ಕೊರೋನಾ ರೋಗಕ್ಕೆ ಔಷಧಿಯನ್ನು ಬಿಡುಗಡೆಗೊಳಿಸಿದ ಪತಂಜಲಿ

1
164
Tap to know MORE!

ಪತಂಜಲಿಯು ಮಂಗಳವಾರ ‘ಕೊರೊನಿಲ್ ಮತ್ತು ಸ್ವಸಾರಿ’ ಔಷಧವನ್ನು ಬಿಡುಗಡೆ ಮಾಡಿದೆ. ಇದು ಕೋವಿಡ್-19 ರೋಗದಿಂದ ಗುಣಮುಖರಾಗಲು ನೀಡುವ ಆಯುರ್ವೇದ ಚಿಕಿತ್ಸೆ ಎಂದು ಪತಂಜಲಿ ಹೇಳಿಕೊಂಡಿದೆ. ಹರಿದ್ವಾರದ ಪತಂಜಲಿ ಯೋಗಪೀಠದಲ್ಲಿರುವ ಸೋಂಕು ಪೀಡಿತ ರೋಗಿಗಳ ಮೇಲೆ ನಡೆಸಿದ ಪ್ರಾಯೋಗಿಕ ಪರೀಕ್ಷೆಗಳಲ್ಲಿ 100 ಪ್ರತಿಶತ ಅನುಕೂಲಕರ ಫಲಿತಾಂಶಗಳನ್ನು ತೋರಿಸಿದೆ ಎಂದು ಅವರು ಹೇಳಿದ್ದಾರೆ. ಕಂಪನಿಯು ಅಭಿವೃದ್ಧಿಪಡಿಸಿದ ಆಯುರ್ವೇದ ಔಷಧವು 3-14 ದಿನಗಳಲ್ಲಿ ಕೋವಿಡ್-19 ರೋಗಿಗಳನ್ನು ಗುಣಪಡಿಸಲು ಸಮರ್ಥವಾಗಿದೆ ಎಂದು ಪತಂಜಲಿ ಆಯುರ್ವೇದದ ವ್ಯವಸ್ಥಾಪಕ ನಿರ್ದೇಶಕರಾದ ಆಚಾರ್ಯ ಬಾಲಕೃಷ್ಣ ಹೇಳಿದ್ದಾರೆ.

ಕ್ಲಿನಿಕಲ್ ಪ್ರಯೋಗಕ್ಕಾಗಿ ಒಟ್ಟು 100 ಕೊರೋನವೈರಸ್ ಸೋಂಕಿತರನ್ನು ಆಯ್ದುಕೊಳ್ಳಲಾಗಿತ್ತು ಎಂದು ಪತಂಜಲಿ ಹೇಳಿಕೊಂಡಿದೆ. ಅದರಲ್ಲಿ 95 ಸೋಂಕಿತರ ಅಧ್ಯಯನ ಮಾಡಲಾಗಿದ್ದು, ಒಬ್ಬರ ವಿವರವು ಅಧ್ಯಯನದ ನಡುವೆ ಕಳೆದುಕೊಂಡೆವು ಮತ್ತು 4 ರೋಗಿಗಳು ಅಧ್ಯಯನದ ನಡುವೆಯೇ ಹಿಂದೆಸರಿದಿದ್ದರು.

1 COMMENT

  1. […] ಪತಂಜಲಿಯ ಕೊರೊನಿಲ್ ಟ್ಯಾಬ್ಲೆಟ್ ಅನ್ನು ಬಿಡುಗಡೆ ಮಾಡಿದ್ದರು. ಇದು ಕೋವಿಡ್ -19 ಗೆ ಚಿಕಿತ್ಸೆ ಎಂದು ಅವರು […]

LEAVE A REPLY

Please enter your comment!
Please enter your name here