ಕೊರೋನಾ ಸೋಂಕಿತರನ್ನು ಪ್ರಾಣಿಗಳಿಗಿಂತ ಕೆಟ್ಟದಾಗಿ ನೋಡಲಾಗುತ್ತಿದೆ : ಸುಪ್ರೀಂ ಕೋರ್ಟ್

0
178
Tap to know MORE!

ದೆಹಲಿ, ಮಹಾರಾಷ್ಟ್ರ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳ ರಾಜ್ಯಗಳು ಕೊರೋನಾ ಬಿಕ್ಕಟ್ಟು ಮತ್ತು ಸೋಂಕಿತರನ್ನು ನಿಭಾಯಿಸುತ್ತಿರುವ ರೀತಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ಖಂಡಿಸಿದೆ. ದೆಹಲಿಯಲ್ಲಿ ಕೊರೋನಾ ರೋಗಿಗಳನ್ನು ನಿಭಾಯಿಸುವ ರೀತಿ ‘ಭಯಾನಕ’ ಎಂದು ಅದು ಹೇಳಿದೆ. ಅವರಿಗೆ “ಪ್ರಾಣಿಗಳಿಗಿಂತ ಕೆಟ್ಟದಾಗಿ ನೋಡಲಾಗುತ್ತಿದೆ” ಎಂದು ಉಚ್ಚ ನ್ಯಾಯಾಲಯ ಹೇಳಿದೆ.

ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಎಸ್ ಕೆ ಕೌಲ್ ಮತ್ತು ಎಂ ಆರ್ ಷಾ ಅವರ ನ್ಯಾಯಪೀಠವು ರಾಜ್ಯಗಳಿಂದ ಪ್ರತಿಕ್ರಿಯೆಗಳನ್ನು ಕೋರಿತ್ತು ಮತ್ತು ರೋಗಿಗಳಿಗೆ ಚಿಕಿತ್ಸೆ ನೀಡುವಲ್ಲಿ ಮತ್ತು ಮರಣ ಹೊಂದಿದವರಿಗೆ ಗೌರವಾನ್ವಿತ ನಿರ್ಗಮನವನ್ನು ನೀಡುವಲ್ಲಿನ ದೋಷಗಳನ್ನು ವಿವರಿಸಲು ಕೇಳಿದೆ.

ಮಾಜಿ ಕಾನೂನು ಸಚಿವ ಅಶ್ವನಿ ಕುಮಾರ್ ಅವರ ಪತ್ರವೊಂದನ್ನು ಪರಿಶೀಲಿಸಿದ ನಂತರ ನ್ಯಾಯಾಲಯವು ‘ಸುಯೊ ಮೋಟು’ ಪ್ರಕರಣವನ್ನು ಆಲಿಸುತ್ತಿತ್ತು, ಇದರಲ್ಲಿ ಕೋವಿಡ್-19 ಸಂತ್ರಸ್ತರ ಶವಗಳು ದೆಹಲಿಯಲ್ಲಿ ಹೇಗೆ ರಾಶಿ ಬೀಳುತ್ತಿದೆ ಮತ್ತು ಕೆಲವು ರಾಜ್ಯಗಳಲ್ಲಿ ಕೊರೋನಾ ಹೆಸರಿನಲ್ಲಿ ಆಗುತ್ತಿರುವ ವ್ಯವಹಾರಗಳ ಬಗ್ಗೆ ದುಃಖ ವ್ಯಕ್ತಪಡಿಸಿದರು ಮತ್ತು ” ಕಸದ ತೊಟ್ಟಿಗಳಲ್ಲಿ ಶವಗಳು ಪತ್ತೆಯಾದ ರಾಜ್ಯಗಳಿವೆ. ಅವುಗಳನ್ನು ಪ್ರಾಣಿಗಳಿಗಿಂತ ಕೆಟ್ಟದಾಗಿ ಪರಿಗಣಿಸಲಾಗುತ್ತಿದೆ ” ಎಂದಿದೆ.

ಕೇಂದ್ರ ಮತ್ತು ರಾಜ್ಯಗಳು ತಮ್ಮ ಪ್ರತಿಕ್ರಿಯೆಗಳನ್ನು ಸಲ್ಲಿಸುವಂತೆ ಕೇಳಿಕೊಂಡಿದ್ದು, ಈ ವಿಷಯವನ್ನು ಹೆಚ್ಚಿನ ವಿಚಾರಣೆಗೆ ಜೂನ್ 17 ರಂದು ನಿಗದಿಪಡಿಸಿದೆ.

LEAVE A REPLY

Please enter your comment!
Please enter your name here