BIG NEWS : 3 ಕೊರೋನಾ ಲಸಿಕೆ ತಯಾರಿಕಾ ಕೇಂದ್ರಗಳಿಗೆ ಇಂದು ಖುದ್ದು ಭೇಟಿ ನೀಡಲಿರುವ ಪ್ರಧಾನಿ ಮೋದಿ!

0
156
Tap to know MORE!

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಲಸಿಕೆ ತಯಾರಿಕಾ ಘಟಕಗಳಿಗೆ ತೆರಳಿ, ಕೊರೋನಾ ಲಸಿಕೆ ಅಭಿವೃದ್ಧಿ ಹಾಗೂ ತಯಾರಿಕೆ ಬಗ್ಗೆ ಖುದ್ದು ಪರಿಶೀಲನೆ ನಡೆಸಲಿದ್ದಾರೆ. ಪುಣೆಯಲ್ಲಿರುವ ಫಾರ್ಮಾ ದೈತ್ಯ ಸೀರಮ್​​ ಇನ್ಸ್​​ಟಿಟ್ಯೂಟ್​, ಅಹಮದಾಬಾದ್​ನಲ್ಲಿರುವ ಝೈಡಸ್​ ಕ್ಯಾಡಿಲಾ, ಹಾಗೂ ಹೈದರಾಬಾದ್​​ನಲ್ಲಿರುವ ಭಾರತ್​​​​ ಬಯೋಟೆಕ್​​ನ ಫಾರ್ಮಾ ಘಟಕಗಳಿಗೆ ಅವರು ಭೇಟಿ ನೀಡಲಿದ್ದಾರೆ.

ಝೈಡಸ್​ ಕ್ಯಾಡಿಲಾ ಅಹಮದಾಬಾದ್​ನ ಚಾಂಗೋದಾರ್​ ಇಂಡಸ್ಟ್ರಿಯಲ್ ಏರಿಯಾದಲ್ಲಿದೆ. ತನ್ನ ಕೊರೊನಾ ಲಸಿಕೆ ZyCoV-Dಯ ಮೊದಲ ಹಂತದ ಪರೀಕ್ಷೆ ಮುಗಿದಿದ್ದು, ಆಗಸ್ಟ್​ನಿಂದ ಎರಡನೇ ಹಂತದ ಕ್ಲೀನಿಕಲ್ ಟ್ರಯಲ್ ಶುರು ಮಾಡಿರುವುದಾಗಿ ಈ ಹಿಂದೆ ಸಂಸ್ಥೆ ತಿಳಿಸಿತ್ತು. ಇಂದು ಮೋದಿ ಗುಜರಾತ್​​ಗೆ ಭೇಟಿ ನೀಡ್ತಿದ್ದಾರೆ. ಇದೇ ಹೊತ್ತಲ್ಲಿ ಇಂದು ಬೆಳಗ್ಗೆ 9.30ಕ್ಕೆ ಅವರು ಝೈಡಸ್​ ಕ್ಯಾಡಿಲಾದ ಘಟಕಕ್ಕೆ ಭೇಟಿ ಕೊಟ್ಟು, ಸಂಸ್ಥೆಯು ಲಸಿಕೆ ಅಭಿವೃದ್ಧಿಯಲ್ಲಿ ಎಷ್ಟು ಪ್ರಗತಿ ಕಂಡಿದೆ ಎಂಬ ಬಗ್ಗೆ ಮಾಹಿತಿ ಪಡೆಯಲಿದ್ದಾರೆ.

ಇದನ್ನೂ ಓದಿ: ಮತಾಂತರ ಆಗುವುದು ತಪ್ಪು ಎಂದು ಹೇಳುವುದು ಸಮಂಜಸವಲ್ಲ : ಅಲಹಾಬಾದ್ ಹೈಕೋರ್ಟ್‌ನಿಂದ ಮಹತ್ವದ ತೀರ್ಪು

ಮಧ್ಯಾಹ್ನ 1:30ಕ್ಕೆ ಪುಣೆಯ ಸೀರಂ ಇನ್ಸ್​ಟಿಟ್ಯೂಟ್​ಗೆ ತೆರಳಿ ಅಲ್ಲಿ, ಕೋವಿಶೀಲ್ಡ್​ ವ್ಯಾಕ್ಸಿನ್ ಬಗ್ಗೆ ವಿಜ್ಞಾನಿಗಳು ಹಾಗೂ ತಜ್ಞರೊಂದಿಗೆ ವಿಚಾರ ವಿನಿಮಯ ಮಾಡಲಿದ್ದಾರೆ.

LEAVE A REPLY

Please enter your comment!
Please enter your name here