ಕೊರೊನಾ ಜತೆಗೆ ಜಿ4 ವೈರಸ್..!!!

0
151
Tap to know MORE!

ಬೀಜಿಂಗ್: ಈಗಾಗಲೇ ಕೊರೊನಾ ವೈರಸ್ ನಿಂದಾಗಿ ತತ್ತರಿಸಿಹೋಗುತ್ತಿರುವಾಗ ಮತ್ತೊಂದು ಹೊಸ ವೈರಸ್ ಪತ್ತೆಯಾಗಿದೆ. ಸೋಂಕುಗಳ ಮೂಲವಾದ ಚೀನಾದಲ್ಲಿ ಹೊಸ ಬಗೆಯ ಹಂದಿ ಜ್ವರವೊಂದು ಪತ್ತೆಯಾಗಿದೆ. ಇದು ಕೂಡ ಸಾಂಕ್ರಾಮಿಕ ಹಬ್ಬುವ ಸಾಧ್ಯತೆ ಇದೆಯೆಂದು ಸಂಶೋಧಕರು ಹೇಳುತ್ತಿದ್ದಾರೆ. ಹೊಸದಾಗಿ ಪತ್ತೆಯಾಗಿರುವ ವೈರಸ್ ಹೆಸರು ಜಿ4 ಇಎ ಎಚ್ 1 ಎನ್1 ವೈರಸ್.

ಜಿ4 ವೈರಸ್ 2009ರ ಹಂದಿ ಜ್ವರದ ಮಾದರಿಯಲ್ಲೇ ಇದ್ದರೂ ಕೆಲವೊಂದು ಬದಲಾವಣೆಗಳು ಹೊಸ ವೈರಸ್ ನಲ್ಲಿವೆ. ಜಿ4 ಜಿನೊಟೈಪ್ ವೈರಸ್ 2016ರ ಬಳಿಕ ವ್ಯಾಪಿಸಲು ಶುರುವಾಗಿದ್ದು. ಈ ವೈರಸ್ ಗಳು ಜೀವಿಗಳ ದೇಹವನ್ನು ಸೇರಿಕೊಂಡು ಉಬ್ಬಸ, ಸೀನುವಿಕೆ, ಕೆಮ್ಮು, ತೂಕ ಕಡಿಮೆಯಾಗುವುದು ಮುಂತಾದ ರೋಗಲಕ್ಷಣಗಳನ್ನು ಉಂಟು ಮಾಡುತ್ತವೆ. ಜಿ4 ವೈರಸ್ ಪ್ರೊಟೀನ್ ಕಣಗಳ ಮೂಲಕ ಜೀವಕೋಶ ಸೇರಿಕೊಂಡು ಶ್ವಾಸಕೋಶದ ಹೊರ ಪದರದಲ್ಲಿ ಸಂತಾನೋತ್ಪತ್ತಿ ಆರಂಭಿಸುತ್ತವೆ. ಈ ಫ್ಲೂನಿಂದಾಗಿ ಗಂಭೀರ ಸೋಂಕಿಗೆ ಒಳಗಾಗಿ ಸಾವು ಸಂಭವಿಸುವ ಸಾಧ್ಯತೆಗಳು ಇವೆ. ಈ ವೈರಸ್ ಪ್ರಾಣಿಗಳಿಂದ ಮಾನವನಿಗೆ ಹಬ್ಬುತ್ತದೆ ಆದರೆ ಮನವನಿಂದ ಮಾನವನಿಗೆ ವ್ಯಾಪಿಸುತ್ತದೆ ಎನ್ನುವುದಕ್ಕೆ ಯಾವುದೇ ಪುರಾವೆ ದೊರೆತಿಲ್ಲ.

LEAVE A REPLY

Please enter your comment!
Please enter your name here