ಕೊರೋನಾ ಕಳವಳದ ನಡುವೆ…

0
156
Tap to know MORE!

ರಶ್ಮಿ ಎಂದಿನಂತೆ ಆಫೀಸ್ ಕೆಲಸ ಮುಗಿಸಿ ಮನೆಗೆ ಹೊರಡುವಾಗ ಮೊದಲಿನ ಲವಲವಿಕೆ ಇರಲಿಲ್ಲ. ಮನಸ್ಸು ಚಂಚಲತೆಯ ಗೂಡಾಗಿತ್ತು. ಕೊರೋನ ನಿಲ್ಲುವಂತೆ ಕಾಣುತ್ತಿಲ್ಲ. ನಾಳೆಯಿಂದ ಭಾರತ ಲಾಕ್ಡೌನ್ ಘೋಷಣೆಯಾಗಿದೆ. ವಾರಕ್ಕೆ ಬೇಕಾದ ಎಲ್ಲಾ ಅಗತ್ಯ ಮನೆ ಸಾಮಾಗ್ರಿಗಳನ್ನು ಇಂದೇ ಖರೀದಿಸಬೇಕಾಗಿದೆ. ನಾಳೆಯಿಂದ ಕಚೇರಿಗೆ ರಜೆ ಘೋಷಿಸಲಾಗಿದೆ. ಆದೆಷ್ಟು ದಿನವೋ ತಿಳಿಯದು. ಬೇಗ….ಬೇಗನೆ ಮನೆಯತ್ತ ಹೆಜ್ಜೆ ಹಾಕಿದ ರಶ್ಮಿಗೆ ಮನೆ ಪ್ರವೇಶಿಸುತ್ತಿದ್ದಂತೆಯೇ ಪಕ್ಕದ ಮನೆ ಅಜ್ಜಿ ಹೇಳಿದಳು, “ಮಗ ಮೆಡಿಕಲ್ ಸ್ಟೋರಿಗೆ ಹೋಗಿ ನನಗೆ ಬೇಕಾದ ಒಂದಿಷ್ಟು ಮಾತ್ರೆ ತಂದುಕೊಡು. ನಾಳೆ ಬಂದ್ ಇದೆಯಲ್ಲ. ಜನ ಓಡಾಡಬಾರದಂತಲ್ಲ” ಎಂದು ಚೀಟಿಯನ್ನು ರಶ್ಮಿಯ ಕೈಯಲ್ಲಿಟ್ಟು ಧನ್ಯತಾಭಾವದಿಂದ ಅಜ್ಜಿ ನಿಟ್ಟುಸಿರುಬಿಟ್ಟಳು.

ಕೆಲವು ವರ್ಷಗಳಿಂದ ಅಜ್ಜಿಗೆ ಬೇಕಾಗುವಂತಹ ಮೆಡಿಕಲ್ ಸಾಮಾಗ್ರಿಗಳನ್ನು ರಶ್ಮಿ ತಂದುಕೊಡುತ್ತಿದ್ದಳು. ಹಾಗಂತ ಅಜ್ಜಿಯು ಯಾರು ಇಲ್ಲದ ಅನಾಥೆ ಅಲ್ಲ. ಇಬ್ಬರು ಗಂಡು ಮಕ್ಕಳಿಗೂ ಮದುವೆಯಾಗಿದೆ. ಒಬ್ಬಬ್ಬರು ಒಂದೊಂದು ಊರಿನಲ್ಲಿ ನೆಮ್ಮದಿಯಿಂದ ಇದ್ದಾರೆ. ಮಕ್ಕಳು ತಿಂಗಳು ತಿಂಗಳು ಅಮ್ಮನಿಗೆ ದುಡ್ಡು ಕಳುಹಿಸುತ್ತಿದ್ದಾರೆ ಎನ್ನುವುದೊಂದೇ ಖುಷಿಯ ವಿಚಾರ. ಅದನ್ನು ಬಿಟ್ಟರೆ ಎಲ್ಲ ವಿಚಾರಕ್ಕೂ ರಶ್ಮಿಯನ್ನೆ ಅವಲಂಬಿತಲಾಗಿದ್ದಳು. ಅಜ್ಜಿ ಹೇಳಿದ ಯಾವುದೇ ಕೆಲಸವನ್ನು ರಶ್ಮಿ ಬಹಳ ಸಂತೋಷದಿಂದ ಮಾಡಿಕೊಡುತಿದ್ದಳು.

ಇದನ್ನೂ ಓದಿ : ಹಗೆ, ದ್ವೇಷ ಮರೆತು ಪ್ರೀತಿ ಸಹಬಾಳ್ವೆಯಿಂದ ಬಾಳೋಣ

ಮನೆ ಪ್ರವೇಶಿಸುತ್ತಿದ್ದಂತೆ ರಶ್ಮಿ ಒಂದರ್ಧ ಗಂಟೆ ಸೋಫಾದಲ್ಲಿ ಒರಗಿ ವಿಶ್ರಾಂತಿ ಪಡೆದಳು. ಸಾಕಪ್ಪ ಸಾಕು ಆಫೀಸ್ ಕೆಲಸ. ಎಷ್ಟು ಕೆಲಸ ಮಾಡಿದರು ಮುಗಿಯುತ್ತಲೇ ಇಲ್ಲ. ಕೆಲಸ ಮಾಡುವವರು ಮಾಡುತ್ತಲೇ ಇರಬೇಕು. ಆರಾಮವಾಗಿ ಇರುವವರು ಹಾಗೆ ಇರುತ್ತಾರೆ ಎಂದು ಯೋಚಿಸುತ್ತಿರುವಾಗಲೇ ಬಾಗಿಲು ಬಡಿದ ಶಬ್ಧ. ಬಾಗಿಲು ತೆರೆದಾಗ ಹಿಂದಿನ ಮನೆಯ ಗೌರಮ್ಮನವರು. ಅದೇ ರಾಗ; ಬೆಳಿಗ್ಗೆ ಮನೆಯಿಂದ ಹೊರಟ ಮಗ ಇನ್ನು ಬಂದಿಲ್ಲ. ಎಷ್ಟೊತ್ತಿಗೆ ಬರುತ್ತಾನೋ ಆ ದೇವರೇ ಬಲ್ಲ. ನನಗೆ ಈ ಗಂಡು ಮಕ್ಕಳಿಗಿಂತ ಹೆಣ್ಣು ಮಕ್ಕಳೇ ಇದ್ದಿದ್ದರೆ ಚೆನ್ನಾಗಿತ್ತು ಎಂದೆನಿಸುತ್ತದೆ. ಬೆಳಗ್ಗೆಯಿಂದ ಮನೆಯಲ್ಲಿ ಟೀಪುಡಿ ಇಲ್ಲ. ರಶ್ಮಿ ಇಲ್ಲೇ ಶೆಟ್ಟರ ಅಂಗಡಿಗೆ ಹೋಗಿ ಒಂದು ಪ್ಯಾಕೆಟ್ ಟೀ ಪುಡಿ ತಂದು ಕೊಡಮ್ಮ. ನಾಳೆ ಬಂದ್ ಇದೆ ಅಂತೆ” ಎಂದು ಹಣವನ್ನು ಅಲ್ಲೇ ಟೇಬಲ್ ಮೇಲಿಟ್ಟು ರಶ್ಮಿಯ ಉತ್ತರಕ್ಕೂ ಕಾಯದೆ ಹೊರಟು ಹೊರಟುಹೋದರು ಗೌರಮ್ಮ.

ಗೌರಮ್ಮನಿಗೆ ರಶ್ಮಿ ಎಂದರೆ ಬಹಳ ಪ್ರೀತಿ. ಮಗಳಂತೆಯೇ ಆದಿತ್ಯ ತೋರಿಸುತ್ತಿದ್ದರು. ಹಾಗೆ ನೋಡಿದರೆ ಓಣಿಯ ಎಲ್ಲಾ ಜನರಿಗೂ ರಶ್ಮಿಯನ್ನು ಕಂಡರೆ ಬಹಳ ಗೌರವ. ಅದಕ್ಕೆ ಮುಖ್ಯ ಕಾರಣ ರಶ್ಮಿಯ ಉಪಕಾರ ಭಾವನೆ, ಅವಳ ಉತ್ತಮ ನಡತೆ, ಸಮಾಜದ ಬಗ್ಗೆ ಅವಳಿಗಿದ್ದ ಹಿತ ಚಿಂತನೆಗಳು.

ಆಫೀಸ್ ಡ್ರೆಸ್ ಅನ್ನು ಬದಲಾಯಿಸಿ ಮುಖಕ್ಕೆ ಒಂದಿಷ್ಟು ನೀರು ಚಿಮುಕಿಸಿ ಕೊಂಡಾಗಲೇ ರಶ್ಮಿಗೆ ಸುಸ್ತು ಮಾಯವಾದಂತೆನಿಸಿತು. ಕತ್ತಲಾಗುತ್ತಿದೆ. ಅಜ್ಜಿಹೇಳಿದ ಔಷದಿ ಮತ್ತು ಗೌರಮ್ಮ ಹೇಳಿದ ಟೀಪುಡಿ ಬೇಗನೇ ತರಬೇಕು. ಅಂಗಡಿಯನ್ನು ಬೇಗ ಮುಚ್ಚುತ್ತಾನೆ ಎಂಬ ಧಾವಂತದಲ್ಲಿ ಹೊರಡುವಾಗ ಅಮ್ಮನ ಧ್ವನಿ ಕೇಳಿ ನಿಲ್ಲುತ್ತಾಳೆ. “ಅಮ್ಮ ಕರೆದೆಯ? ಬೇಗ ಹೇಳು”. ಏನು ಹೇಳಬಹುದು? ಎಂಬ ಯೋಚನೆಗೆ ರಶ್ಮಿ ಗೇಟಿನ ಬಳಿ ಬಂದಾಗ ಓಡೋಡಿ ಬಂದ ರಶ್ಮಿ ಅಮ್ಮ ಅದೇನು ಕೋರೋನ ಅಂತಾರಲ್ಲ. ಹಾಗೆಂದರೇನು ಮಗ? ನಾಳೆ ಅದಕ್ಕೆ ಬಂದಂತೆ. ನೀನು ಇಷ್ಟೊತ್ತಿಗೆ ಎಲ್ಲಿಗೆ ಹೋಗುತ್ತೀ?”

ಅಮ್ಮನ ಮಾತಿಗೆ ರಶ್ಮಿ “ಔಷಧಿ ಮತ್ತು ಗೌರಮ್ಮ ಏನು ಬೇಕೋ ಅದನ್ನು ತರಲು ಅಂಗಡಿಗೆ ಹೋಗುತ್ತಿದ್ದೇನೆ ಬೇಗ ಬರುತ್ತೇನೆ” . ಅಮ್ಮನ ಉತ್ತರಕ್ಕೂ ಕಾಯದೆ ರಶ್ಮಿ ಲಗುಬಗೆಯಿಂದ ಹೊರಟಳು ಅಂಗಡಿಯತ್ತ. ರಶ್ಮಿ ಅಮ್ಮ ಅಂದುಕೊಳ್ಳುತ್ತಾಳೆ “ಬೇರೆಯವರಿಗೆ ಉಪಕಾರ ಮಾಡುವುದರಲ್ಲಿ ಕಾಲ ಕಳೆಯುತ್ತಾಳೆ, ಇವಳಿಗೆ ಬುದ್ಧಿ ಯಾವಾಗ ಬರುತ್ತೋ…”

ಅಜ್ಜಿಗೆ ಔಷಧಿ ಮತ್ತು ಗೌರಮ್ಮಗೆ ಟಿ ಪ್ಯಾಕೆಟನ್ನು ಮುಟ್ಟಿಸಿ ,ಮನೆ ಪ್ರವೇಶಿಸುತ್ತಿದ್ದಂತೆ  ರಶ್ಮಿ ಸಾಕಿಸಲುಹಿದ ಪ್ರೀತಿಯ ಬೆಕ್ಕು ಮಿಯಾ…,ಮಿಯಾವ್ … ಎನ್ನುತ್ತಾ ತನ್ನ ಹಿಂದೆಯೇ ಬರುತ್ತಿರುವುದನ್ನು ನೋಡಿ ರಶ್ಮಿಗೆ ಮನ ಕಲುಕಿತು .ಪಾಪ ಹಸಿವಾಗಿರಬೇಕು. ಮೂಕಪ್ರಾಣಿಗಳು ತನ್ನ ಸಂಕಟವನ್ನು ಕೂಗಿನಿಂದಲೇ ಅಲ್ಲವೇ ಹೊರಹಾಕುವುದು ಎಂದು ಯೋಚಿಸಿ ಆತುರಾತುರವಾಗಿ ಅಡುಗೆಮನೆಯಲ್ಲಿದ್ದ ಹಾಲನ್ನು ಬೆಕ್ಕಿಗೆ ನೀಡಿದಳು. ಬೆಕ್ಕು ಹಾಲು ಕುಡಿಯುವುದನ್ನು ಕಾಣುತ್ತಿದ್ದ ರಶ್ಮಿಗೆ ರಸ್ತೆಯಲ್ಲಿ ಎರಡು – ಮೂರು ನಾಯಿಗಳು ಬರುತ್ತಿರುವುದನ್ನು ಗಮನಿಸುತ್ತಾಳೆ. ನಿತ್ಯವೂ ಮನೆಯ ಮುಂದೆ ಓಡಾಡುತ್ತಿದ್ದ ನಾಯಿಗಳು ಅದಕ್ಕೂ ಹಸಿವಾಗಿದೆ , ಈ ನಾಯಿಗಳು ಮನೆಯ ಮುಂದೆ ಬಂದಾಗಲೆಲ್ಲ ರಶ್ಮಿ ತಿಂಡಿ ತಿನಸುಗಳನ್ನು ಎಷ್ಟು ಬಾರಿ ಹಾಕಿದ್ದಿದೆ .ನಾಯಿಗಳು ರಶ್ಮಿಯನ್ನು ಕಂಡಾಗಲೆಲ್ಲ ಪ್ರೀತಿಯಿಂದ ಬಾಲ ಅಲ್ಲಾಡಿಸಿ ಧನ್ಯತಾಭಾವ ಸೂಚಿಸುತ್ತದೆ . ನಾಯಿ ಇರಲಿ , ಬೆಕ್ಕು ಅಥವಾ ಮನೆಯ ಮುಂದೆ ಬರುವ ದನ ,ಕರು ಇರಲಿ ಇವುಗಳನ್ನೆಲ್ಲ ಕಂಡಾಗ ರಶ್ಮಿ ಏನಾದರೊಂದು ತಿಂಡಿ ತಿನಿಸು ಗಳನ್ನು ಕೊಟ್ಟರೇನೆ ಅವಳಿಗೆ ಸಮಾಧಾನ. ಹಾಗಾಗಿ ರಶ್ಮಿ ಎಂದರೆ ಉಪಕಾರಿ ಸಹಾಯವಾಣಿ.

ನಾಯಿಗಳು ತಿಂಡಿ ತಿನ್ನುತ್ತಿರುವುದನ್ನು ನೋಡುತ ಗೇಟಿನ ಬಳಿ ನಿಂತಿದ್ದ ರಶ್ಮಿಗೆ ತುಂಬಾ ಸುಸ್ತಾದಂತೆ ಎನಿಸಿತು. ಆಫೀಸಿನಲ್ಲಿ ಬಿಡುವಿಲ್ಲದ ಕೆಲಸ ಮನೆಗೆ ಬಂದರೆ ಇನ್ನೊಂದು ತರಹ ಎರಡು, ಮೂರು ಬಾರಿ ಕುಡಿದ ಕೋಲ್ಡ್ ವಾಟರ್ ನ ಪ್ರಭಾವವೋ ಏನೋ , ರಶ್ಮಿ ಎರಡೆರಡು ಬಾರಿ ಕೆಮ್ಮುತ್ತಾಳೆ. ರಶ್ಮಿ ಕೆಮ್ಮಿರುವುದನ್ನು ನೋಡಿ ರಶ್ಮಿಯ ತಾಯಿ ಮಗ ಅದ್ಯಾಕೆ ಕೆಮ್ಮುತ್ತಿ? ಒಂದು ಶುಂಠಿ ಯನ್ನೂ ಚೆನ್ನಾಗಿ ಜಜ್ಜಿ ಮಧ್ಯದಲ್ಲಿ ಉಪ್ಪನ್ನು ಇಟ್ಕೊಂಡು ಚೀಪು, ತಕ್ಷಣ ಕೆಮ್ಮು ಓಡಿಹೋಗುತ್ತದೆ.

ಅಮ್ಮನ ಮಾತು ಸ್ಪಷ್ಟವಾಗಿ ಕೇಳಿಸುವುದಕಿಂತ ದಾರಿಯಲ್ಲಿ ಹೋಗುತ್ತಿದ್ದ ಒಂದಿಬ್ಬರು ಎಲ್ಲಾ ಕಡೆ ಕೋರೋನ….. ಕೋರೋನ…. ಅಂತಾರಲ್ಲ ಮಾರಾಯ . ಕೆಮ್ಮು ಬಂದರೆ ಅದು ಕೋರೋನ ಲಕ್ಷಣವ? ರಶ್ಮಿಗೆ ದಾರಿಹೋಕರ ಮಾತು ಕೇಳಿ ಮೈ ಜುಂ ಎಂದಿತು ತಲೆ ಭಾರವಾದಂತಾಯಿತು

ದಾರಿಹೋಕರು ರಶ್ಮಿ ಕೆಮ್ಮುವುದನ್ನು ನೋಡಿ ಹೇಳಿದ ಕೊರೋನ ? ಸಹಜವಾಗಿ ಹೇಳಿದರು? ರಶ್ಮಿಗೆ ಒಂದೂ ಅರ್ಥವಾಗಲಿಲ್ಲ. ಅಮ್ಮ ಬಂದು ರಶ್ಮಿ ಸಹಜಸ್ಥಿತಿಗೆ ಬಂದದ್ದು ಯಾಕೆ ರಶ್ಮಿ ಏನಾಯಿತು? ಎನ್ನುತ್ತಾ ಮನೆಯ ಒಳಗೆ ಕರೆದೊಯ್ದು ಅಮ್ಮ ಕೇಳುತ್ತಾಳೆ ರಶ್ಮಿ ಕೊರೋನಾ ಎಂದರೆ ಏನು? ಅದು ಹೇಗೆ ಬರುತ್ತದೆ? ಸ್ವಲ್ಪ ಹೇಳಮ್ಮ

ರಶ್ಮಿ ಅಮ್ಮನಿಗೆ ಕೊರೋನಾದ ಎಲ್ಲಾ ಲಕ್ಷಣವನ್ನು ಹೇಳುತ್ತಾಳೆ, ಕೆಮ್ಮುವುದು ಒಂದನ್ನು ಬಿಟ್ಟು…!!

ಕಥೆ ಬರಹ: ಶ್ರೀಮತಿ ರೇಖಾ ಸುದೇಶ್ ರಾವ್

LEAVE A REPLY

Please enter your comment!
Please enter your name here