ಇಂದು ಕೇರಳದಲ್ಲಿ 150 ಪಾಸಿಟಿವ್ ಕೇಸ್ ಗಳು ದಾಖಲಾಗುವ ಮೂಲಕ ಸತತ ಎಂಟು ದಿನಗಳಿಂದ 100ಕ್ಕೂ ಅಧಿಕ ಪ್ರಕರಣಗಳು ದಾಖಲಾದಂತಾಗಿದೆ.
150 ಪ್ರಕರಣಗಳಲ್ಲಿ 91 ಪ್ರಕರಣಗಳು ವಿದೇಶದಿಂದ ಬಂದವರಾಗಿದ್ದು, 48 ಇತರ ರಾಜ್ಯಗಳಿಂದ ಬಂದವರು ಮತ್ತು 11 ಕೇಸ್ ಗಳು ಇತರ ಪ್ರಕರಣ ಸಂಪರ್ಕದ ಮೂಲಕ ಬಂದಿರುತ್ತದೆ. ಇದುವರೆಗೆ ಕೇರಳದಲ್ಲಿ 3876 ಪಾಸಿಟಿವ್ ಕೇಸ್ ಇದ್ದು ,1846 ಆಕ್ಟಿವ್ ಪ್ರಕರಣಗಳು ಇವೆ. 2008 ಮಂದಿ ಗುಣಮುಖರಾಗಿದ್ದಾರೆ. 22 ಕೊರೊನಾ ರೋಗಿಗಳು ಸಾವನ್ನಪ್ಪಿದ್ದು ಇಂದಿನ 150 ಕೇಸ್ ಈವರೆಗಿನ ಪ್ರಕರಣಗಳಲ್ಲಿ ಅತೀ ಹೆಚ್ಚು ಎನ್ನಲಾಗುತ್ತಿದೆ.