ಕಳೆದ 24 ಗಂಟೆಗಳಲ್ಲಿ 55,342 ಹೊಸ ಕೊರೋನಾ ವೈರಸ್ ಪ್ರಕರಣಗಳು ದಾಖಲಾಗಿದ್ದು, ಭಾರತದ ಒಟ್ಟು ಕೋವಿಡ್-19 ಸೋಂಕಿತರ ಸಂಖ್ಯೆ 71.75 ಲಕ್ಷವನ್ನು ಮುಟ್ಟಿದೆ ಎಂದು ಆರೋಗ್ಯ ಸಚಿವಾಲಯವು ಇಂದು ಬೆಳಿಗ್ಗೆ ಮಾಹಿತಿ ನೀಡಿದೆ.
ಆಗಸ್ಟ್ 18 ರ ಬಳಿಕ ಮೊದಲ ಬಾರಿಗೆ ಭಾರತವು ಒಂದು ದಿನದಲ್ಲಿ ಸುಮಾರು 55,000 ಪ್ರಕರಣಗಳನ್ನು ವರದಿ ಮಾಡಿದೆ. ಸೆಪ್ಟೆಂಬರ್ನಲ್ಲಿ ಕಂಡ ಭಾರೀ ಏರಿಕೆಯ ಪರಿಣಾಮ, ಪ್ರತಿನಿತ್ಯ 70 ರಿಂದ 80 ಸಾವಿರ ಸೋಂಕಿತರ ವರದಿಯಾಗುತ್ತಿತ್ತು.
ಕಳೆದ 24 ಘಂಟೆಗಳಲ್ಲಿ, ದೇಶದಲ್ಲಿ 706 ಸೋಂಕಿತರು ಸಾವನ್ನಪ್ಪಿದ್ದಾರೆ. ಇದರಿಂದ ಒಟ್ಟು ಕೋವಿಡ್ ಸಂಬಂಧಿತ ಸಾವಿನ ಸಂಖಿ 1,09,856 ಕ್ಕೆ ಏರಿಕೆಯಾಗಿದೆ.
ಕಳೆದ 24 ಗಂಟೆಗಳಲ್ಲಿ 77,760 ಸೋಂಕಿತರು ಗುಣಮುಖರಾಗಿದ್ದು, ಸಕ್ರಿಯ ಕೋವಿಡ್ ಪ್ರಕರಣಗಳು 8.38 ಲಕ್ಷಕ್ಕೆ ಇಳಿದಿವೆ. ಸಕ್ರಿಯ ಕೋವಿಡ್ ಪ್ರಕರಣಗಳು ಸತತ ಐದನೇ ದಿನ 9 ಲಕ್ಷಕ್ಕಿಂತಲೂ ಕಡಿಮೆಯಲ್ಲಿದ್ದು, ಚೇತರಿಕೆ ಪ್ರಮಾಣವನ್ನು ಶೇಕಡಾ 86.8 ಕ್ಕೆ ಏರಿಸಿದೆ.
ಸೋಮವಾರ ಒಟ್ಟು 10.7 ಲಕ್ಷ ಜನರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದೆ. ಈವರೆಗೆ ಒಟ್ಟು 8.8 ಕೋಟಿ ಪರೀಕ್ಷೆಗಳನ್ನು ಮಾಡಲಾಗಿದೆ.