ಕೊರೋನಾ : ದೇಶದಲ್ಲಿ 1 ಮಿಲಿಯನ್ ಸೋಂಕಿತರು!

0
50

ದೇಶಾದ್ಯಂತ ಕೊರೋನಾ ಅಟ್ಟಹಾಸ ಎಂದಿನಂತೆ ಮುಂದುವರೆದಿದ್ದು, ಸತತ ಎರಡನೇ ದಿನ 30 ಸಾವಿರಕ್ಕೂ ಅಧಿಕ ಸೋಂಕಿತರ ವರದಿಯಾಗಿದೆ. ನಿನ್ನೆಯ 35,468 ಹೊಸ ಸೋಂಕಿತರು ಸೇರಿ, ಈವರೆಗೆ ಒಟ್ಟು ಸೋಂಕಿತರ ಸಂಖ್ಯೆಯು 10,05,637 ಗೆ ತಲುಪಿದೆ. ಇದರಲ್ಲಿ, 3,43,036 ಸಕ್ರಿಯ ಪ್ರಕರಣಗಳಿವೆ.

ದೇಶದಲ್ಲಿ ಕೊರೋನಾ ಹಾವಳಿಯ ನಡುವೆ, ಸೋಂಕಿನಿಂದ ಗುಣಮುಖರಾದವರ ಸಂಖ್ಯೆಯೂ ವೇಗದಲ್ಲಿ ಏರುತ್ತಿದೆ. ನಿನ್ನೆ ಒಟ್ಟು 22,867 ಸೋಂಕಿತರು ಚೇತರಿಸಿಕೊಂಡಿದ್ದಾರೆ. ಇದರಿಂದ ಸೋಂಕಿನಿಂದ ಗುಣಮುಖರಾದವರ ಒಟ್ಟು ಸಂಖ್ಯೆ 6,36,602 ಗೆ ಏರಿದೆ.

ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಕಳೆದ 24 ಗಂಟೆಗಳಲ್ಲಿ ಸೋಂಕಿಗೆ 680 ಜನ ಬಲಿಯಾಗಿದ್ದು, ದೇಶದಲ್ಲಿ ಸೋಂಕಿಗೆ ಬಲಿಯಾದವರ ಒಟ್ಟು ಸಂಖ್ಯೆ 25,609 ಗೆ ತಲುಪಿದೆ ಎಂದು ವರದಿಯಾಗಿದೆ. ಅದಲ್ಲದೆ, ದೇಶದಲ್ಲಿ ಇದುವರೆಗೆ, 1.27 ಕೋಟಿ ಜನರನ್ನು ಕೋವಿಡ್-19 ಪರೀಕ್ಷೆಗೆ ಒಳಪಡಿಸಲಾಗಿದೆ.

ದಿನೇ ದಿನೇ ಸೋಂಕಿನ ಪರೀಕ್ಷೆಗೆ ಒಳಪಡಿಸುವವರ ಸಂಖ್ಯೆಯೂ ಜಾಸ್ತಿಯಾಗುತ್ತಿರುವುದರಿಂದ, ಪ್ರಕರಣಗಳ ಸಂಖ್ಯೆಯೂ ಹೆಚ್ಚುತ್ತಿದೆ. ನಿನ್ನೆ ಒಂದೇ ದಿನ 3,26,826 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ.

ಮಹಾರಾಷ್ಟ್ರವು ಭಾರತದಲ್ಲಿ ಅತೀ ಹೆಚ್ಚು ಸೋಂಕಿತರು ಇರುವ ರಾಜ್ಯವಾಗಿ (2.84 ಲಕ್ಷ) ಮುಂದುವರಿದಿದೆ. ತಮಿಳುನಾಡು (1.56 ಲಕ್ಷ) ಮತ್ತು ದೆಹಲಿ(1.18 ಲಕ್ಷ) ನಂತರದ ಸ್ಥಾನದಲ್ಲಿದೆ.
ದೇಶದಲ್ಲಿ ( ದೆಹಲಿಯನ್ನು ಜಿಲ್ಲೆಯಾಗಿ ಪರಿಗಣಿಸದಿದ್ದರೆ ) ಮುಂಬೈ(97,950) ನಗರವು ಅತೀ ಹೆಚ್ಚು ಸೋಂಕಿತರು ಇರುವ ನಗರವಾಗಿದೆ. ಚೆನ್ನೈ(82,128) ಮತ್ತು ಥಾಣೆ(69,471) ನಂತರದ ಸ್ಥಾನದಲ್ಲಿದೆ. ದೇಶದ ಬಹುತೇಕ ರಾಜ್ಯಗಳ ಸೋಂಕಿತರಿಗಿಂತ ಹೆಚ್ಚು ಸೋಂಕಿತರು ಈ 3 ನಗರಗಳಲ್ಲಿ ಇದ್ದಾರೆ.

ಪ್ರಸ್ತುತ ದೇಶದಲ್ಲಿ 3,43,036 ಸಕ್ರಿಯ ಪ್ರಕರಣಗಳು ಇದ್ದು, 6,36,602 ಸೋಂಕಿತರು ಗುಣಮುಖರಾಗಿದ್ದಾರೆ. ಭಾರತದಲ್ಲಿ ಕೋವಿಡ್-19 ನಿಂದ ಚೇತರಿಸಿಕೊಳ್ಳುವ ರೋಗಿಗಳ ಸಂಖ್ಯೆಯೂ ಹೆಚ್ಚುತ್ತಲೇ ಇದ್ದು, ಸದ್ಯ ದೇಶದಲ್ಲಿ ಚೇತರಿಕೆ ಪ್ರಮಾಣವು ಶೇ.63.31 ನಷ್ಟಿದೆ ಮತ್ತು ಸಾವಿನ ಪ್ರಮಾಣವು ಶೇ. 2.54 ರಷ್ಟಿದೆ.

ವಿಶ್ವದಲ್ಲಿ ಭಾರತವು ಕೊರೋನಾ ಸೋಂಕಿನಿಂದ ಅತಿ ಹೆಚ್ಚು ಹಾನಿಗೊಳಗಾದ ಮೂರನೇ ರಾಷ್ಟ್ರವಾಗಿದ್ದು, ಅಮೇರಿಕಾ (36.94 ಲಕ್ಷ) ಮತ್ತು ಬ್ರೆಜಿಲ್ (20.14 ಲಕ್ಷ) ಮಾತ್ರ ಭಾರತಕ್ಕಿಂತಲೂ ಕೆಟ್ಟ ಪರಿಸ್ಥಿತಿಯಲ್ಲಿದೆ. ಭಾರತದಲ್ಲಿ ಜನಸಂಖ್ಯೆಯೂ ಹೆಚ್ಚಿರುವುದರಿಂದ, ಪ್ರತಿ 10 ಲಕ್ಷಕ್ಕೆ ದೇಶದಲ್ಲಿ ಕೇವಲ 728 ಸೋಂಕಿತರಿರುತ್ತಾರೆ. ಇದು ವಿಶ್ವದ ಟಾಪ್ 20 ಸೋಂಕು ಪೀಡಿತ ರಾಷ್ಟ್ರಗಳಿಗಿಂತ ಉತ್ತಮವಾಗಿದೆ.

ದೇಶದ ಕೊರೋನಾ ಸೋಂಕಿನ ಕುರಿತು ಮತ್ತಷ್ಟು ವಿಸ್ತೃತವಾದ ವಿವರಗಳು ಇಲ್ಲಿದೆ ನೋಡಿ ಮತ್ತು ಜಗತ್ತಿನ ಎಲ್ಲಾ ರಾಷ್ಟ್ರಗಳ ಅಂಕಿ ಅಂಶಗಳನ್ನು ಇಲ್ಲಿ ನೋಡಿ

LEAVE A REPLY

Please enter your comment!
Please enter your name here