ಕೊರೋನಾ : ದ.ಕ 218, ಉಡುಪಿ 182, ಕಾಸರಗೋಡು 105!

0
68

ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನೇ ದಿನೇ ಏರುತ್ತಿದೆ. ನಗರದಿಂದ ಗ್ರಾಮಾಂತರ ಪ್ರದೇಶದಡೆಗೂ ಕೊರೋನಾ ವ್ಯಾಪಿಸಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು 218 ಸೋಂಕಿತರ ವರದಿಯಾಗಿದೆ. ಇದರಿಂದಾಗಿ ಒಟ್ಟು ಸೋಂಕಿತರ ಸಂಖ್ಯೆ 4,612 ಗೆ ಏರಿದ್ದು, 2,370 ಪ್ರಕರಣಗಳು ಸಕ್ರಿಯವಾಗಿದೆ.

ಜಿಲ್ಲೆಯಲ್ಲಿಂದು 140 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿರುತ್ತಾರೆ. ಇದರಿಂದಾಗಿ, ಒಟ್ಟು 2,127 ಸೋಂಕಿತರು ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಇಂದು 8 ಸೋಂಕಿತರು ಸಾವನ್ನಪ್ಪಿದ್ದು, ಇದುವರೆಗೆ ಸುಮಾರು 104 ಸೋಂಕಿತರು ಕೊರೋನಾಗೆ ಬಲಿಯಾಗಿದ್ದಾರೆ.

ಉಡುಪಿಯಲ್ಲಿ ಒಂದು ಹಂತಕ್ಕೆ ಬ್ರೇಕ್ ನೀಡಿದ್ದ ಕೊರೋನಾ, ಇತ್ತೀಚೆಗೆ ಸತತವಾಗಿ ಶತಕ ದಾಖಲಿಸುತ್ತಿದೆ. ಇಂದಿನ ಜಿಲ್ಲಾ ಬುಲೆಟಿನ್ ಪ್ರಕಾರ, ಜಿಲ್ಲೆಯಲ್ಲಿ ಇಂದು 182 ಸೋಂಕಿತರ ವರದಿಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 3,218 ಗೆ ಏರಿದೆ.

ಸದ್ಯ 1,199 ಸಕ್ರಿಯ ಪ್ರಕರಣಗಳು ಇದೆ‌. ಸೋಂಕಿನ ಹಾವಳಿ ಮುಂದೆ ಇಂದು 100 ಸೋಂಕಿತರು ಗುಣಮುಖರಾಗಿದ್ದು, ಜಿಲ್ಲೆಯಲ್ಲಿ ಚೇತರಿಸಿಕೊಂಡವರ ಸಂಖ್ಯೆ 2,008 ಗೆ ಏರಿದೆ. ಅದಲ್ಲದೆ ಜಿಲ್ಲೆಯಲ್ಲಿ ಇದುವರೆಗೆ 11 ಸೋಂಕಿತರು ಕೊರೋನಾಗೆ ಬಲಿಯಾಗಿದ್ದಾರೆ.

ಕೇರಳದ ಕಾಸರಗೋಡಿನಲ್ಲಿ ಇಂದು 105 ಸೋಂಕಿತರ ವರದಿಯಾಗಿದೆ. ಇದರಿಂದಾಗಿ ಒಟ್ಟು ಸೋಂಕಿತರ ಸಂಖ್ಯೆ 1,225 ಗೆ ಏರಿದ್ದು, 507 ಪ್ರಕರಣಗಳು ಸಕ್ರಿಯವಾಗಿದೆ. ಕೊರೋನಾ ಹಾವಳಿಯ ಮಧ್ಯೆ, ಜಿಲ್ಲೆಯಲ್ಲಿಂದು 36 ಸೋಂಕಿತರು ಗುಣಮುಖರಾಗಿದ್ದು, ಇದುವರೆಗೆ 612 ಸೋಂಕಿತರು ಚೇತರಿಕೆ ಕಂಡಿದ್ದಾರೆ.

ಕೇರಳ ರಾಜ್ಯದಲ್ಲೂ ಬಹಳ ವೇಗವಾಗಿ ಸೋಂಕು ಹರಡುತ್ತಲೇ ಇದೆ. ಇಂದಿನ ವರದಿಯಲ್ಲಿ, ರಾಜ್ಯದಲ್ಲಿ 1,103 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಇಂದು ಸಂಪರ್ಕದ ಮೂಲಕವೇ ಸುಮಾರು 838 ಜನರು ಸೋಂಕಿಗೆ ತುತ್ತಾಗಿರುತ್ತಾರೆ. ಇದರಿಂದಾಗಿ ಒಟ್ಟು ಸೋಂಕಿತರ ಸಂಖ್ಯೆ 18,099 ಏರಿಕೆಯಾಗಿದ್ದು, 9,679 ಪ್ರಕರಣಗಳು ಸಕ್ರಿಯವಾಗಿವೆ.

ಇಂದು ರಾಜ್ಯದಲ್ಲಿ 968 ಸೋಂಕಿತರು ಸೋಂಕಿನಿಂದ ಚೇತರಿಸಿಕೊಂಡಿರುತ್ತಾರೆ. ಇದುವರೆಗೆ ರಾಜ್ಯದಲ್ಲಿ 7,562 ಸೋಂಕಿತರು ಗುಣಮುಖರಾಗಿದ್ದಾರೆ. ಅದಲ್ಲದೆ ರಾಜ್ಯದಲ್ಲಿ ಇಂದು 2 ಸೋಂಕಿತರು ಸಾವನ್ನಪ್ಪಿದ್ದು, ಇದುವರೆಗೆ ಒಟ್ಟು 53 ಸೋಂಕಿತರು ಸಾವನ್ನಪ್ಪಿದಂತಾಗಿದೆ.

LEAVE A REPLY

Please enter your comment!
Please enter your name here