ಕೊರೋನಾ : ದ.ಕ 173; ಉಡುಪಿ 217; ಕಾಸರಗೋಡು 153!

0
230
Tap to know MORE!

ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನೇ ದಿನೇ ಏರುತ್ತಿದೆ. ನಗರದಿಂದ ಗ್ರಾಮಾಂತರ ಪ್ರದೇಶದಡೆಗೂ ಕೊರೋನಾ ವ್ಯಾಪಿಸಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು 173 ಸೋಂಕಿತರ ವರದಿಯಾಗಿದೆ. ಇದರಿಂದಾಗಿ ಒಟ್ಟು ಸೋಂಕಿತರ ಸಂಖ್ಯೆ 6,715 ಗೆ ಏರಿದ್ದು, 3,378 ಪ್ರಕರಣಗಳು ಸಕ್ರಿಯವಾಗಿದೆ.

ಜಿಲ್ಲೆಯಲ್ಲಿಂದು 107 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿರುತ್ತಾರೆ. ಇದರಿಂದಾಗಿ, ಒಟ್ಟು 3,116 ಸೋಂಕಿತರು ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಇಂದು 11 ಸೋಂಕಿತರು ಸಾವನ್ನಪ್ಪಿದ್ದು, ಇದುವರೆಗೆ ಸುಮಾರು 201 ಸೋಂಕಿತರು ಕೊರೋನಾಗೆ ಬಲಿಯಾಗಿದ್ದಾರೆ.

ಉಡುಪಿಯಲ್ಲೂ ಕೊರೋನಾ ಸೋಂಕಿತರ ಸಂಖ್ಯೆಯಲ್ಲಿ ಭಾರೀ ಏರಿಕೆಯಾಗುತ್ತಿದೆ. ಇಂದಿನ ಜಿಲ್ಲಾ ಬುಲೆಟಿನ್ ಪ್ರಕಾರ, ಜಿಲ್ಲೆಯಲ್ಲಿ ಇಂದು 217 ಸೋಂಕಿತರ ವರದಿಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 5,360 ಗೆ ಏರಿದೆ.

ಸದ್ಯ 2,153 ಸಕ್ರಿಯ ಪ್ರಕರಣಗಳು ಇದೆ‌. ಸೋಂಕಿನ ಹಾವಳಿ ಮುಂದೆ ಇಂದು 85 ಸೋಂಕಿತರು ಗುಣಮುಖರಾಗಿದ್ದು, ಜಿಲ್ಲೆಯಲ್ಲಿ ಚೇತರಿಸಿಕೊಂಡವರ ಸಂಖ್ಯೆ 3,157 ಗೆ ಏರಿದೆ. ಜಿಲ್ಲೆಯಲ್ಲಿ ಇಂದು 6 ಸೋಂಕಿತರ ಬಲಿಯಾಗಿದ್ದು, ಇದುವರೆಗೆ 50 ಸೋಂಕಿತರು ಸಾವನ್ನಪ್ಪಿದ್ದಾರೆ.

ಕೇರಳದ ಕಾಸರಗೋಡಿನಲ್ಲಿ ಇಂದು 153 ಸೋಂಕಿತರ ವರದಿಯಾಗಿದೆ. ಇದರಿಂದಾಗಿ ಒಟ್ಟು ಸೋಂಕಿತರ ಸಂಖ್ಯೆ 2,347 ಗೆ ಏರಿದ್ದು, 1,002 ಪ್ರಕರಣಗಳು ಸಕ್ರಿಯವಾಗಿದೆ. ಕೊರೋನಾ ಹಾವಳಿಯ ಮಧ್ಯೆ, ಜಿಲ್ಲೆಯಲ್ಲಿಂದು 60 ಸೋಂಕಿತರು ಗುಣಮುಖರಾಗಿದ್ದು, ಇದುವರೆಗೆ 1,275 ಸೋಂಕಿತರು ಚೇತರಿಕೆ ಕಂಡಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೆ 6 ಸೋಂಕಿತರು ಸಾವನ್ನಪ್ಪಿದ್ದಾರೆ.

ಕೇರಳ ರಾಜ್ಯದಲ್ಲೂ ಬಹಳ ವೇಗವಾಗಿ ಸೋಂಕು ಹರಡುತ್ತಲೇ ಇದೆ. ಇಂದಿನ ವರದಿಯಲ್ಲಿ, ರಾಜ್ಯದಲ್ಲಿ 1,298 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಇಂದು ಸಂಪರ್ಕದ ಮೂಲಕವೇ ಸುಮಾರು 1,017 ಜನರು ಸೋಂಕಿಗೆ ತುತ್ತಾಗಿರುತ್ತಾರೆ. ಇದರಿಂದಾಗಿ ಒಟ್ಟು ಸೋಂಕಿತರ ಸಂಖ್ಯೆ 30,443 ಏರಿಕೆಯಾಗಿದ್ದು, 11,983 ಪ್ರಕರಣಗಳು ಸಕ್ರಿಯವಾಗಿವೆ.

ಇಂದು ಕೇರಳ ರಾಜ್ಯದಲ್ಲಿ 800 ಸೋಂಕಿತರು ಸೋಂಕಿನಿಂದ ಚೇತರಿಸಿಕೊಂಡಿರುತ್ತಾರೆ. ಇದುವರೆಗೆ ರಾಜ್ಯದಲ್ಲಿ 18,337 ಸೋಂಕಿತರು ಗುಣಮುಖರಾಗಿದ್ದಾರೆ. ಅದಲ್ಲದೆ ರಾಜ್ಯದಲ್ಲಿ ಇಂದು 2 ಸೋಂಕಿತರು ಸಾವನ್ನಪ್ಪಿದ್ದು, ಇದುವರೆಗೆ ಒಟ್ಟು 97 ಸೋಂಕಿತರು ಸಾವನ್ನಪ್ಪಿದಂತಾಗಿದೆ.

LEAVE A REPLY

Please enter your comment!
Please enter your name here