ಕೊರೋನಾ ಸಾರ್ವಕಾಲಿಕ ದಾಖಲೆ – ಭಾರತದಲ್ಲಿ ಸುಮಾರು 79 ಸಾವಿರ ಹೊಸ ಸೋಂಕಿತರ ವರದಿ!

0
251
Tap to know MORE!

ನವದೆಹಲಿ: ಭಾರತವು ತನ್ನ ಕೋವಿಡ್ -19 ರ ಒಟ್ಟು ಸೋಂಕಿತರ ಸಂಖ್ಯೆಗೆ ಸುಮಾರು 79,000 ಹೊಸ ಪ್ರಕರಣಗಳನ್ನು ಶನಿವಾರ ಸೇರಿಸಿದೆ. ಇದುವರೆಗೆ ಯಾವುದೇ ದೇಶದಲ್ಲಿ ದಾಖಲಾದ ಏಕದಿನ ಗರಿಷ್ಟ ಸಂಖ್ಯೆ ಇದಾಗಿದೆ. ಇದರಿಂದಾಗಿ ಒಟ್ಟು ಸೋಂಕಿತರ ಸಂಖ್ಯೆ 35 ಲಕ್ಷ ಗಡಿ ದಾಟಿದೆ.

ನಿನ್ನೆ ಭಾರತದಲ್ಲಿ ದಾಖಲಾದ 78,903 ಹೊಸ ಪ್ರಕರಣಗಳು, ಜುಲೈ 25 ರಂದು ಯುಎಸ್ನಲ್ಲಿ ವರದಿಯಾದ 78,427 ಸೋಂಕುಗಳ ಹಿಂದಿನ ದಾಖಲೆಯನ್ನು ಮೀರಿವೆ. ಅಮೇರಿಕಾದಲ್ಲಿ ಈಗಾಗಲೇ ಅತೀ ಹೆಚ್ಚು ಕೊರೋನಾ ಸೋಂಕಿತರು ದಾಖಲಾದ ದೇಶವಾಗಿದೆ.

ಕಳೆದ ಒಂದು ವಾರದಲ್ಲಿ ಸೋಂಕಿತರ ಸಂಖ್ಯೆಯ ಏರಿಕೆ ಮತ್ತಷ್ಟು ತೀಕ್ಷ್ಣವಾಗಿದೆ. ದೇಶವು, ಏಳು ದಿನಗಳಲ್ಲಿ 4,96,070 ಪ್ರಕರಣಗಳನ್ನು ದಾಖಲಿಸಿದ್ದು, ಒಟ್ಟು ಸೋಂಕಿತರ ಸಂಖ್ಯೆಯು 30 ಲಕ್ಷದಿಂದ 35 ಲಕ್ಷಕ್ಕೆ ಹೋಗಿದೆ. ಇದು ವಿಶ್ವದ ಯಾವುದೇ ರಾಷ್ಟ್ರಗಳ ಏಳು ದಿನಗಳ ಅವಧಿಯಲ್ಲಿ ದಾಖಲಾದ ಅತ್ಯಧಿಕ ಸಂಖ್ಯೆಯಾಗಿದೆ.

ಮಹಾರಾಷ್ಟ್ರದಲ್ಲಿ ನಿನ್ನೆ ದಾಖಲೆಯ 16,867 ಹೊಸ ಸೋಂಕಿತರ ವರದಿಯಾಗಿದೆ. ನಿನ್ನೆ ಹೆಚ್ಚಿನ ಸಂಖ್ಯೆಯಲ್ಲಿ ವರದಿ ಮಾಡಿದ ಇತರ ರಾಜ್ಯಗಳು – ಆಂಧ್ರಪ್ರದೇಶ (10,548 ಸತತ ನಾಲ್ಕನೇ ದಿನ 10,000 ಕ್ಕಿಂತ ಹೆಚ್ಚು), ಕರ್ನಾಟಕ (8,324 ಸತತ ಐದನೇ ದಿನ 8,000 ಕ್ಕಿಂತ ಹೆಚ್ಚು), ತಮಿಳುನಾಡು (6,352) ಮತ್ತು ಉತ್ತರ ಪ್ರದೇಶ (5,684).

LEAVE A REPLY

Please enter your comment!
Please enter your name here