ಕೊರೊನಾ ವಾರ್ಡಿಗೆ ನುಗ್ಗಿದ ಹಂದಿಗಳು!

0
47

ರಾಯಚೂರು: ಓಪೆಕ್ ನೆರವಿನ ರಾಜೀವ್ ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಕೊರೊನಾ ವಾರ್ಡಿನ ಅವ್ಯವಸ್ಥೆ ಮತ್ತೊಮ್ಮೆ ಬಯಲಾಗಿದೆ. ಈ ಬಾರಿ ಸೋಂಕಿತರೇ ಬಹಿರಂಗಪಡಿಸಿದ್ದಾರೆ.

ಕೋವಿಡ್ ವಾರ್ಡಿನಲ್ಲಿ ಶನಿವಾರ ರಾತ್ರಿ ಹಂದಿಗಳು ನುಗ್ಗಿ ತ್ಯಾಜ್ಯದ ಚೀಲಗಳನ್ನು ಕಿತ್ತಿ ತಿನ್ನುವ ವಿಡಿಯೋ ವೈರಲ್ ಆಗಿದೆ. ಕೋವಿಡ್ ವಾರ್ಡಿನಲ್ಲಿ ಹಂದಿಗಳು ನುಗ್ಗಿರುವುದು ಅವ್ಯವಸ್ಥೆಗೆ ಸ್ಪಷ್ಟ ಉದಾಹರಣೆ.

ಈ ಬಗ್ಗೆ ಜಿಲ್ಲಾಡಳಿತ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ವಿಡಿಯೋ ವೈರಲ್ ಮಾಡುವ ಮೂಲಕ ಕೋವಿಡ್ ವಾರ್ಡಿನ‌ಲ್ಲಿರುವ ಸೋಂಕಿತರು ಒತ್ತಾಯಿಸಿದ್ದಾರೆ. ಹಂದಿಗಳು ಆಸ್ಪತ್ರೆಯೊಳಗೆ ನುಗ್ಗಿ ಮೆಡಿಕಲ್‌ ತ್ಯಾಜ್ಯವನ್ನು ಚೆಲ್ಲಾಪಿಲ್ಲಿ ಮಾಡಿದ್ದು ಸೋಂಕಿತರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

LEAVE A REPLY

Please enter your comment!
Please enter your name here