ಕೊರೋನಾ ಹೋರಾಟದಲ್ಲಿ ಗೆದ್ದ 85 ವರ್ಷದ ಕ್ಯಾನ್ಸರ್ ರೋಗಿ!

0
34

ಒಡಿಶಾದ ಕೇಂದ್ರಾಪರಾ ಜಿಲ್ಲೆಯ 85 ವರ್ಷದ ಕ್ಯಾನ್ಸರ್ ರೋಗಿ ಮತ್ತು ಪತ್ನಿ ಕೋವಿಡ್-19 ನಿಂದ ಚೇತರಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ಗಂಟಲು ಕ್ಯಾನ್ಸರ್ ನಿಂದ ಬಳಲುತ್ತಿರುವ ಸುರೇಂದ್ರ ಪತಿ ಮತ್ತು ಅವರ 78 ವರ್ಷದ ಪತ್ನಿ ಸಬಿತ್ರಿ ಅವರು ಕೋವಿಡ್ -19 ನಿಂದ ಗುಣಮುಖರಾಗಿದ್ದಾರೆ ಮತ್ತು ಇಬ್ಬರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಕೇಂದ್ರಾಪರಾ ಜಿಲ್ಲಾಧಿಕಾರಿ ಸಮರ್ತ್ ವರ್ಮಾ ತಿಳಿಸಿದ್ದಾರೆ.

“… ಅವರು ರೋಗವನ್ನು ಸೋಲಿಸಲು ಅನೇಕರಿಗೆ ಪ್ರೇರಣೆಯಾಗಿದ್ದಾರೆ. ಅವರಿಗೆ ನಮ್ಮ ಶುಭಾಶಯಗಳು ” ಎಂದು ಜಿಲ್ಲಾಧಿಕಾರಿ ಟ್ವೀಟ್ ಮಾಡಿದ್ದಾರೆ.

ಕೀಮೋಥೆರಪಿಗಾಗಿ ಅವರು ಜೂನ್ 8 ರಂದು ಕಟಕ್‌ನ ಆಚಾರ್ಯ ಹರಿಹರ ಪ್ರಾದೇಶಿಕ ಕ್ಯಾನ್ಸರ್ ಕೇಂದ್ರಕ್ಕೆ ದಾಖಲಿಸಲಾಗಿದ್ದರು. ಅವರೊಂದಿಗೆ, ಅವರ ಪತ್ನಿಯೂ ಆಸ್ಪತ್ರೆಯಲ್ಲಿದ್ದರು. ಜೂನ್ 29 ರಂದು ಇಬ್ಬರೂ ಕೊವಿಡ್-19 ಗೆ ಪರೀಕ್ಷೆಗೆ ಒಳಪಡಿಸಿದಾಗ, ಅವರಲ್ಲಿ ಸೋಂಕು ಇರುವುದು ದೃಢಪಟ್ಟಿತು ಎಂದು ಕೇಂದ್ರಾಪಾರ ಹೆಚ್ಚುವರಿ ಜಿಲ್ಲಾ ವೈದ್ಯಕೀಯ ಅಧಿಕಾರಿ (ಎಡಿಎಂಒ) ಎಂ ಎಚ್ ಬೇಗ್ ತಿಳಿಸಿದ್ದಾರೆ.

ದಂಪತಿಯನ್ನು ಕಟಕ್‌ನ ಕೋವಿಡ್ -19 ಆಸ್ಪತ್ರೆಗೆ ದಾಖಲಿಸಲಾಗಿತ್ತು. 10 ದಿನಗಳವರೆಗೆ ಚಿಕಿತ್ಸೆಗೆ ಒಳಪಟ್ಟ ನಂತರ, ಬಳಿಕ ಬಂದ ವರದಿಯಲ್ಲಿ ಅವರು ಸೋಂಕಿನಿಂದ ಗುಣಮುಖರಾಗಿರುವುದು ಕಂಡು ಬಂತು. ಆದ್ದರಿಂದ, ಈರ್ವರನ್ನೂ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು ಎಂದು ಅವರು ಹೇಳಿದರು.

ಇದಾದ ನಂತರ, ಮುಂಜಾಗ್ರತಾ ಕ್ರಮವಾಗಿ ದಂಪತಿಯನ್ನು ಕೇಂದ್ರಾಪರಾ ಬ್ಲಾಕ್‌ನ ಬಾಗಡ ಗ್ರಾಮ ಪಂಚಾಯತ್ ಪ್ರದೇಶದ ಕೋವಿಡ್ -19 ಆರೈಕೆ ಕೇಂದ್ರದಲ್ಲಿ ಇರಿಸಲಾಗಿತ್ತು ಎಂದು ಬೇಗ್ ಹೇಳಿದರು.

“ದಂಪತಿಗಳು, ವಿಶೇಷವಾಗಿ ಸುರೇಂದ್ರ ಪತಿ, ವಯಸ್ಸಾದ ಹೊರತಾಗಿಯೂ ಕೊರೋನವೈರಸ್ ವಿರುದ್ಧ ಕಠಿಣ ಮತ್ತು ದೃಢ ನಿಶ್ಚಯದಿಂದ ಹೋರಾಡಿದರು. ಸಾಮಾನ್ಯವಾಗಿ ಕ್ಯಾನ್ಸರ್ ರೋಗಿಗಳಿಗೆ ರೋಗನಿರೋಧಕ ಶಕ್ತಿ ಕಡಿಮೆ ಇರುತ್ತದೆ, ” ಎಂದು ಅವರು ಹೇಳಿದರು.

ಕೋವಿಡ್-19 ಅನ್ನು ಯಾರು ಬೇಕಾದರೂ ಸೋಲಿಸಬಹುದು ಎಂದು ದಂಪತಿಗಳು ಜೋರಾಗಿ ಮತ್ತು ಸ್ಪಷ್ಟವಾಗಿ ಸಂದೇಶವನ್ನು ಕಳುಹಿಸಿದ್ದಾರೆ.

LEAVE A REPLY

Please enter your comment!
Please enter your name here