ಕೊರೊನಾ ಜಾಗೃತಿ ಮೂಡಿಸುವಲ್ಲಿ ಮಾಧ್ಯಮದವರು ‘ಮುಂಚೂಣಿಯ ಯೋಧರು’ : ಎಂ.ವೆಂಕಯ್ಯ ನಾಯ್ಡು

0
175
Tap to know MORE!

ಸಾಂಕ್ರಾಮಿಕ ಕೊರೊನಾ ವೈರಸ್ ಅಥವಾ ಕೋವಿಡ್ -19 ಬಗ್ಗೆ ನೈಜ ಮಾಹಿತಿಗಳನ್ನು ಮಾತ್ರ ಪ್ರಸಾರ ಮಾಡಿ ಮತ್ತು ರೋಗಕ್ಕೆ ಸಂಬಂಧಿಸಿದ, ಜನರ ದಾರಿತಪ್ಪಿಸುವ ವಿಷಯಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಬೇಡಿ ಎಂದು ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಒತ್ತಾಯಿಸಿದ್ದಾರೆ.

ಜನರಲ್ಲಿ ಭೀತಿ ಸೃಷ್ಟಿಸುವುದರಿಂದ, ಅವರ ಆತಂಕಕಾರಿ ಮನಸ್ಸುಗಳ ಮೇಲೆ ಕೊರೋನಾ ಮಹಾಮಾರಿ ಮತ್ತಷ್ಟು ಪರಿಣಾಮ ಬೀರಬಹುದು ಎಂದಿದ್ದಾರೆ. ಮಾಧ್ಯಮಗಳು ಕೋರೋನಾ ಸಮಯದಲ್ಲಿ ನಮ್ಮ ಪಾಲುದಾರ ಎಂಬ ಫೇಸ್ಬುಕ್ ಪೋಸ್ಟ್ನಲ್ಲಿ ಅವರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

ವ್ಯಾಪಕ ಜಾಗೃತಿಗಾಗಿ ಸಾಂಕ್ರಾಮಿಕ ರೋಗದ ಕುರಿತಾದ ನಿರೂಪಣೆಯನ್ನು ಪ್ರಸ್ತುತಪಡಿಸುವಲ್ಲಿ ಮಾಧ್ಯಮದವರ ಸಮರ್ಪಿತ ಪ್ರಯತ್ನಗಳಿಗಾಗಿ ಮಾಧ್ಯಮ ವ್ಯಕ್ತಿಗಳನ್ನು ‘ಮುಂಚೂಣಿಯ ಯೋಧರು’ ಎಂದು ಕರೆದ ಉಪರಾಷ್ಟ್ರಪತಿ, ವಿವಿಧ ಅಂಶಗಳ ಬಗ್ಗೆ ಅಗತ್ಯ ಮಾಹಿತಿ, ವಿಶ್ಲೇಷಣೆಗಳು ಮತ್ತು ದೃಷ್ಟಿಕೋನಗಳೊಂದಿಗೆ ಜನರನ್ನು  ಸಬಲೀಕರಣಗೊಳಿಸುವ ಮಾಧ್ಯಮದವರ ಪ್ರಯತ್ನಗಳನ್ನು ಶ್ಲಾಘಿಸಿದರು.

ಸಾಂಕ್ರಾಮಿಕ ರೋಗದ ಮಾಹಿತಿಯನ್ನು ತಲುಪಿಸುವಲ್ಲಿ ಹಾಗೂ ನಿಯಮಿತ ಸಂವಹನಕ್ಕಾಗಿ ಜನರು ಮತ್ತು ಸರ್ಕಾರಗಳ ನಡುವಿನ ಸೇತುವೆಯಾಗಿ ಮಾಧ್ಯಮವು ಸಾಂಕ್ರಾಮಿಕ ರೋಗದ ಚರಿತ್ರಕಾರನ ಪಾತ್ರವನ್ನು ವಹಿಸಿದೆ ಎಂದು ಅವರು ಉಲ್ಲೇಖಿಸಿದ್ದಾರೆ

LEAVE A REPLY

Please enter your comment!
Please enter your name here