ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಮತ್ತು ಕೇರಳ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನೇ ದಿನೇ ಏರುತ್ತಿದೆ. ಆರಂಭಿಕ ದಿನಗಳಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಅನಿವಾಸಿ ಭಾರತೀಯರು ಭಾರತಕ್ಕೆ ಮರಳಿದ್ದರಿಂದ ಸೋಂಕಿತರ ಸಂಖ್ಯೆ ಹೆಚ್ಚುತ್ತಿತ್ತು ಎನ್ನಲಾಗುತ್ತಿತ್ತು. ಆದರೆ ಸೋಂಕು, ಈಗ ಜಿಲ್ಲೆಯಲ್ಲಿ ವ್ಯಾಪಕವಾಗಿ ಹರಡಲು ಪ್ರಾರಂಭವಾಗಿದ್ದು, ನಗರ ಪ್ರದೇಶದಿಂದ ಗ್ರಾಮಾಂತರ ಪ್ರದೇಶಕ್ಕೂ ಕೊರೋನಾ ಕಾಲಿಟ್ಟಿದೆ.
ಅದೇ ರೀತಿ ಬಹಳ ಸಮಯಗಳ ಕಾಲ ಸೋಂಕಿತರ ವರದಿಯಾಗದ ಕೇರಳ ರಾಜಧಾನಿ ತಿರುವನಂತಪುರ ಸೇರಿದಂತೆ ಇಡೀಯ ಕೇರಳದಲ್ಲೂ ಸೋಂಕು ವ್ಯಾಪಕವಾಗಿ ಹರಡುತ್ತಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸತತವಾಗಿ ಶತಕ ಬಾರಿಸುತ್ತಿದ್ದ ಕೊರೋನಾ, ನಿನ್ನೆ ತ್ರಿಶತಟ ಬಾರಿಸಿ ಮೆರೆದಿತ್ತು. ಇಂದಿನ ಜಿಲ್ಲಾ ಬುಲೆಟಿನ್ ಪ್ರಕಾರ, ಇಂದು 237 ಸೋಂಕಿತರ ವರದಿಯಾಗಿದೆ. ಇದರಿಂದಾಗಿ ಒಟ್ಟು ಸೋಂಕಿತರ ಸಂಖ್ಯೆ 3,311 ಗೆ ಏರಿದ್ದು, 1,848 ಪ್ರಕರಣಗಳು ಸಕ್ರಿಯವಾಗಿದೆ.
ಜಿಲ್ಲೆಯಲ್ಲಿಂದು 109 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿರುತ್ತಾರೆ. ಇದರಿಂದಾಗಿ, ಒಟ್ಟು 1,387 ಸೋಂಕಿತರು ಗುಣಮುಖರಾಗಿದ್ದಾರೆ. ಇದುವರೆಗೆ ಜಿಲ್ಲೆಯಲ್ಲಿ 65 ಸೋಂಕಿತರು ಕೊರೋನಾಗೆ ಬಲಿಯಾಗಿದ್ದಾರೆ.
(ನಿನ್ನೆ ಕರ್ನಾಟಕ ರಾಜ್ಯದ ಬುಲೆಟಿನ್ ನಲ್ಲಿ ದ.ಕ ದ ಸೋಂಕಿತರ ಸಂಖ್ಯೆಯನ್ನು ತಪ್ಪಾಗಿ ಉಲ್ಲೇಖಿಸಿದ್ದರಿಂದ, ಇಂದಿನ ರಾಜ್ಯ ಬುಲೆಟಿನ್ ನಲ್ಲಿ ಜಿಲ್ಲೆಯ ಹೊಸ ಸೋಂಕಿತರ ಸಂಖ್ಯೆ 509 ಎಂದು ವರದಿಯಾಗಿದೆ.)
ಉಡುಪಿಯಲ್ಲಿ ಕಳೆದ ತಿಂಗಳು ಸೋಂಕಿತರ ಸಂಖ್ಯೆಯಲ್ಲಿ ಭಾರಿ ಏರಿಕೆ ಕಂಡಿತ್ತು. ಬಳಿಕ ಜಿಲ್ಲೆಯಲ್ಲಿ ಜಾರಿಯಾದ ಕಟ್ಟುನಿಟ್ಟಿನ ಕ್ರಮಗಳಿಂದಾಗಿ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆ ಕಾಣಲಾರಂಭಿಸಿತು. ಇದೀಗ ಸೋಂಕಿತರ ಸಂಖ್ಯೆ ಮತ್ತೆ ಏರುತ್ತಿದೆ. ಇಂದಿನ ಜಿಲ್ಲಾ ಬುಲೆಟಿನ್ ಪ್ರಕಾರ, ಜಿಲ್ಲೆಯಲ್ಲಿ ಇಂದು 109 ಸೋಂಕಿತರ ವರದಿಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 2,088 ಗೆ ಏರಿದೆ.
ಸದ್ಯ 492 ಸಕ್ರಿಯ ಪ್ರಕರಣಗಳು ಇದ್ದು, ಬಹುತೇಕ ಪ್ರಕರಣಗಳು ಕಳೆದ ಒಂದು ವಾರದಲ್ಲಿ ಬಂದಿರುತ್ತದೆ. ಸೋಂಕಿನ ಹಾವಳಿ ಮುಂದೆ ಇಂದು 54 ಸೋಂಕಿತರು ಗುಣಮುಖರಾಗಿದ್ದು, ಜಿಲ್ಲೆಯಲ್ಲಿ ಚೇತರಿಸಿಕೊಂಡವರ ಸಂಖ್ಯೆ 1,586 ಗೆ ಏರಿದೆ. ಜಿಲ್ಲೆಯಲ್ಲಿ ಇದುವರೆಗೆ 10 ಸೋಂಕಿತರು ಕೊರೋನಾಗೆ ಬಲಿಯಾಗಿದ್ದಾರೆ.
ಕೇರಳದ ಕಾಸರಗೋಡಿನಲ್ಲಿ ಇಂದು 29 ಸೋಂಕಿತರ ವರದಿಯಾಗಿದೆ. ಇದರಿಂದಾಗಿ ಒಟ್ಟು ಸೋಂಕಿತರ ಸಂಖ್ಯೆ 847 ಗೆ ಏರಿದ್ದು, 347 ಪ್ರಕರಣಗಳು ಸಕ್ರಿಯವಾಗಿದೆ. ಕೊರೋನಾ ಹಾವಳಿಯ ಮಧ್ಯೆ, ಜಿಲ್ಲೆಯಲ್ಲಿಂದು 9 ಸೋಂಕಿತರು ಗುಣಮುಖರಾಗಿದ್ದು, ಇದುವರೆಗೆ 500 ಸೋಂಕಿತರು ಚೇತರಿಕೆ ಕಂಡಿದ್ದಾರೆ.
ಕೇರಳ ರಾಜ್ಯದಲ್ಲಿ ಇಂದು 593 ಸೋಂಕಿತರ ವರದಿಯಾಗಿದೆ. ಇದರಿಂದ ಒಟ್ಟು ಸೋಂಕಿತರ ಸಂಖ್ಯೆ 11,660 ಗೆ ಏರಿದ್ದು, 6,417 ಪ್ರಕರಣಗಳು ಸಕ್ರಿಯವಾಗಿದೆ. ಅದಲ್ಲದೆ, ಇಂದು ರಾಜ್ಯದಲ್ಲಿ 204 ಸೋಂಕಿತರು ಗುಣಮುಖರಾಗಿದ್ದು, ಇದುವರೆಗೆ ಒಟ್ಟು 5,198 ಸೋಂಕಿತರು ಚೇತರಿಸಿಕೊಂಡಿರುತ್ತಾರೆ. ಇಬ್ಬರು ಸೋಂಕಿತರು ಸಾವನ್ನಪ್ಪಿ, ಒಟ್ಟು ಸಾವಿನ ಸಂಖ್ಯೆ 41 ಕ್ಕೆ ಏರಿದೆ