ಕೊರೊನಾ ವಾರಿಯರ್ ನಂದಿನಿ ಗೋಪಾಲ್

0
156
Tap to know MORE!

ಜಗತ್ತಿನಾದ್ಯಂತ ಇಂದು ಕೊರೊನಾ ಮಹಾಮಾರಿ ಲಗ್ಗೆ ಇಟ್ಟಿದೆ. ಕೋವಿಡ್ – 19 ಪರಿಣಾಮದಿಂದ ಭಾರತವೂ ಸೇರಿದಂತೆ ಅನೇಕ ರಾಷ್ಟ್ರಗಳು ಅಪಾಯವನ್ನು ಎದುರಿಸುತ್ತಿದೆ. ಈ ವೈರಸ್ ವಿರುದ್ಧ ಹೋರಾಡಲು ವೈದ್ಯರು, ಪೋಲಿಸರು ಸೇರಿದಂತೆ ಇತರ ಸಿಬ್ಬಂದಿಗಳು ಹಗಲಿರುಳು ಎನ್ನದೆ ಶ್ರಮಿಸುತ್ತಿದ್ದಾರೆ. ಈ ಎಲ್ಲದರ ನಡುವೆ ಲಾಕ್‍ಡೌನ್‍ನಿಂದ ಅನ್ನ ನೀರು ಸಿಗದೆ ಬಳಲುತ್ತಿರುವ ಅದೆಷ್ಟೋ ಜನರಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಒಂದಷ್ಟು ಮನಸುಗಳು ಮನೆಯಿಂದ ಹೊರ ಬಂದು ಅಪಾಯಕ್ಕೆ ಹೆದರದೆ ಜನರ ಕಷ್ಟಗಳಿಗೆ ಸ್ಪಂದಿಸುತ್ತಿದ್ದಾರೆ. ಕೊರೊನಾ ವಾರಿಯರ್ ಆಗಿ ಸ್ವಯಂಸೇವೆ ಮಾಡುತ್ತಿರುವ ಮೂಡುಬಿದಿರೆ ಆಳ್ವಾಸ್ ಕಾಲೇಜಿನ ನಂದಿನಿ ಗೋಪಾಲ್ ಕೂಡ ಒಬ್ಬರು.

ಲಾಕ್‍ಡೌನ್ ಆರಂಭವಾದ ದಿನದಿಂದ ಮನೆಯಲ್ಲೇ ಇದ್ದುಕೊಂಡು ಬೋರ್ ಆಗಿದ್ದ ಇವರು ಈ ಅವಧಿಯಲ್ಲಿ ಏನಾದರೂ ಹೊಸತನ್ನು ಮಾಡಬೇಕೆಂದು ಕೊರೊನ ವಾರಿಯರ್ ಸ್ವಯಂಸೇವಕರಾಗಿ ಅವರ ಕಾರ್ಯ ಆರಂಭಿಸಿದರು.

ಕೊರೋನಾ ವಾರಿಯರ್ ನಂದಿನಿ ಗೋಪಾಲ್

ಮಾಹಿತಿ ಸಿಕ್ಕಿದ ನಂತರ ಯಾವ ರೀತಿ ಅಪ್ಲಿಕೇಶನ್ ಫಿಲ್ ಮಾಡಿ ಆನ್ಲೈನ್ ತರಬೇತಿ ಪಡೆದುಕೊಂಡು ಡಿಪಾರ್ಟ್‍ಮೆಂಟ್ ಆಫ್ ಇನ್‍ಫಾರಮೇಶನ್ ಆ್ಯಂಡ್ ಪಬ್ಲಿಕ್ ರಿಲೇಶನ್ ಇಲಾಖೆಯ ವತಿಯಿಂದ ಅದಕ್ಕೆ ಸಂಬಂಧಿಸಿದ ಪರೀಕ್ಷೆಯನ್ನು ಬರೆದರು. ಆ ಪರೀಕ್ಷೆಯಲ್ಲಿ ಎಂಟು ಅಂಕಕ್ಕೆ ಏಳು ಅಂಕ ಪಡೆದು ಉತ್ತೀರ್ಣಳಾದರು. ನಂತರ ಡಿಪಾರ್ಟ್‍ಮೆಂಟ್ ಆಫ್ ಇನ್‍ಫಾರಮೇಶನ್ ಆ್ಯಂಡ್ ಪಬ್ಲಿಕ್ ರಿಲೇಶನ್ ಇಲಾಖೆಯ ಐಟಿ ವಿಭಾಗದಲ್ಲಿ ಕೆಲಸ ಆರಂಭಿಸಿದರು

ಡಿಐಪಿಆರ್ ಇಲಾಖೆಯಲ್ಲಿ ಸಾಮಾಜಿಕ ಜಾಲತಾಣಗಳನ್ನು ನಿರ್ವಹಿಸುವುದು ಮುಖ್ಯ ಕೆಲಸ. ಲಾಕ್‍ಡೌನ್‍ನಿಂದ ಮನೆಯಿಂದ ಹೊರ ಬರಲಾಗದೆ ಅಗತ್ಯ ಸಹಾಯಕ್ಕಾಗಿ ಸಂಪರ್ಕಿಸಿದವರಿಗೆ ಸಹಾಯ ಮಾಡುವುದು ಐಟಿ ವಿಭಾಗದಲ್ಲಿ ಅವರಿಗಿದ್ದ ಕರ್ತವ್ಯಗಳು. ಜನರಿಗೆ ಅಗತ್ಯವಿರುವ ರೇಶನ್, ಔಷಧಿ ವಸ್ತುಗಳು ಹಾಗೂ ದಿನಬಳಕೆಯ ಸಾಮಾಗ್ರಿಗಳನ್ನು ಜನರು ಆನ್ಲೈನ್ ನಲ್ಲಿ ಬೇಡಿಕೆ ಇಟ್ಟಾಗ ಅದನ್ನು ಅವರಿಗೆ ತಲುಪಿಸುವ ವ್ಯವಸ್ಥೆ ಮತ್ತು ರೇಶನ್ ಹಾಗೂ ಆಹಾರ ವಸ್ತುಗಳ ಕ್ವಾಲಿಟಿ ಚೆಕ್ ಮಾಡಲಾಗುತ್ತದೆ. ಒಟ್ಟಾರೆಯಾಗಿ ಜನರ ಕಷ್ಟಗಳಿಗೆ ಸ್ಪಂದನೆ ನೀಡುವುದಕ್ಕೆ ಮೊದಲ ಆದ್ಯತೆ ನೀಡುತ್ತಿದ್ದಾರೆ.

ಡಿಐಪಿಆರ್ ಇಲಾಖೆಯು ಸಾರ್ವಜನಿಕರ ಸಮಸ್ಯೆಗಳನ್ನು ಬಗೆಹರಿಸುವುದು ಮತ್ತು ಮಾಹಿತಿಗಳನ್ನು ಒದಗಿಸುವುದನ್ನು ಮಾಡುತ್ತಿತ್ತು. ಇದರ ಜೊತೆಗೆ ಟೆಲಿಗ್ರಾಂ, ವಾಟ್ಸಪ್, ಇಮೇಲ್, ಹಾಗೂ ಟ್ವಿಟರ್‍ನಲ್ಲಿ ಜನರ ಸಮಸ್ಯೆಗೆ ಸ್ಪಂದಿಸುವುದು, ಮಾಹಿತಿಗಳನ್ನು ತಲುಪಿಸುವುದು ಅವರ ಕೆಲಸವಾಗಿತ್ತು.

ಕೊರೊನಾ ವಾರಿಯರ್ ಆಗಿ ನೇಮಕಗೊಂಡ ಬಳಿಕ ಏರಿಯಾ ಪೋಲಿಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಬರುವ ಚೆಕ್ ಪೋಸ್ಟ್‍ಗಳಲ್ಲಿ ಅಸಿಸ್ಟ್ ಮಾಡುತ್ತಿದ್ದರು. ಸಾಮಾಜಿಕ ಅಂತರ ಕಾಯಲು ಜನರ ನಿರ್ವಹಣೆಯ ಹೊಣೆ ಇರುತ್ತದೆ. ಇದರ ಜೊತೆಗೆ ಫುಡ್ ಪ್ಯಾಕಿಂಗ್, ಫುಡ್ ಡೆಲಿವರಿಯನ್ನು ಮಾಡಲಾಗುತ್ತದೆ. ಆಹಾರ ವಸ್ತುಗಳನ್ನು ಪ್ಯಾಕ್ ಮಾಡುವುದರಿಂದ ಹಿಡಿದು ಅದು ಜನರಿಗೆ ತಲುಪುವ ವರೆಗೆ ಅದರ ಜವಬ್ದಾರಿ ಅವರಿಗಿರುತ್ತದೆ. ಆಹಾರ ವಸ್ತುಗಳ ಜೊತೆಗೆ ಮಹಿಳೆಯರ ಅಗತ್ಯದ ವಸ್ತುಗಳು, ಔಷಧಿ, ನೀರಿನ ಬಾಟಲಿಗಳನ್ನು ನೀಡಲಾಗುತ್ತದೆ.

ಮಾರ್ಕೆಟ್ ಪ್ಲೇಸ್ಗಳಲ್ಲಿ ಮತ್ತು ಸ್ಲಂ ಏರಿಯಾಗಳಲ್ಲಿ ಜನರಿಗೆ ಅಗತ್ಯ ಸಾಮಾಗ್ರಿಗಳನ್ನು ತಲುಪಿಸುತ್ತಾರೆ. ವಸ್ತುಗಳನ್ನು ಹಂಚುವ ಸಮಯದಲ್ಲಿ ಕಡ್ಡಾಯವಾಗಿ ಜನರಿಗೆ ಮಾಸ್ಕ್ ಧರಿಸಿ ಸಾಮಾಜಿಕ ಅಂತರವನ್ನು ಕಾಯುವಂತೆ ನೋಡಲಾಗುತ್ತದೆ. ಹೆಚ್ಚಾಗಿ ದಿನಗೂಲಿ ಕಾರ್ಮಿಕರು, ಬಡವರು ಇದರ ಸದುಪಯೋಗವನ್ನು ಪಡೆದುಕೊಳ್ಳುತ್ತಿದ್ದಾರೆ.

ಜನರೊಂದಿಗೆ ಸಂಪರ್ಕದಲ್ಲಿರುವ ಇವರು ಕೂಡ ಬಹಳ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಕಡ್ಡಾಯವಾಗಿ ಗ್ಲೌಸ್ ಹಾಗೂ ಮಾಸ್ಕ್‍ನ್ನು ಧರಿಸುತ್ತಾರೆ. ಇದರ ಜೊತೆಗೆ ಓವರ್ ಕೋಟ್ ಕೂಟ ಬಳಸುತ್ತಾರೆ. ಸ್ವಚ್ಚವಾಗಿರಿಕೊಳ್ಳುವುದನ್ನು ರೂಢಿ ಮಾಡಿಕೊಂಡಿದ್ದಾರೆ.

ಜನರನ್ನು ಸಂಭಾಳಿಸುವುದು ಆರಂಭದಲ್ಲಿ ತುಸು ಕಷ್ಟವೇ ಆಗಿತ್ತು. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಂತೆ ಮಾಡುವಲ್ಲಿ ಜನರನ್ನು ರಿಕ್ವೆಸ್ಟ್ ಮಾಡಿಕೊಳ್ಳಬೇಕಿತ್ತು. ನಂತರದ ದಿನಗಳಲ್ಲಿ ಕೊರೋನಾ ಜಾಗೃತಿಯ ದೆಸೆಯಿಂದ ಕೊಂಚ ಅರಿವು ಮೂಡಿತ್ತು. ಚೆಕ್ ಪೋಸ್ಟ್‍ಗಳಲ್ಲಿ ಸುಖಾಸುಮ್ಮನೆ ಓಡಾಡುವವರನ್ನು ಪೋಲಿಸರೊಂದಿಗೆ ಸೇರಿ ಸಾಮಾಜಿಕ ಅಂತರ ಕಾಯುವಂತೆ ಮಾಡುತ್ತಿದ್ದೆವು.
ಜನರ ಸಮಸ್ಯೆಗಳಿಗೆ ಸ್ಪಂದಿಸುವುದು ಒಂದೊಳ್ಳೆ ಸಮಾಜ ಕಾರ್ಯ. ಆಹಾರ ಹಂಚುವ ಸಂದರ್ಭದಲ್ಲಿ ಬಡವರ ಕಷ್ಟ ನೋಡುವಾಗ ಬೇಸರವಾದರೂ ಹಸಿದ ಹೊಟ್ಟೆಯನ್ನು ತುಂಬಿಸಿದ ತೃಪ್ತಿ ಸಿಗುತ್ತದೆ. ಮನೆಯಲ್ಲೆ ಇದ್ದುಕೊಂಡು ಕಾಲಹರಣ ಮಾಡುವ ಬದಲು ಸ್ವಲ್ಪ ರಿಸ್ಕ್ ಇದ್ದರೂ ಪರವಾಗಿಲ್ಲ ಜನರ ನೋವಿಗೆ ನಮ್ಮಿಂದಾಗುವ ಕೈಸಹಾಯ ಮಾಡಬಹುದೆಂಬ ಖುಷಿ ಇದೆ ಎನ್ನುತ್ತಾರೆ ನಂದಿನಿ ಗೋಪಾಲ್

LEAVE A REPLY

Please enter your comment!
Please enter your name here