ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನೇ ದಿನೇ ಏರುತ್ತಿದೆ. ನಗರದಿಂದ ಗ್ರಾಮಾಂತರ ಪ್ರದೇಶದಡೆಗೂ ಕೊರೋನಾ ವ್ಯಾಪಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು 243 ಸೋಂಕಿತರ ವರದಿಯಾಗಿದೆ. ಇದರಿಂದಾಗಿ ಒಟ್ಟು ಸೋಂಕಿತರ ಸಂಖ್ಯೆ 7,591 ಗೆ ಏರಿದ್ದು, 2,629 ಪ್ರಕರಣಗಳು ಸಕ್ರಿಯವಾಗಿದೆ.
ಜಿಲ್ಲೆಯಲ್ಲಿಂದು ದಾಖಲೆಯ 519 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿರುತ್ತಾರೆ. ಇದರಿಂದಾಗಿ, ಒಟ್ಟು 4,725 ಸೋಂಕಿತರು ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಇಂದು 9 ಸೋಂಕಿತರು ಸಾವನ್ನಪ್ಪಿದ್ದು, ಇದುವರೆಗೆ ಸುಮಾರು 235 ಸೋಂಕಿತರು ಕೊರೋನಾಗೆ ಬಲಿಯಾಗಿದ್ದಾರೆ.
ಉಡುಪಿಯಲ್ಲೂ ಕೊರೋನಾ ಸೋಂಕಿತರ ಸಂಖ್ಯೆಯಲ್ಲಿ ಭಾರೀ ಏರಿಕೆಯಾಗುತ್ತಿದೆ. ಇಂದಿನ ಜಿಲ್ಲಾ ಬುಲೆಟಿನ್ ಪ್ರಕಾರ, ಜಿಲ್ಲೆಯಲ್ಲಿ ಇಂದು 219 ಸೋಂಕಿತರ ವರದಿಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 6,509 ಗೆ ಏರಿದೆ.
ಸದ್ಯ 2,820 ಸಕ್ರಿಯ ಪ್ರಕರಣಗಳು ಇದೆ. ಸೋಂಕಿನ ಹಾವಳಿ ಮುಂದೆ ಇಂದು 161 ಸೋಂಕಿತರು ಗುಣಮುಖರಾಗಿದ್ದು, ಜಿಲ್ಲೆಯಲ್ಲಿ ಚೇತರಿಸಿಕೊಂಡವರ ಸಂಖ್ಯೆ 3,623 ಗೆ ಏರಿದೆ. ಜಿಲ್ಲೆಯಲ್ಲಿ ಇದುವರೆಗೆ 66 ಸೋಂಕಿತರು ಸಾವನ್ನಪ್ಪಿದ್ದಾರೆ.