ಕೊರೋನಾ ಹೆಸರಿನಲ್ಲಿ ನಡೀತಿದೆ ಹಗರಣ : ಶಾಸಕ ಯು ಟಿ ಖಾದರ್ ಆರೋಪ

0
194
Tap to know MORE!

ಮಾಜಿ ಆರೋಗ್ಯ ಸಚಿವ ಮತ್ತು ಕಾಂಗ್ರೆಸ್ ಶಾಸಕ ಯು.ಟಿ.ಖಾದರ್ ಅವರು ರಾಜ್ಯ ಸರ್ಕಾರವು ನೈಜ ಬೆಲೆಗಿಂತ ಎರಡು ಪಟ್ಟು ಹೆಚ್ಚಿನ ಬೆಲೆಗೆ ಕೊರೋನಾ ವೈರಸ್ ಉಪಕರಣಗಳನ್ನು ಖರೀದಿಸಿದೆ ಎಂದು ಆರೋಪಿಸಿದ್ದಾರೆ.

“₹500 ಸ್ಯಾನಿಟೈಜರ್‌ಗಳನ್ನು ₹900 ಕ್ಕೆ ಮತ್ತು ₹1200 ಯ ಥರ್ಮಲ್ ಮೀಟರ್‌ ₹9,000ಗಳನ್ನು ಸರ್ಕಾರದಿಂದ ಪಾವತಿಸಲಾಗಿದೆ. ಶ್ರೀ ಬಿ. ಶ್ರೀರಾಮುಲು ಅವರು ಆರೋಗ್ಯ ಸಚಿವರಾಗಿರುವುದರಿಂದ, ಅವರು ಜನರಿಗಾಗಿ ಕೆಲಸ ಮಾಡಬೇಕೇ ಹೊರತು ಇತರರನ್ನು ಕೆಲಸ ಮಾಡಲು ಕೇಳುವುದಲ್ಲ” ಎಂದು ಅವರು ಹೇಳಿದರು.

ಸಾಂಕ್ರಾಮಿಕ ರೋಗವು ಪ್ರಾರಂಭವಾಗಿ ಮೂರು ತಿಂಗಳುಗಳು ಕಳೆದಿವೆ. ಆದರೆ ರೋಗಿಗಳಿಗೆ ಆಂಬುಲೆನ್ಸ್ ಕಳುಹಿಸಲು ರಾಜ್ಯ ಸರ್ಕಾರ ಇನ್ನೂ ಹೆಣಗಾಡುತ್ತಿದೆ” ಎಂದು ಖಾದರ್ ಹೇಳಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಪ್ರಕಾರ, ಕರ್ನಾಟಕದಲ್ಲಿ ಒಟ್ಟು 25,317 ಕೊರೋನಾ ಪ್ರಕರಣಗಳು ದಾಖಲಾಗಿದ್ದು, 13,255 ಸಕ್ರಿಯ ಪ್ರಕರಣಗಳಿವೆ ಮತ್ತು 372 ಸೋಂಕಿತರು ಸಾವನ್ನಪ್ಪಿದ್ದರೆ.

LEAVE A REPLY

Please enter your comment!
Please enter your name here