ಕೊರೋನಾಗೆ ಆಯುರ್ವೇದವೇ ಪರಿಹಾರ!

0
152
Tap to know MORE!

ಪ್ರಾಚೀನ ಭಾರತೀಯ ಔಷಧೀಯ ವ್ಯವಸ್ಥೆಯಾದ ಆಯುರ್ವೇದವು ಕೊರೋನಾ ಮಹಾಮಾರಿಯಿಂದ ಜಗತ್ತನ್ನು ರಕ್ಷಿಸುತ್ತದೆ ಎಂದು ಬೆಂಗಳೂರಿನಲ್ಲಿ ನಡೆಸಿದ ಪ್ರಾಯೋಗಿಕ ಪರೀಕ್ಷೆಯು ದೃಢಪಡಿಸಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿಗಳಿಗೆ ಅನುಸಾರವಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾದ 10 ಸೋಂಕಿತ ಜನರ ಮೇಲಿನ ಪ್ರಯೋಗ ಯಶಸ್ವಿಯಾಗಿದ್ದು, ಕೇವಲ 9 ದಿನಗಳಲ್ಲಿ ಎಲ್ಲರನ್ನು ಗುಣಪಡಿಸಿ, ಅವರ ಕೊರೋನಾ ವರದಿಯು ನೆಗೆಟಿವ್ ಬಂದಿದ್ದು, ಎಲ್ಲರನ್ನೂ ಮನೆಗೆ ಕಳುಹಿಸಲಾಗಿದೆ. ಗಿರಿಧರ್ ಕಜೆ ನೇತೃತ್ವದ ಈ ಯಶಸ್ಸಿನ ಅಭಿಯಾನವನ್ನು ರಾಜ್ಯ ಸರ್ಕಾರ ಕೈಗೆತ್ತಿಕೊಂಡಿದ್ದು, ಈಗ ಅದನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ನಿರ್ಧರಿಸಿದೆ.

ಕರೋನಾವನ್ನು ಗುಣಪಡಿಸಲು ಲಕ್ಷಾಂತರ ರೂಪಾಯಿಗಳ ಖರ್ಚು ಆಗುತ್ತಿದ್ದರೂ, ಆಯುರ್ವೇದದ ಕ್ಲಿನಿಕಲ್ ಪ್ರಯೋಗವು ಸೋಂಕಿತರಿಗೆ ಕಡಿಮೆ ದರದ ಪರಿಹಾರವನ್ನು ಕಂಡುಹಿಡಿದಿದೆ. ಪ್ರತಿ ರೋಗಿಗೆ ₹60- ₹180ರ ಒಳಗೆ ಚಿಕಿತ್ಸೆ ನೀಡಲಾಗಿದೆ. ಪ್ರಯೋಗದಲ್ಲಿ ಭಾಗವಹಿಸಿದವರಲ್ಲಿ, ಒಬ್ಬರು ಕ್ಷಯರೋಗ (ಟಿಬಿ) ದಿಂದ ಬಳಲುತ್ತಿದ್ದರು. ಮಧುಮೇಹ, ಹೃದ್ರೋಗ ಸಮಸ್ಯೆ ಹೊಂದಿರುವ ಎಲ್ಲ ಜನರು ಯಾವುದೇ ಅಡ್ಡಪರಿಣಾಮಗಳಿಲ್ಲದೆ ಗುಣಮುಖರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಯಶಸ್ವಿ ಪ್ರಯೋಗದ ಆಧಾರದ ಮೇಲೆ ಆಯುರ್ವೇದ ಔಷಧವನ್ನು ದೊಡ್ಡ ಪ್ರಮಾಣದಲ್ಲಿ ಬಳಸುವುದರ ಕುರಿತು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನದ ಉಪಕುಲಪತಿ (ಆರ್‌ಜಿಯುಎಚ್‌ಎಸ್) ಡಾ.ಸಚ್ಚಿದಾನಂದ ಅವರಿಗೆ ಸರ್ಕಾರ ಸೂಚಿಸಿದೆ.

LEAVE A REPLY

Please enter your comment!
Please enter your name here