ಕೊರೋನಾ : ಭಾರತದಲ್ಲಿ ಇಳಿಕೆಯಾಗುತ್ತಿದೆ ಸೋಂಕಿತರ ಸಂಖ್ಯೆ – 24 ಗಂಟೆಗಳಲ್ಲಿ 40 ಸಾವಿರಕ್ಕೂ ಕಡಿಮೆ ಪ್ರಕರಣ

0
152
Tap to know MORE!

ನವದೆಹಲಿ: ಭಾರತವು ಮಂಗಳವಾರ ಮೂರು ತಿಂಗಳ ನಂತರ 24 ಘಂಟೆಗಳಲ್ಲಿ 40,000 ಕ್ಕಿಂತ ಕಡಿಮೆ ಕೋವಿಡ್-19 (ಕೊರೋನಾ) ಪ್ರಕರಣಗಳನ್ನು ವರದಿ ಮಾಡಿದೆ. ಆರೋಗ್ಯ ಸಚಿವಾಲಯದ ಮಾಹಿತಿಯ ಪ್ರಕಾರ, ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 36,470 ಹೊಸ ಕೋವಿಡ್ -19 ಸೋಂಕುಗಳು ವರದಿಯಾಗಿವೆ.

ಇದೇ ಅವಧಿಯಲ್ಲಿ ದಾಖಲಾದ ಹೊಸ ಸಾವುಗಳು ಸತತ ಎರಡನೇ ದಿನವೂ 500 ಕ್ಕಿಂತ ಕಡಿಮೆ ಆಗಿದೆ. ಭಾರತದಲ್ಲಿ 488 ಹೊಸ ಸಾವುನೋವುಗಳೊಂದಿಗೆ ಸಾವಿನ ಸಂಖ್ಯೆ 1,19,502 ಕ್ಕೆ ಏರಿದೆ.

ಭಾರತದ ಒಟ್ಟು ಕೋವಿಡ್-19 ಪ್ರಕರಣ ಈಗ 79,46,429 ಆಗಿದ್ದು, ಈ ಪೈಕಿ 72,01,070 ಜನರು ಚೇತರಿಸಿಕೊಂಡಿದ್ದಾರೆ. ರಾಷ್ಟ್ರೀಯ ಚೇತರಿಕೆ ದರವು ಈಗ ಶೇಕಡಾ 90.62 ರಷ್ಟಿದ್ದರೆ, ಸಾವಿನ ಪ್ರಮಾಣವು ಶೇಕಡಾ 1.50 ರಷ್ಟಿದೆ.

ಕೊರೋನವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ ಸತತವಾಗಿ ಐದು ದಿನಗಳವರೆಗೆ 7 ಲಕ್ಷಕ್ಕಿಂತ ಕಡಿಮೆಯಾಗಿದೆ. ದೇಶದಲ್ಲಿ 6,25,857 ಕ್ರೋನವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳಿವೆ, ಇದು ಒಟ್ಟು ಪ್ರಕರಣದ ಶೇಕಡಾ 7.88 ರಷ್ಟಿದೆ.

LEAVE A REPLY

Please enter your comment!
Please enter your name here