ಭಾರತವು ಕೊರೋನಾ ವೈರಸ್ ಸೋಂಕಿತರ ಸಂಖ್ಯೆಯಲ್ಲಿ ಎರಡನೇ ಸ್ಥಾನ ತಲುಪಿದ ಕುಖ್ಯಾತಿಗೆ ಒಳಗಾಗಿದೆ. ಭಾರತದಲ್ಲಿ ಈವರೆಗೆ 41.13 ಲಕ್ಷಕ್ಕೂ ಹೆಚ್ಚು ಜನರು ಕೊರೋನಾ ಸೋಂಕಿಗೆ ಒಳಗಾಗಿದ್ದಾರೆ ಎಂದು ವರದಿಯಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ಇತ್ತೀಚಿನ ಅಂಕಿಅಂಶಗಳ ಪ್ರಕಾರ ಬ್ರೆಜಿಲ್ 40.41 ಲಕ್ಷ ಸೋಂಕಿತರನ್ನು ಹೊಂದಿದೆ. ಇಲ್ಲಿಯವರೆಗೆ 60 ಲಕ್ಷಕ್ಕೂ ಹೆಚ್ಚು ಜನರು ಸೋಂಕಿಗೆ ಒಳಗಾದ ಅಮೇರಿಕಾ ಮಾತ್ರ ಈಗ ಭಾರತಕ್ಕಿಂತ ಮುಂದಿದೆ.
ಶನಿವಾರ ಬ್ರೆಜಿಲ್ ಅನ್ನು ಹಿಂದಿಕ್ಕುವ ವೇಳೆ, ಭಾರತವು ಒಂದೇ ದಿನದಲ್ಲಿ ಪತ್ತೆಯಾದ ಹೊಸ ಪ್ರಕರಣಗಳ ಸಂಖ್ಯೆಯಲ್ಲೂ ದಾಖಲೆಯನ್ನು ರಚಿಸಿದೆ. ಶನಿವಾರ 24 ಗಂಟೆಯಲ್ಲಿ 90,000 ಕ್ಕೂ ಹೆಚ್ಚು ಹೊಸ ಸೋಂಕಿತರ ಪತ್ತೆಯಾಗಿದೆ. ಇದುವರೆಗೆ ಯಾವುದೇ ದೇಶದಲ್ಲೂ ಒಂದೇ ದಿನ 75 ಸಾವಿರಕ್ಕೂ ಅಧಿಕ ಸೋಂಕಿತರ ಪತ್ತೆಯಾಗಿಲ್ಲ.