವುದು ಕೀಳು ಅಂತ ಕೆಲವರು ನೋಡುವವರಿದ್ದರೆ, ಇನ್ನೊಂದೆಡೆ ಎಲ್ಲಿ ತಮ್ಮ ಪ್ರತಿಷ್ಠೆಗೆ ಧಕ್ಕೆ ಬರುವುದೋ ಅಂತ ತಿನ್ನುವ ಶೈಲಿಯನ್ನು ಬದಲಾಯಿಸಿ ಕೊಂಡವರಿದ್ದಾರೆ. ಈ ಕೈಬೆರಳುಗಳಲ್ಲಿ ತಿನ್ನುವುದರ ಹಿನ್ನೆಲೆ ಇಂತಿವೆ.

ಮನುಷ್ಯನ ದೇಹ ಪಂಚಭೂತಗಳಿಂದ ಮಾಡಲ್ಪಟ್ಟಿದೆ. ಪಂಚಭೂತಗಳೆಂದರೆ ಅನಲ(ಬೆಂಕಿ), ಅನಿಲ(ಗಾಳಿ), ಆಕಾಶ,
ಭೂಮಿ,ಸಲಿಲ(ನೀರು). ಇನ್ನೂ ನಮ್ಮ ಕೈ ಬೆರಳುಗಳು ಇದನ್ನೇ ಸೂಚಿಸುತ್ತದೆ. ಹೆಬ್ಬೆರಳು ಅಗ್ನಿಯನ್ನು ಸೂಚಿಸಿದರೆ, ತೋರ್ಬೆರಳು ವಾಯು,ಮಧ್ಯದ ಬೆರಳು ಆಕಾಶ,ಉಂಗುರದ ಬೆರಳು ಪ್ರಥ್ವಿಯನ್ನು ಹಾಗೂ ಕಿರುಬೆರಳು ನೀರನ್ನು ಸೂಚಿಸುತ್ತದೆ ಇದನ್ನೇ ಯೋಗದಲ್ಲಿ “ಮುದ್ರೆ”ಯೆಂದು ಕರೆಯುತ್ತಾರೆ.
ಈ ಕೈಬೆರಳುಗಳ ತುದಿಯಲ್ಲಿ “ಮರ್ಕೆಲ್” (merkel) ಎಂಬ ನರಗಳು ಕೊನೆಗೊಳ್ಳುತ್ತದೆ. ಸಾಮಾನ್ಯವಾಗಿ ಈ ನರಗಳು ಚರ್ಮದ ಮೇಲ್ಭಾಗದಲ್ಲಿರುತ್ತದೆ. ಊಟ ಯಾ ಆಹಾರವನ್ನು ತಿನ್ನುವಾಗ ಹಾಕುವ ಒತ್ತಡದಿಂದ ಸಂದೇಶವು ನರಗಳ‌ ಮೂಲಕ ಜೀರ್ಣಾಂಗಕ್ಕೆ ಹೋಗುವುದರಿಂದ ಪಚನಕ್ರಿಯೆ (digestion) ಬಹಳ ಸುಲಭವಾಗಿ ಆಗುತ್ತದೆ.

ಇನ್ನೂ ಆಯುರ್ವೇದದಲ್ಲಿ ಹೇಳಬೇಕೆಂದರೆ ಮೇಲೆ ತಿಳಿಸಿದಂತೆ ಒಂದೊಂದು ಬೆರಳುಗಳು ಪಂಚಭೂತಗಳ ಶಕ್ತಿಯನ್ನು ಹೊಂದಿದೆ. ಈ ಬೆರಳುಗಳಿಂದ ನಾವು ಷಡ್ರಸ (ಉಪ್ಪು, ಖಾರ, ಹುಳಿ, ಸಿಹಿ, ಕಹಿ, ಒಗರು)ಗಳಿಂದ ಕೂಡಿದ ಆಹಾರವನ್ನು ಮುಟ್ಟುವುದರಿಂದ ಅದಕ್ಕನುಗುಣವಾಗಿ “ಕಿಣ್ವಗಳು” (enzymes) ಬಿಡುಗಡೆಯಾಗಿ, ಜೀರ್ಣಕ್ರಿಯೆಯು ಸರಾಗಾವಾಗಿ ಆಗುತ್ತದೆ.

ಎನ್ ಸುಂದರ್ ರಾಜ್ ಬರೆದಿರುವ “Pearls of Wisdom from Personalities Galore” ಎಂಬ ಕೃತಿಯಲ್ಲಿ ಈ ಕಥೆ ಆಯಲಾಗಿದೆ. ಹಿಂದೆ ನಮ್ಮ ದೇಶದ ಎರಡನೇ ಹಾಗೂ ಮಾಜಿ ರಾಷ್ಟ್ರಪತಿಯಾದ “ಡಾ| ಸರ್ವಪಳ್ಳಿ ರಾಧಾಕೃಷ್ಣನ್” ಲಂಡನ್ ಗೆ ಭೇಟಿ ಕೊಟ್ಟಾಗ ಅಲ್ಲಿನ ಮಾಜಿ ಪ್ರಧಾನಮಂತ್ರಿಯಾದ “ವಿನ್ಸ್ಟನ್ ಚರ್ಚಿಲ್” (Winston Churchill)ರವರು ಒಂದು ಔತಣಕೂಟವನ್ನು ಏರ್ಪಡಿಸಿದ್ದರು.ಊಟದ ಮುಂಚೆ ಪದ್ಧತಿ ಪ್ರಕಾರ ಇಬ್ಬರೂ ಗಣ್ಯ ವ್ಯಕ್ತಿಗಳು ಕೈ ತೊಳೆದು ಊಟಕ್ಕೆ ಕುಳಿತಾಗ, ಚರ್ಚಿಲ್ ರವರು ಚಮಚದಲ್ಲಿ ತಿನ್ನುತ್ತಿರುವಾಗ, ರಾಧಾಕೃಷ್ಣನ್ ರವರು ತಮ್ಮ ಕೈಯಲ್ಲೇ ಆಹಾರ ಸೇವಿಸುತ್ತಾರೆ.ಇದನ್ನು ನೋಡಿದ ಚರ್ಚಿಲ್ ಪ್ರಶ್ನಿಸುತ್ತಾರೆ “ನೀವ್ಯಾಕೆ ಕೈಯಲ್ಲಿ ತಿಂತಾ ಇದ್ದೀರಾ?? ಹೀಗೆ ತಿನ್ನುವುದರಿಂದ ಊಟದ ನಿರ್ಮಲತೆ (hygiene) ಹಾಗೂ ಶುಚಿತ್ವ ಕಡಿಮೆಯಾಗುತ್ತದೆ ಎಂದಾಗ ಅದಕ್ಕುತ್ತರವಾಗಿ ರಾಧಾಕೃಷ್ಣನ್ ರವರು “ನಿಮ್ಮ ಕೈಯಲ್ಲಿರುವ ಚಮಚ ಎಷ್ಟು ಮಂದಿಯ ಬಾಯಿಯ ಪಾಲಾಗಿತ್ತೋ!!! ಆದರೆ ನನ್ನ ಈ ಕೈ ಬೆರಳಿನ ಚಮಚ ಹುಟ್ಟಿದಾಗಿನಿಂದ ನನ್ನೊಬ್ಬನ ಪಾಲಾಗಿತ್ತು,ಈಗ ಹೆಚ್ಚಿನ ನಿರ್ಮಲತೆ, ಶುಚಿತ್ವ ಯಾರ ಚಮಚಕ್ಕೆ ಎಂದಾಗ, ಚರ್ಚಿಲರ ಪ್ರತಿಕ್ರಿಯೆ ನಾ ಹೇಳಬೇಕಂತಿಲ್ಲ ಅಲ್ಲವೇ??.
ಇಷ್ಟೆಲ್ಲಾ ಉಪಯೋಗವಿರುವ ನಮ್ಮ ನ್ಯಾಚುರಲ್ ಚಮಚವನ್ನು ಬಳಸಿಕೊಳ್ಳುವುದಕ್ಕೆ ಹಿಂದೇಟು ಏಕಲ್ಲವೇ?

ಜಪ
ಕುಂದಾಪುರ

LEAVE A REPLY

Please enter your comment!
Please enter your name here