ಕೊರೊನಾವೈರಸ್ ಮುಕ್ತ ದೇಶಗಳು

0
126
Tap to know MORE!

ಒಟ್ಟು 9 ದೇಶಗಳನ್ನು ಇದುವರೆಗೆ ಸಾರ್ಸ್-ಕೋವ್ -2 ಕೊರೊನಾವೈರಸ್‌ನಿಂದ ಮುಕ್ತವೆಂದು ಘೋಷಿಸಲಾಗಿದೆ. ಕೊರೊನಾವೈರಸ್ ಮುಕ್ತ ದೇಶಗಳ ಪಟ್ಟಿಗೆ ನ್ಯೂಜಿಲೆಂಡ್ ಇತ್ತೀಚಿನ ಸೇರ್ಪಡೆಯಾಗಿದೆ.  ಈ 9 ದೇಶಗಳ ಪೈಕಿ ಹೆಚ್ಚಿನವು ಸಣ್ಣ ಜನಸಂಖ್ಯೆಯನ್ನು ಹೊಂದಿವೆ ಮತ್ತು ಕೋವಿಡ್-೧೯ ಸಾಂಕ್ರಾಮಿಕ ರೋಗವು ಹರಡುವುದನ್ನು ತಡೆಯುವಲ್ಲಿ ಯಶಸ್ವಿಯಾಗಿದೆ.

ಅಮೇರಿಕಾ, ಭಾರತ, ಬ್ರೆಜಿಲ್ ಸೇರಿದಂತೆ ವಿಶ್ವದ ಬಹುತೇಕ ರಾಷ್ಟ್ರಗಳು ಈಗಲೂ ಸಾಂಕ್ರಾಮಿಕ ರೋಗವಾಗಿರುವ ಕೊರೊನಾವೈರಸ್ ವಿರುದ್ಧ ಹೋರಾಡುತ್ತಲೇ ಇದ್ದರೂ, ನ್ಯೂಜಿಲೆಂಡ್‌ನಂತಹ ದೇಶಗಳು ಮಾರಕ ವೈರಸ್‌ನ್ನು ಸೋಲಿಸುವಲ್ಲಿ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿವೆ.  ಕೋವಿಡ್-೧೯ ಸಾಂಕ್ರಾಮಿಕವು ಇಡೀ ಜಗತ್ತನ್ನು ತನ್ನ ಹಿಡಿತದಲ್ಲಿ ಮುಳುಗಿಸಿದೆ. ಇದರಿಂದಾಗಿ ಬಹುತೇಕ ಎಲ್ಲಾ ಸೇವೆಗಳು ಸ್ಥಗಿತಗೊಂಡಿವೆ ಮತ್ತು ಇದು ಆರ್ಥಿಕ ಹಿಂಜರಿತಕ್ಕೆ ಕಾರಣವಾಗಿದೆ.  ಕೊವಿಡ್-೧೯ರ ಪ್ರಕರಣಗಳು ಈಗಾಗಲೇ ವಿಶ್ವದಾದ್ಯಂತ ೭೦ ಲಕ್ಷದ ಗಡಿ ದಾಟಿದ್ದು, 4 ಲಕ್ಷಕ್ಕೂ ಹೆಚ್ಚು ಸಾವುಗಳು ಸಂಭವಿಸಿವೆ.  ಇದರ ಮಧ್ಯೆ, ನ್ಯೂಜಿಲೆಂಡ್ ಮತ್ತು ಇತರ 8 ದೇಶಗಳು, ಮುಂದಿನ ದಿನಗಳಲ್ಲಿ.ಈ ಬಿಕ್ಕಟ್ಟಿನ ಪರಿಸ್ಥಿತಿ ಸುಧಾರಿಸಬಹುದೆಂಬ ಭರವಸೆಯ ಕಿರಣವನ್ನು ನೀಡುತ್ತದೆ.

ಒಟ್ಟು ವರದಿಯಾದ ಪ್ರಕರಣದ ವಿವರಗಳೊಂದಿಗೆ ಕೊರೋನಾ ಮುಕ್ತ ಎಂದು ಘೋಷಿಸಲಾದ ರಾಷ್ಟ್ರಗಳ ಸಂಪೂರ್ಣ ಪಟ್ಟಿಯನ್ನು ನೋಡೋಣ:

ಕೊರೋನಾ ಮುಕ್ತ ದೇಶದ ಹೆಸರು – ಘೋಷಿಸಿದ ದಿನಾಂಕ – ಒಟ್ಟು ಪ್ರಕರಣಗಳು

ನ್ಯೂಜಿಲ್ಯಾಂಡ್
8 ಜೂನ್ 2020
1500 ಕ್ಕಿಂತ ಹೆಚ್ಚು

ಟಾಂಜಾನಿಯಾ
7 ಜೂನ್ 2020
500 ಕ್ಕಿಂತ ಹೆಚ್ಚು

ವ್ಯಾಟಿಕನ್
6 ಜೂನ್ 2020
12

ಫಿಜಿ
ಜೂನ್ 2020 ರ ಮೊದಲ ವಾರ
18

ಮಾಂಟೆನೆಗ್ರೊ
24 ಮೇ 2020
324

ಸೇಂಟ್ ಕಿಟ್ಸ್ ಮತ್ತು ನೆವಿಸ್
19 ಮೇ 2020
15

ಸೀಶೆಲ್ಸ್
18 ಮೇ 2020
11

ಟಿಮೋರ್-ಲೆಸ್ಟೆ
15 ಮೇ 2020
24

ಪಪುವಾ ನ್ಯೂಗಿನಿಯಾ
4 ಮೇ 2020
24

LEAVE A REPLY

Please enter your comment!
Please enter your name here