ಐಐಟಿ : ಇನ್ನೂ ಇಬ್ಬರು ವಿದ್ಯಾರ್ಥಿಗಳಿಗೆ ಕೊರೋನಾ!

0
164
Tap to know MORE!

ಐಐಟಿ ಖಾರಗ್‌ಪುರದ ಇನ್ನೂ ಇಬ್ಬರು ವಿದ್ಯಾರ್ಥಿಗಳು ಮತ್ತು ಹಾಸ್ಟೆಲ್ ಸಿಬ್ಬಂದಿ ಒಬ್ಬರು ಕೋವಿಡ್ದು-೧೯ ಸೋಂಕಿಗೆ ಒಳಗಾಗಿದ್ದಾರೆ ಎಂದು ಸಂಸ್ಥೆಯ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆಗಸ್ಟ್ 19 ರಂದು ಓರ್ವ ವಿದ್ಯಾರ್ಥಿಯು ಕೋವಿಡ್ -19 ಗೆ ಪಾಸಿಟಿವ್ ಪರೀಕ್ಷೆ ನಡೆಸಿದ್ದರಿಂದ, ಅವರನ್ನು ಕೋಲ್ಕತ್ತಾಗೆ ಕಳುಹಿಸಲಾಗಿತ್ತು. ಆತನೊಂದಿಗೆ ಇದ್ದ ಇಬ್ಬರು ಸಹಪಾಠಿಗಳ ಮತ್ತು ಮೆಸ್ ಸಿಬ್ಬಂದಿಯ ಸ್ವ್ಯಾಬ್ ಮಾದರಿಗಳನ್ನು ಅಧಿಕಾರಿಗಳು ಪರೀಕ್ಷೆಗೆ ಕಳುಹಿಸಿದ್ದರು ಎಂದು ಐಐಟಿ ಖರಗ್‌ಪುರ್ ರಿಜಿಸ್ಟ್ರಾರ್ ಬಿ ಎನ್ ಸಿಂಗ್ ಪಿಟಿಐಗೆ ತಿಳಿಸಿದ್ದಾರೆ.

ಇದನ್ನೂ ಓದಿ : ಐಐಟಿ ಖಾರಗ್‌ಪುರದ ಓರ್ವ ವಿದ್ಯಾರ್ಥಿಗೆ ಕೊರೋನಾ!

ಸಿಬ್ಬಂದಿ ಸೇರಿದಂತೆ ಮೂವರ ವರದಿಗಳು ಸಹ ಪಾಸಿಟಿವ್ ಬಂದಿದ್ದು, ಅವರಲ್ಲಿ ಸೋಂಕು ಇರುವುದು ದೃಢಪಡಿಸಿದೆ. ನಾಲ್ವರನ್ನೂ ಕೋಲ್ಕತ್ತಾದ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅವರು ಸ್ಥಿರವಾಗಿದ್ದಾರೆ ಎಂದು ಸಿಂಗ್ ಹೇಳಿದ್ದಾರೆ.

ಅವರು ಯಾವುದೇ ರೋಗಲಕ್ಷಣಗಳನ್ನು ತೋರಿಸಲಿಲ್ಲ. ಆದರೆ ನಾವು ಯಾವುದೇ ರಿಸ್ಕ್ ತೆಗೆದುಕೊಳ್ಳಲಿಲ್ಲ ಮತ್ತು ಅವರನ್ನು ಪರೀಕ್ಷೆಗೆ ಒಳಪಡಿಸಿದೆವು” ಎಂದು ಅವರು ಹೇಳಿದರು.

ವಿದ್ಯಾರ್ಥಿಗಳು ತಂಗಿದ್ದ ಹಾಸ್ಟೆಲ್ ಕಟ್ಟಡವನ್ನು ಸೀಲ್‌ಡೌನ್ ಮಾಡಲು ಸಂಸ್ಥೆ ನಿರ್ಧರಿಸಿದೆ.

ಐಐಟಿ ಖರಗ್‌ಪುರ ಲಾಕ್‌ಡೌನ್ ಕಾರಣದಿಂದಾಗಿ ಹಾಸ್ಟೆಲ್‌ನಲ್ಲಿದ್ದ ಎಲ್ಲ ವಿದ್ಯಾರ್ಥಿಗಳನ್ನು ಜೂನ್ 30 ರೊಳಗೆ ಕ್ಯಾಂಪಸ್‌ನಿಂದ ಹೊರ ಹೋಗಲು ಸೂಚಿಸಿತ್ತು. ಎರಡು ತಿಂಗಳ ನಂತರ ಮುಂದಿನ ಸೆಮಿಸ್ಟರ್‌ಗೆ ಮರಳುವಂತೆ ಕೇಳಿಕೊಂಡಿತ್ತು. ಆದರೆ ಅವರಲ್ಲಿ ಕೆಲವರು ಅಲ್ಲಿಯೇ ತಂಗಿದ್ದರು. ಜೂನ್ ನೋಟಿಸ್ ನಂತರವೂ ಹಾಸ್ಟೆಲ್ನಲ್ಲಿ ಉಳಿದುಕೊಂಡಿರುವವರನ್ನು “ಆಗಸ್ಟ್ 23 ರೊಳಗೆ ಹಾಸ್ಟೆಲ್ ಖಾಲಿ ಮಾಡಿ ತಮ್ಮ ಊರಿಗೆ ತೆರಳುವಂತೆ ಸಂಸ್ಥೆ ಕೇಳಿದೆ.

ಐಐಟಿ ಖರಗ್‌ಪುರ ಮುಂದಿನ ಸೂಚನೆ ಬರುವವರೆಗೂ ವಿದ್ಯಾರ್ಥಿಗಳನ್ನು ಕ್ಯಾಂಪಸ್‌ಗೆ ಬರದಂತೆ ಕೇಳಿಕೊಂಡಿದ್ದು, ಸೆಪ್ಟೆಂಬರ್‌ನಿಂದ ಆನ್ಲೈನ್ ತರಗತಿಗಳನ್ನು ನಡೆಸಲಾಗುವುದು ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here