ಕೊರೋನಾ ನಂತರದ ದಿನಗಳು ಹೇಗಿರಬಹುದು?

0
198
Tap to know MORE!

ಕೊರೋನಾ ಎಂಬ ಪೆಡಂಭೂತ ತನ್ನ ವಿಷ ಜ್ವಾಲೆಯಿಂದ ಇಡೀ ವಿಶ್ವವನ್ನೇ ನಡುಗಿಸಿದೆ. ಈ ವಿಷ ವರ್ತುಲವನ್ನು ಭೇದಿಸಿ ಗೆದ್ದಾಗ ಭವಿಷ್ಯ ಹೇಗಿರಬಹುದು ಎಂಬ ಚಿಂತೆ ಮನುಷ್ಯನಿಗೆ ಕಾಡದೇ ಇರದು.

 1. ಮುಂದಿನ ಕೆಲವು ಸಮಯದವರೆಗೆ ಗುಂಪು ಸೇರಲು ಜನರು ಭಯಪಡಬಹುದು.
 2. ಒಬ್ಬರ ವಸ್ತುಗಳನ್ನು ಇನ್ನೊಬ್ಬರು ಬಳಸಲು ಸಂದೇಹ ಪಡಬಹುದು.
 3. ಒಬ್ಬರ ಎಂಜಲು ಇನ್ನೊಬ್ಬರು ತಿನ್ನಲು ಪುನರ್ ಆಲೋಚಿಸಬಹುದು.
 4. ಆದಷ್ಟು ಮನೆಯ ಸಾಮಾಗ್ರಿಗಳನ್ನೇ ಬಳಸಲು ಉತ್ಸಾಹ ತೋರಬಹುದು.
 5. ಸದ್ಯಕ್ಕೆ ಪ್ರಾವಾಸಾದಿಗಳನ್ನು ಮುಂದೂಡಬಹುದು.ವಿದೇಶ ಪ್ರಯಾಣವಂತೂ ( ಅತ್ಯವಶ್ಯ ಹೊರತುಪಡಿಸಿ ) ಗಗನ ಕುಸುಮವಾಗಬಹುದು. ವಿದೇಶಿಗರನ್ನು ಕಂಡರೆ ಆಗದಿರಬಹುದು.
 6. ಪಬ್, ಕ್ಲಬ್ಬು ಸ್ವಲ್ಪ ಮಟ್ಟಿಗೆ ಕಡಿಮೆ ಆಗಬಹುದು.
 7. ಧಾರ್ಮಿಕ ಆಚರಣೆಗಳು ಬೆಳೆಯಬಹುದು.
 8. ಕುಟುಂಬದಲ್ಲಿ ಪ್ರೀತಿ ಅನ್ಯೋನ್ಯತೆ ಹೆಚ್ಚಾಗಬಹುದು.
 9. ” ಆರೋಗ್ಯವೇ ಭಾಗ್ಯ ” ಎಂಬ ಭಾವ ಜನರ ಮನಸ್ಸಿನಲ್ಲಿ ಬೇರೂರಬಹುದು.
 10. ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವಂತಹ ಆಹಾರ ಸೇವನೆಗಳಿಗೆ ಉತ್ಸುಕತರಾಗಬಹುದು.
 11. ಒತ್ತಡ ನಿರ್ವಹಣೆಗೆ ಯೋಗ, ವ್ಯಾಯಾಮ, ಧ್ಯಾನಕ್ಕೆ ಶರಣಾಗಬಹುದು. ದುಶ್ಚಟ ನಿವಾರಣೆಗೆ ಸಂಕಲ್ಪಿಸಬಹುದು.
 12. ವೈಯಕ್ತಿಕ ಹಾಗೂ ಮನೆಗಳಲ್ಲಿ ಸ್ವಚ್ಛತೆ ಮತ್ತು ಶುದ್ಧತೆಗೆ ಪ್ರಾಶ್ಯ ಸ್ತ್ಯ ನೀಡಬಹುದು.
 13. ನಮ್ಮೊಳಗಿನ ದ್ವೇಷ, ಅಸೂಯೆ, ಕಾಮ ಕ್ರೋಧ ನಿವಾರಣೆಯಾಗಬಹುದು.
 14. ಪ್ರೀತಿ, ದಯೆ, ಅನುಕಂಪಗಳು ಉದ್ದೀಪನಗೊಳ್ಳಬಹುದು.
 15. ಸತ್ಯ, ಧರ್ಮ, ನ್ಯಾಯ, ನೀತಿ, ನಿಸ್ವಾರ್ಥ ಬದುಕು ನಮ್ಮದಾಗಬುದು.
 16. ಸಾಮಾಜಿಕ, ಧಾರ್ಮಿಕ ಸೇವಾ ಕಾರ್ಯಗಳಿಗೆ ಜನರು ಹೆಚ್ಚು ಹೆಚ್ಚು ಒಲವು ತೋರಬಹುದು.
 17. ಯುದ್ಧ ಸಂಧರ್ಭಗಳಲ್ಲಿ ಯೋಧರನ್ನು ಹೇಗೆ ಗೌರವ ಮನೋಭಾವದಿಂದ ಕಂಡು ಅದನ್ನೇ ಮುಂದುವರಿಸಿದ್ದೇವೇಯೋ ಅದೇ ಗೌರವಾದರಗಳನ್ನು ವೈದ್ಯರು, ದಾದಿಯರು ಮತ್ತು ಪೊಲೀಸರಿಗೂ ಮುಂದಿನ ದಿನಗಳಲ್ಲಿ ನೀಡಬಹುದು.
 18. ವಿಶ್ವಾದ್ಯಂತ ತಲ್ಲಣ ಮೂಡಿಸಿದ ಈ ವೈರಸ್ ಚೀನೀ ನಿರ್ಮಿತ ಎಂಬ ಆರೋಪ ಧೃಢಪಟ್ಟಲ್ಲಿ ಚೀನಾ ಜಾಗತಿಕ ಪ್ರತಿರೋಧವನ್ನು ಎದುರಿಸಬೇಕಾಗಬಹುದು.
 19. ಚೀನಾ ಬಹಿಷ್ಕಾರದಿಂದಾಗಿ, ಜಗತ್ತು ಭಾರತದೆಡೆಗೆ ಮುಖ ಮಾಡಿ, ಭಾರತವನ್ನು ವಿಶ್ವ ಗುರುವನ್ನಾಗಿ ಸ್ವೀಕರಿಸಬಹುದು.

ಇದನ್ನೂ ಓದಿ : ನಮ್ಮ ಸಂಸ್ಕೃತಿಯನ್ನು ನಮಗೇ ಕಲಿಸುತ್ತಿದೆ ಕೊರೋನಾ!

ಏನಿದ್ದರೂ ದೇಶ – ವಿಶ್ವಕ್ಕೆ ವಕ್ಕರಿಸಿರುವ ಈ ಮಾರಣಾಂತಿಕ ಸೋಂಕಿನ ಮೂಲೋತ್ಪಾಟನೆಗೆ ದೇಶಕ್ಕೆ ದೇಶವೇ, ವಿಶ್ವಕ್ಕೆ ವಿಶ್ವವೇ ಜೊತೆಗೂಡಿ ಹೋರಾಡಿ ಮನುಕುಲದ ಸಂರಕ್ಷಣೆಗೆ ಒಂದಾಗಿ ಭಾತ್ರುತ್ವನ್ನು ಸಾದರಪಡಿಸಿರುವುದಂತೂ ಸತ್ಯ

ಶ್ರೀಮತಿ ರೇಖಾ ಸುದೇಶ್ ರಾವ್

LEAVE A REPLY

Please enter your comment!
Please enter your name here