ಕೊರೋನಾ ವರದಿ : ರಾಜ್ಯದಲ್ಲಿಂದು 10 ಸೋಂಕಿತರು ಬಲಿ!

0
126
Tap to know MORE!

ಕೊರೋನಾ ಪ್ರಕರಣಗಳ ಇಂದಿನ ವರದಿ ಹೊರಬಿದ್ದಿದ್ದು, ಸತತ ಆರನೇ ದಿನ ಬೆಂಗಳೂರಿನಲ್ಲಿ ಹೊಸ ಸೋಂಕಿತರ ಸಂಖ್ಯೆ ನೂರು ದಾಟಿದೆ. ಬೆಂಗಳೂರಿನ 144ನ್ನು ಸೇರಿದಂತೆ, ರಾಜ್ಯದಲ್ಲಿ ಒಟ್ಟು 445 ಹೊಸ ಸೋಂಕಿತರು ಪತ್ತೆಯಾಗಿದ್ದಾರೆ. ಇದರಿಂದ, ಸತತ ಎರಡನೇ ದಿನ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 400 ದಾಟಿದೆ ಹಾಗೂ ಒಟ್ಟು ಸಕ್ರಿಯ ಕೊರೋನಾ ಪ್ರಕರಣಗಳ ಸಂಖ್ಯೆ 3,905 ಏರಿದಂತಾಗಿದೆ. ಬೆಂಗಳೂರು ಹೊರತುಪಡಿಸಿ, ಇತರ ಯಾವುದೇ ಜಿಲ್ಲೆಯಲ್ಲೂ ಈಗ 400ಕ್ಕೂ ಅಧಿಕ ಸಕ್ರಿಯ ಪ್ರಕರಣಗಳು ಇಲ್ಲ.

ಇಂದಿನ ವರದಿಯಲ್ಲಿ ರಾಜ್ಯ ರಾಜಧಾನಿಯನ್ನು ಹೊರತುಪಡಿಸಿ, ಇತರ ಯಾವುದೇ ಜಿಲ್ಲೆಯಲ್ಲೂ, 50ಕ್ಕೂ ಅಧಿಕ ಸೋಂಕಿತರು ಪತ್ತೆ ಆಗಲಿಲ್ಲ. ಬಳ್ಳಾರಿ(47) ಮತ್ತು ಕಲಬುರ್ಗಿ (42) ನಂತರದ ಸ್ಥಾನದಲ್ಲಿದೆ.

ಅದಲ್ಲದೆ, ಇಂದು ರಾಜ್ಯದಲ್ಲಿ ಒಟ್ಟು 246 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿರುತ್ತಾರೆ. ಕಲಬುರ್ಗಿಯಲ್ಲಿ ಗರಿಷ್ಠ 75 ಸೋಂಕಿತರು ಗುಣಮುಖರಾಗಿದ್ದಾರೆ. ಬಳ್ಳಾರಿ(38) ಮತ್ತು ದಕ್ಷಿಣ ಕನ್ನಡ (32) ನಂತರದ ಸ್ಥಾನದಲ್ಲಿದೆ. ರಾಜ್ಯದಲ್ಲಿ ಇದುವರೆಗೆ, ಒಟ್ಟು 6916 ಸೋಂಕಿತರು ಗುಣಮುಖರಾಗಿದ್ದಾರೆ. ಉಡುಪಿ ಜಿಲ್ಲೆಯೊಂದರಲ್ಲೇ ಒಟ್ಟು 1,028 ಮಂದಿ ಗುಣಮುಖರಾಗಿರುತ್ತಾರೆ.

ರಾಜ್ಯಾದ್ಯಂತ ಒಟ್ಟು 10 ಸೋಂಕಿತರು ಇಂದು ಕೊರೋನಾಗೆ ಬಲಿಯಾಗಿದ್ದಾರೆ.

LEAVE A REPLY

Please enter your comment!
Please enter your name here