ಕೊರೋನಾ : “ದೆಹಲಿಯಲ್ಲಿ ಪಾಸಿಟಿವ್ – ಜೈಪುರದಲ್ಲಿ ನೆಗೆಟಿವ್”

0
162
Tap to know MORE!

ನಾಗೌರ್ ಲೋಕಸಭಾ ಕ್ಷೇತ್ರದ ಸಂಸದ ಮತ್ತು ರಾಷ್ಟ್ರೀಯ ಲೋಕತಾಂತ್ರಿಕ್ ಪಕ್ಷದ (ಆರ್‌ಎಲ್‌ಪಿ) ರಾಷ್ಟ್ರೀಯ ಕನ್ವೀನರ್ ಹನುಮಾನ್ ಬೆನಿವಾಲ್ ಅವರು ಸೋಮವಾರ ಕೋವಿಡ್-19 ಪರೀಕ್ಷೆಗಳ ಕುರಿತು ಎರಡು ಪ್ರತ್ಯೇಕ ವರದಿಗಳನ್ನು ತೋರಿಸಿದ್ದಾರೆ. ಅವರ ಬಳಿ ಪಾಸಿಟಿವ್ ಮತ್ತು ನೆಗೆಟಿವ್ ಎರಡೂ ವರದಿಗಳು ಲಭ್ಯವಿದೆ ಎಂದು ತೋರಿಸಿದ್ದಾರೆ.

ಟ್ವಿಟ್ಟರ್‌ನಲ್ಲಿ ಈ ಬಗ್ಗೆ ಹಂಚಿಕೊಂಡ ಸಂಸದ ಬೆನಿವಾಲ್ ,ತಮ್ಮ ಕೋವಿಡ್-19 ಪರೀಕ್ಷಾ ವರದಿಗಳನ್ನು ಹಂಚಿಕೊಂಡರು ಮತ್ತು ರಾಷ್ಟ್ರ ರಾಜಧಾನಿಯಲ್ಲಿ ನಡೆಸಿದ ಪರೀಕ್ಷೆಯು ಕೊರೋನಾ ಸೋಂಕಿತ ಎಂದು ತೋರಿಸುತ್ತದೆ. ಆದರೆ ರಾಜಸ್ಥಾನದ ಜೈಪುರದಲ್ಲಿ ನಡೆಸಿದ ಪರೀಕ್ಷೆಯಲ್ಲಿ ಕೊರೋನಾ ಸೋಂಕು ಇಲ್ಲ ಎಂದು ತೋರಿಸುತ್ತದೆ ಎಂದಿದ್ದಾರೆ.

ಸಂಸತ್ತಿನ ಮುಂಗಾರು ಅಧಿವೇಶನಕ್ಕೆ ಮುಂಚಿತವಾಗಿ ಈ ಪರೀಕ್ಷೆಗಳನ್ನು ನಡೆಸಲಾಯಿತು ಮತ್ತು ಗೊಂದಲಕ್ಕೊಳಗಾದ ಬೆನಿವಾಲ್ ಅವರು “ಯಾವ ವರದಿಯನ್ನು ನಿಖರವೆಂದು ಪರಿಗಣಿಸಬೇಕು” ಎಂದು ಕೇಳಿದ್ದಾರೆ.

“ಲೋಕಸಭಾ ಆವರಣದಲ್ಲಿ ನಾನು ಕೋವಿಡ್-19 ಪರೀಕ್ಷೆಗೆ ಒಳಗಾದೆ. ಅಲ್ಲಿ ವರದಿಯು ಪಾಸಿಟಿವ್ ಬಂದಿತು. ಅದರ ನಂತರ, ಜೈಪುರದ ಎಸ್‌ಎಂಎಸ್ ಆಸ್ಪತ್ರೆಯಲ್ಲಿ ನಾನು ಕೊರೋನವೈರಸ್ ಪರೀಕ್ಷೆಯನ್ನು ಮಾಡಿದ್ದೇನೆ. ಅಲ್ಲಿ ಫಲಿತಾಂಶವು ನೆಗೆಟಿವ್ ಎಂದು ಹೊರಬಂದಿತು. ನಾನು ಎರಡೂ ವರದಿಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ, ಯಾವ ವರದಿಯನ್ನು ನಿಖರವಾಗಿ ಪರಿಗಣಿಸಬೇಕು? ” ಎಂದು ಬೆನಿವಾಲ್ ಅವರು ಟ್ವೀಟ್ ಮಾಡಿ ಪ್ರಶ್ನಿಸಿದ್ದಾರೆ

“ನಾನು ಸಂಪೂರ್ಣವಾಗಿ ಆರೋಗ್ಯವಾಗಿದ್ದೇನೆ. ಇಂದು ನನ್ನ ಮೂರನೇ ವರದಿ ಬಂದಿದ್ದು ನೆಗೆಟಿವ್ ಇದೆ” ಎಂದಿದ್ದಾರೆ.

ಆರ್‌ಎಲ್‌ಪಿ ರಾಜಸ್ಥಾನದ ಭಾರತೀಯ ಜನತಾ ಪಕ್ಷ (ಬಿಜೆಪಿ) ಅಂಗಸಂಸ್ಥೆಯಾಗಿದೆ.

LEAVE A REPLY

Please enter your comment!
Please enter your name here