ಉಡುಪಿ: ಕೇವಲ ಮೂವರಲ್ಲಿ ಕೊರೊನಾ ಸೋಂಕು ಕಂಡು, ಅವರು ಗುಣಮುಖರಾಗಿ ಹಸಿರು ವಲಯದಲ್ಲಿದ್ದ ಉಡುಪಿ ಜಿಲ್ಲೆಯಲ್ಲಿ, ಬಳಿಕ ಹೊರ ದೇಶ,ರಾಜ್ಯಗಳ ಜನರ ವಾಪಾಸಾತಿಯಿಂದ ರಾಜ್ಯದಲ್ಲಿಯೇ ರಾಜ್ಯದಲ್ಲಿಯೇ ಅತೀ ಹೆಚ್ಚು ಸೋಂಕಿತರು ಇರುವ ಜಿಲ್ಲೆ ಎಂದೆನಿಸಿತು. ಇದೀಗ ಸೋಂಕಿತರು ಶೀಘ್ರ ಗುಣಮುಖರಾಗುವುದರಲ್ಲಿಯೂ ಉಡುಪಿ ಅಗ್ರಣಿಯಾಗಿದೆ.
ಉಡುಪಿ ಜಿಲ್ಲೆಯಲ್ಲಿ 944 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡು ಕೇವಲ 105 ಸಕ್ರಿಯ ಪ್ರಕರಣಗಳಿವೆ. ಉಡುಪಿ ಜಿಲ್ಲೆ ಆಲ್ಲದೆ ಬೇರಾವ ಜಿಲ್ಲೆಯಲ್ಲೂ ಇಷ್ಟು ಮಂದಿ ಗುಣಮುಖರಾಗಲಿಲ್ಲ. ಕಲ್ಬುರುಗಿಯಲ್ಲೂ ಸುಮಾರು ಉಡುಪಿಯಷ್ಟೇ ಸೋಂಕಿತರಿದ್ದರೂ, ಅಲ್ಲಿ ಇದುವರೆಗೆ ಬಿಡುಗಡೆಗೊಂಡಿರುವವರ ಸಂಖ್ಯೆ 646. ಅದಲ್ಲದೆ ಸೋಂಕಿತರ ಸಾವಿನ ಪ್ರಮಾಣದಲ್ಲೂ ಅತ್ಯಂತ ಕನಿಷ್ಟವಾಗುವ ಮೂಲಕ ಉಡುಪಿ ಅತ್ಯುತ್ತಮ ಸಾಧನೆ ಮಾಡಿದೆ. ಇಡೀ ದೇಶದಲ್ಲೇ ಅತೀ ಕಡಿಮೆ ಮಂದಿ ಸಾವನ್ನಪ್ಪಿರುವ ಸೋಂಕಿತರು (ಕೇವಲ ೧) ಇರುವ ಜಿಲ್ಲೆ ಎಂದರೆ ಅದು ಉಡುಪಿ .