ಕೊರೋನಾ ಗೆದ್ದ ಶತಾಯುಷಿ – ಸಕಾರಾತ್ಮಕತೆಯೇ ಮದ್ದು!

0
153
Tap to know MORE!

ಪುಣೆಯಲ್ಲಿ ವಾಸಿಸುವ 100 ವರ್ಷದ ಬಾಯಿ ದಾರಡೆ ಎಂಬ ಮಹಿಳೆ ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಗೆದ್ದು ಮನೆಗೆ ಮರಳಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿರುವ ಜನರಿಗೆ ಸೋಂಕು ತಗುಲಿದೆ ಎಂದು ತಿಳಿದ ಬಳಿಕ, ಅವರು ಮತ್ತಷ್ಟು ಭಯ ಮತ್ತು ಆತಂಕವನ್ನು ಬೆಳೆಸಿಕೊಳ್ಳುವುದರಿಂದ ಸಾಕಷ್ಟು ಸಾವುಗಳು ಸಂಭವಿಸಿದೆ. ಆದರೆ ಪುಣೆಯ ಈ ಅಜ್ಜಿ, ಅನಾರೋಗ್ಯವನ್ನು ಸೋಲಿಸಲು ಸಕಾರಾತ್ಮಕತೆ ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ತೋರಿಸಿದ್ದಾರೆ.

ಸಂಪೂರ್ಣ ಕುಟುಂಬ ಕೊರೋನಾ ಬಾಧಿತ:

ಒಂದು ಸಮಯದಲ್ಲಿ, ಬಾಯಿ ದಾರಡೆ ಅವರ ಮನೆಯಲ್ಲಿದ್ದ ಎಲ್ಲಾ ಆರು ಸದಸ್ಯರಿಗೆ ಸೋಂಕು ತಗುಲಿತ್ತು. ಅವರ ಅಳಿಯ ಹರಿಶ್ಚಂದ್ರ ಘುಘೆ (63), ಮಗಳು ಕೇಶರ್ ಘುಘೆ (60), ಮೊಮ್ಮಗಳು ಮಾಧುರಿ (38) ಮತ್ತು ಮರಿ ಮೊಮ್ಮಕ್ಕಳಾದ ಯಶೋಧನ್ (16) ಮತ್ತು ಸಾನಿಯಾ (14) ಅವರಲ್ಲಿ ಕೊರೋನವೈರಸ್ ತಗುಲಿರುವುದು ದೃಢಪಟ್ಟಿತ್ತು.

“ಮೊದಲಿಗೆ ನನ್ನ ಹೆಂಡತಿ ಅನಾರೋಗ್ಯಕ್ಕೆ ಒಳಗಾಗಿದ್ದಳು. ಸ್ಥಳೀಯ ವೈದ್ಯರ ಚಿಕಿತ್ಸೆಯು ಯಾವುದೇ ಫಲಿತಾಂಶವನ್ನು ನೀಡಿಲ್ಲ. ಆದ್ದರಿಂದ ನಾವು ಖಾಸಗಿ ಆಸ್ಪತ್ರೆಗೆ ಹೋದೆವು. ಅಲ್ಲಿ ನನ್ನನ್ನೂ ಸೇರಿ, ಇಬ್ಬರಲ್ಲೂ ಕೋವಿಡ್-19 ದೃಢಪಟ್ಟಿದೆ ಎಂದು ವರದಿ ತೋರಿಸಿದವು. ಬಳಿಕ ಇಡೀ ಕುಟುಂಬ ಪರೀಕ್ಷಿಸಲಾಯಿತು ಮತ್ತು ಎಲ್ಲರಲ್ಲೂ ಸೋಂಕು ಇರುವುದು ಖಾತ್ರಿಯಾಯಿತು. ಆದ್ದರಿಂದ ನಾವೆಲ್ಲರೂ ಆಸ್ಪತ್ರೆಗೆ ದಾಖಲಾಗಿದೆವು” ಎಂದು ಅವರ ಅಳಿಯ ಮಾಧ್ಯಮಕ್ಕೆ ತಿಳಿಸಿದರು.

ಸಕಾರಾತ್ಮಕ ಚಿಂತನೆಯು ಚೇತರಿಕೆಗೆ ಸಹಾಯ ಮಾಡುತ್ತದೆ:

ನನ್ನ ಅತ್ತೆ, ಶತಾಯುಷಿ, ಸೋಂಕಿನ ವಿರುದ್ಧ ಹೇಗೆ ಹೋರಾಡಲಿದ್ದಾರೆ ಎಂಬ ಬಗ್ಗೆ ವೈದ್ಯಕೀಯ ಸಿಬ್ಬಂದಿ ಮತ್ತು ಅವರ ಇಡೀ ಕುಟುಂಬವು ಚಿಂತಿತರಾಗಿದ್ದರು. ಆದರೆ ಅವರಿಗೆ ವಯಸ್ಸಾದರೂ, ಯಾವುದೇ ಕಾಯಿಲೆಗಳಿಲ್ಲದ ಕಾರಣ ಮತ್ತು ಸೋಂಕನ್ನು ಗೆಲ್ಲುವ ದೃಢ ಮನಸ್ಸು ಅವರಲ್ಲಿ ಇದ್ದಿದ್ದರಿಂದ, ಅವರು ಕೊರೋನಾ ಗೆಲ್ಲಲು ಸಾಧ್ಯವಾಯಿತು ಎಂದು ಘುಘೆ ಹೇಳುತ್ತಾರೆ.

ಶತಾಯುಷಿಗೆ, ತನಗೆ ಏನಾಗುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ವೈದ್ಯರು ಅವರಿಗೆ ದ್ರವ ಆಹಾರವನ್ನೇ ಸೇವಿಸುವಂತೆ ಸೂಚಿಸಿದರು. ಉದ್ವೇಗವು ಅವರ ಚೇತರಿಕೆಯ ಮೇಲೆ ಪರಿಣಾಮ ಬೀರದಂತೆ ನೋಡಿಕೊಳ್ಳಲು ಇಡೀ ಕುಟುಂಬ ನಿರ್ಧರಿಸಿತು ಎಂದು ಅವರು ಹೇಳುತ್ತಾರೆ.

ಮನಸ್ಸಿನಲ್ಲಿ ಸಕಾರಾತ್ಮಕ ಚಿಂತನೆಗಳನ್ನೇ ಬೆಳೆಸಲಾಯಿತು. ಎಲ್ಲರೂ ಸಹ ಶೀಘ್ರದಲ್ಲೇ ಗುಣಮುಖರಾಗಿ ಮನೆಗೆ ಮರಳುತ್ತಾರೆ ಎಂಬ ದೃಢವಾದ ನಂಬಿಕೆಯನ್ನು ಹೊಂದಿದ್ದರು. ಸಕಾರಾತ್ಮಕತೆ ಮತ್ತು ಭಯ ಮತ್ತು ಆತಂಕವನ್ನು ಮನೆ ಮಾಡಲು ಅನುಮತಿಸದಿರುವುದು, ಈ ಕಾಯಿಲೆಯಿಂದ ಹೊರಬರಲು ಅತಿ ದೊಡ್ಡ ಪರಿಹಾರವಾಗಿದೆ ಎಂದು ಈ ಕುಟುಂಬ ಸಂದೇಶ ಸಾರುತ್ತದೆ.

ನಿನ್ನೆ ತಡರಾತ್ರಿ ಸಾವು!

ಕೋವಿಡ್ -19 ಅನ್ನು ಯಶಸ್ವಿಯಾಗಿ ಸೋಲಿಸಿದ ಮಹಾರಾಷ್ಟ್ರದ ಅತ್ಯಂತ ಹಿರಿಯ ವ್ಯಕ್ತಿಯಾಗಿದ್ದ ಪುಣೆ ಮೂಲದ 100 ವರ್ಷದ ಮಹಿಳೆ, ನಿನ್ನೆ ತಡರಾತ್ರಿ ನಿಧನರಾದರು. ಆದರೆ ಕೊರೋನಾದಿಂದ ಸಾಯಲಿಲ್ಲ ; ವಯೋಸಹಜ ಸಾವು ಎಂದು ವೈದ್ಯರು ದೃಢಪಡಿಸಿದ್ದಾರೆ.

LEAVE A REPLY

Please enter your comment!
Please enter your name here