ಕೊರೋನಾ : ಕೇರಳದಲ್ಲಿ ಮೊದಲ ಬಾರಿಗೆ ಸಾವಿರಕ್ಕೂ ಅಧಿಕ ಸೋಂಕಿತರ ವರದಿ!

0
253
Tap to know MORE!

ತಿರುವನಂತಪುರಂ : ಇಂದು ಕೇರಳದಲ್ಲಿ 1,084 ಕೊರೋನಾ ಸೋಂಕಿತರ ವರದಿಯಾಗುವ ಮೂಲಕ ರಾಜ್ಯದಲ್ಲಿ ಮೊದಲ ಬಾರಿಗೆ ಸಾವಿರಕ್ಕೂ ಅಧಿಕ ಪ್ರಕರಣಗಳು ದಾಖಲಾದಂತಾಗಿದೆ.

1084 ಪ್ರಕರಣಗಳ ಪೈಕಿ 785  ಸೋಂಕಿತರು ಇತರ ಸೋಂಕಿರೊಂದಿಗಿನ ಸಂಪರ್ಕದ ಮೂಲಕ ಸೋಂಕನ್ನು ತಗುಲಿಸಿಕೊಂಡಿರುತ್ತಾರೆ. ಇದರಿಂದಾಗಿ ಸರ್ಕಾರ ಮಾತ್ರವಲ್ಲದೆ, ಜನತೆಯೂ ಆತಂಕಕ್ಕೆ ಒಳಗಾಗಿದ್ದಾರೆ. ಹಲವರ ಸಂಪರ್ಕದ ಮೂಲವೇ ಪತ್ತೆ ಹಚ್ಚಲಾಗದಿರುವುದು ಮತ್ತಷ್ಟು ಆತಂಕಕಾರಿಯೇ.

ಇದುವರೆಗೆ ಕೇರಳದಲ್ಲಿ 15,033 ಸೋಂಕಿತರ ವರದಿಯಾಗಿದ್ದು ,7,785 ಪ್ರಕರಣಗಳು ಸಕ್ರಿಯವಾಗಿದೆ. 6,164 ಮಂದಿ ಗುಣಮುಖರಾಗಿದ್ದಾರೆ. 45 ಕೊರೊನಾ ರೋಗಿಗಳು ಸಾವನ್ನಪ್ಪಿದ್ದಾರೆ.

ಇಂದು ರಾಜಧಾನಿ ತಿರುವನಂತಪುರದಲ್ಲಿ ಅತ್ಯಧಿಕ 226 ಸೋಂಕಿತರ ವರದಿಯಾಗಿದೆ. ಇದೇ ಮೊದಲ ಬಾರಿಗೆ ಈ ಜಿಲ್ಲೆಯಲ್ಲಿ 200ಕ್ಕೂ ಅಧಿಕ ಸೋಂಕಿತರ ವರದಿಯಾಗಿರುತ್ತದೆ. ಇದಲ್ಲದೆ, ಕೊಲ್ಲಂ 133, ಪಾಲಕ್ಕಾಡ್ 34, ಎರ್ನಾಕುಲಂ 92, ಅಲೆಪ್ಪಿ 120, ಕಣ್ಣೂರು 43, ಕಾಸರಗೋಡ್ 101, ಪಥನಮತ್ತಟ್ಟ 49, ಇಡುಕ್ಕಿ 43, ವಯನಾಡ್ 4, ಕ್ಯಾಲಿಕಟ್ 25, ತ್ರಿಶೂರ್ 56, ಮಲಪ್ಪುರಂ 61, ಕೊಟ್ಟಾಯಂ 51 ಸೋಂಕಿತರ ವರದಿಯಾಗಿದೆ.

LEAVE A REPLY

Please enter your comment!
Please enter your name here