ಕೊರೋನಾ : ದ.ಕ ದ್ವಿಶತಕ ; ಉಡುಪಿಯಲ್ಲಿ ಶತಕ !

0
151
Tap to know MORE!

ಕರಾವಳಿ ಜಿಲ್ಲೆಗಳಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನೇ ದಿನೇ ಏರುತ್ತಿದೆ. ಪ್ರಾರಂಭದಲ್ಲಿ ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಅನಿವಾಸಿ ಭಾರತೀಯರು ಭಾರತಕ್ಕೆ ಮರಳಿದ್ದರಿಂದ ಸೋಂಕಿತರ ಸಂಖ್ಯೆ ಹೆಚ್ಚುತ್ತಿತ್ತು ಎನ್ನಲಾಗುತ್ತಿತ್ತು. ಆದರೆ ಈಗ ಜಿಲ್ಲೆಯಲ್ಲಿ ವ್ಯಾಪಕವಾಗಿ ಹರಡಲು ಪ್ರಾರಂಭವಾಗಿದ್ದು, ನಗರ ಪ್ರದೇಶದಿಂದ ಗ್ರಾಮಾಂತರ ಪ್ರದೇಶಕ್ಕೂ ಕೊರೋನಾ ಕಾಲಿಟ್ಟಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸತತವಾಗಿ ಶತಕ ಬಾರಿಸುತ್ತಿದ್ದ ಕೊರೋನಾ, ಎರಡು ದಿನಗಳ ಕಾಲ ಅರ್ಧಶತಕಕ್ಕೆ ತೃಪ್ತಿಪಟ್ಟಿತ್ತು. ಆದರೆ ಇಂದು ಜಿಲ್ಲೆಯಲ್ಲಿ 238 ಸೋಂಕಿತರ ವರದಿಯಾಗಿದೆ. ಇದರಿಂದಾಗಿ ಒಟ್ಟು ಸೋಂಕಿತರ ಸಂಖ್ಯೆ 2,763 ಗೆ ಏರಿದೆ. ಇದರಲ್ಲಿ 1,537 ಸಕ್ರಿಯ ಪ್ರಕರಣಗಳಿವೆ.

ಜಿಲ್ಲೆಯಲ್ಲಿಂದು 74 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿರುತ್ತಾರೆ. ಇದರಿಂದಾಗಿ, ಒಟ್ಟು 1,163 ಸೋಂಕಿತರು ಗುಣಮುಖರಾಗಿದ್ದಾರೆ. ಇದುವರೆಗೆ ಜಿಲ್ಲೆಯಲ್ಲಿ 61 ಸೋಂಕಿತರು ಕೊರೋನಾಗೆ ಬಲಿಯಾಗಿದ್ದಾರೆ.

ಉಡುಪಿಯಲ್ಲಿ ಕಳೆದ ತಿಂಗಳು ಸೋಂಕಿತರ ಸಂಖ್ಯೆಯಲ್ಲಿ ಭಾರಿ ಏರಿಕೆ ಕಂಡಿತ್ತು. ಬಳಿಕ ಜಿಲ್ಲೆಯಲ್ಲಿ ಜಾರಿಯಾದ ಕಟ್ಟುನಿಟ್ಟಿನ ಕ್ರಮಗಳಿಂದಾಗಿ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆ ಕಾಣಲಾರಂಭಿಸಿತು. ಇದೀಗ ಸೋಂಕಿತರ ಸಂಖ್ಯೆ ಮತ್ತೆ ಏರುತ್ತಿದ್ದು,ಕೊರೋನಾ ಸೋಂಕು ಬಹು ದಿನಗಳ ಬಳಿಕ ಶತಕ ದಾಖಲಿಸಿದೆ. ಜಿಲ್ಲೆಯಲ್ಲಿ ಇಂದು 109 ಸೋಂಕಿತರ ವರದಿಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 1,895 ಗೆ ಏರಿದೆ.

ಸದ್ಯ 428 ಸಕ್ರಿಯ ಪ್ರಕರಣಗಳು ಇದ್ದು, ಬಹುತೇಕ ಪ್ರಕರಣಗಳು ಕಳೆದ ಒಂದು ವಾರದಲ್ಲಿ ಬಂದಿರುತ್ತದೆ. ಸೋಂಕಿನ ಹಾವಳಿ ಮುಂದೆ ಇಂದು 80 ಸೋಂಕಿತರು ಗುಣಮುಖರಾಗಿದ್ದು, ಜಿಲ್ಲೆಯಲ್ಲಿ ಚೇತರಿಸಿಕೊಂಡವರ ಸಂಖ್ಯೆ 1,462 ಗೆ ಏರಿದೆ. ಉಡುಪಿಯಲ್ಲಿ ಇಂದು ಇಬ್ಬರು ಸೋಂಕಿತರು ಸಾವನ್ನಪ್ಪಿದ್ದು, ಇದುವರೆಗೆ 5 ಸೋಂಕಿತರು ಕೊರೋನಾಗೆ ಬಲಿಯಾಗಿದ್ದಾರೆ.

ಕೇರಳದ ಕಾಸರಗೋಡಿನಲ್ಲಿ ಇಂದು 18 ಸೋಂಕಿತರ ವರದಿಯಾಗಿದೆ. ಇದರಿಂದಾಗಿ ಒಟ್ಟು ಸೋಂಕಿತರ ಸಂಖ್ಯೆ 786ಗೆ ಏರಿದ್ದು, 308 ಪ್ರಕರಣಗಳು ಸಕ್ರಿಯವಾಗಿದೆ. ಕೊರೋನಾ ಹಾವಳಿಯ ಮಧ್ಯೆ, ಜಿಲ್ಲೆಯಲ್ಲಿಂದು 17 ಸೋಂಕಿತರು ಗುಣಮುಖರಾಗಿದ್ದು, ಇದುವರೆಗೆ 460 ಸೋಂಕಿತರು ಚೇತರಿಕೆ ಕಂಡಿದ್ದಾರೆ.

ಕೇರಳ ರಾಜ್ಯದಲ್ಲಿ ದಾಖಲೆಯ 722 ಸೋಂಕಿತರ ವರದಿಯಾಗಿದೆ. ಇವುಗಳ ಪೈಕಿ 481 ಸೋಂಕಿತರು ಇತರರ ಸಂಪರ್ಕದ ಮೂಲಕ ಸೋಂಕು ತಗುಲಿಸಿಕೊಂಡಿರುವುದು ಸರ್ಕಾರಕ್ಕೆ ಮತ್ತು ಜನತೆಗೆ ಆತಂಕಕ್ಕೆ ದೂಡಿದೆ. ಇದರಿಂದ ಒಟ್ಟು ಸೋಂಕಿತರ ಸಂಖ್ಯೆ 10,275ಗೆ ಏರಿದ್ದು, 5,372 ಪ್ರಕರಣಗಳು ಸಕ್ರಿಯವಾಗಿದೆ. ಇಂದು 228 ಸೋಂಕಿತರು ಗುಣಮುಖರಾಗಿದ್ದು, ಇಬ್ಬರು ಸೋಂಕಿತ ಸಾವನ್ನಪ್ಪಿರುತ್ತಾರೆ.

LEAVE A REPLY

Please enter your comment!
Please enter your name here