ಕೊರೋನಾ ವರದಿ – ಭಾರತದಲ್ಲಿ ಕಳೆದ 24 ಘಂಟೆಯಲ್ಲಿ 13,983 ಸೋಂಕಿತರು ಗುಣಮುಖ!

0
119
Tap to know MORE!

ಭಾರತದಲ್ಲಿ ನಿನ್ನೆ ಒಂದೇ ದಿನ ಸುಮಾರು 18,000 ಕ್ಕೂ ಅಧಿಕ ಹೊಸ ಕೋವಿಡ್ ಪ್ರಕರಣಗಳ ಪತ್ತೆಯಾಗಿದ್ದು, ಇದುವರೆಗಿನ ಗರಿಷ್ಟವಾಗಿದೆ. ಇದರಿಂದಾಗಿ, ದೇಶದ ಒಟ್ಟು ಸೋಂಕಿತರ ಸಂಖ್ಯೆಯನ್ನು 4.91 ಲಕ್ಷಕ್ಕೆ ತೆಗೆದುಕೊಂಡು ಹೋಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಂಕಿ ಅಂಶಗಳು ತಿಳಿಸಿವೆ.

ಭಾರತವು ಕೊರೋನಾ ಸಾಂಕ್ರಾಮಿಕ ರೋಗದಿಂದ ಅತಿ ಹೆಚ್ಚು ಹಾನಿಗೊಳಗಾದ ನಾಲ್ಕನೇ ದೇಶವಾಗಿ ಮುಂದುವರೆದಿದೆ. ನಿನ್ನೆಯ ಒಟ್ಟು 18,185 ಹೊಸ ಸೋಂಕಿತರು ಸೇರಿ, ಈವರೆಗೆ ಸೋಂಕಿತರ ಸಂಖ್ಯೆಯು 4,91,170 ಕ್ಕೆ ತಲುಪಿದೆ.

ಇದರ ಮಧ್ಯೆ, ನಿನ್ನೆ ದೇಶದಲ್ಲಿ ಒಟ್ಟು 13,983 ಸೋಂಕಿತರು ಗುಣಮುಖರಾಗಿದ್ದು, ಸೋಂಕಿನಿಂದ ಗುಣಮುಖರಾದವರ ಒಟ್ಟು ಸಂಖ್ಯೆ 2,85,671 ಕ್ಕೆ ಏರಿದೆ.

ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ಕಳೆದ 24 ಗಂಟೆಗಳಲ್ಲಿ ಸೋಂಕಿಗೆ 401 ಜನ ಬಲಿಯಾಗಿದ್ದು, ದೇಶದಲ್ಲಿ ಸೋಂಕಿಗೆ ಬಲಿಯಾದವರ ಒಟ್ಟು ಸಂಖ್ಯೆ 15,308 ಕ್ಕೆ ತಲುಪಿದೆ ಎಂದು ವರದಿಯಾಗಿದೆ.

ಪ್ರಸ್ತುತ ದೇಶದಲ್ಲಿ 1,90,136 ಸಕ್ರಿಯ ಪ್ರಕರಣಗಳು ಇದ್ದು, 2,85,671 ಸೋಂಕಿತರು ಗುಣಮುಖರಾಗಿದ್ದಾರೆ. ಕೋವಿಡ್-19 ನಿಂದ ಚೇತರಿಸಿಕೊಳ್ಳುವ ರೋಗಿಗಳ ಸಂಖ್ಯೆಯೂ ಹೆಚ್ಚುತ್ತಲೇ ಇದೆ. ಭಾರತದಲ್ಲಿ ಚೇತರಿಕೆ ಪ್ರಮಾಣವು ಶೇ.58.16 ಕ್ಕೆ ಏರಿದೆ ಮತ್ತು ಸಾವಿನ ಪ್ರಮಾಣವು ಶೇ. 3.11 ನಷ್ಟಿದೆ.

ಕೊರೋನಾ ಸೋಂಕಿಗೆ ವಿಶ್ವದಲ್ಲಿ ಭಾರತವು ನಾಲ್ಕನೇ ಅತೀ ಹೆಚ್ಚು ಹಾನಿಗೊಳಗಾದ ರಾಷ್ಟ್ರವಾಗಿದ್ದು, ಅಮೇರಿಕಾ (25 ಲಕ್ಷ), ಬ್ರೆಜಿಲ್ (12.3 ಲಕ್ಷ) ಮತ್ತು ರಷ್ಯಾ (6.1 ಲಕ್ಷ ) ಮಾತ್ರ ಭಾರತಕ್ಕಿಂತಲೂ ಕೆಟ್ಟ ಪರಿಸ್ಥಿತಿಯಲ್ಲಿದೆ. ಭಾರತದಲ್ಲಿ ಜನಸಂಖ್ಯೆಯೂ ಹೆಚ್ಚಿರುವುದರಿಂದ, ಪ್ರತಿ 10 ಲಕ್ಷಕ್ಕೆ ದೇಶದಲ್ಲಿ ಕೇವಲ 356 ಸೋಂಕಿತರಿರುತ್ತಾರೆ. ಇದು ಎಷ್ಟೋ ರಾಷ್ಟ್ರಗಳಿಗಿಂತ ಉತ್ತಮ ಸ್ಥಾನದಲ್ಲಿದೆ.

LEAVE A REPLY

Please enter your comment!
Please enter your name here