ವಧುಗೆ ಕೊರೋನಾ | ಕೋವಿಡ್ ಆರೈಕೆ ಕೇಂದ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನವ ಜೋಡಿ!

0
151
Tap to know MORE!

ನವದೆಹಲಿ: ಮದುವೆಯ ದಿನವೇ ವಧುವಿಗೆ ಕೊರೋನಾ ಪಾಸಿಟಿವ್ ಎಂದು ವರದಿ ಬಂದ ಹಿನ್ನೆಲೆಯಲ್ಲಿ ನವ ಜೋಡಿಯೊಂದು ಕೋವಿಡ್​ ಆರೈಕೆ ಕೇಂದ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

ರಾಜಸ್ಥಾನದ ಬಾರಾ ಜಿಲ್ಲೆಯ ಕೆಲ್ವಾರ ಕೋವಿಡ್​ ಸೆಂಟರ್​​ನಲ್ಲಿ ಭಾನುವಾರ ಮದುವೆಯ ಶುಭ ಸಮಾರಂಭ ನಡೆದಿದೆ. ಸರ್ಕಾರ ರೂಪಿಸಿರುವ ಕೋವಿಡ್ ನಿಯಮಗಳನ್ನ ಪಾಲಿಸಿ ಜೋಡಿ ಮದುವೆಯಾಗಿದ್ದಾರೆ. ಈಗ ಈ ಮದುವೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ವಧು-ವರ ಸೇರಿದಂತೆ ಪುರೋಹಿತರು ಪಿಪಿಇ ಕಿಟ್ ಧರಿಸಿರುವುದನ್ನು ಕಾಣಬಹುದಾಗಿದೆ.

ಇದನ್ನೂ ಓದಿ: ಮಾಸ್ಕ್ ಧರಿಸದವರಿಗೆ “ಕೊರೋನಾ” ಕುರಿತು ಪ್ರಬಂಧ ಬರೆಯುವ ಶಿಕ್ಷೆ ವಿಧಿಸಿದ ಮ್ಯಾಜಿಸ್ಟ್ರೇಟ್!

ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ರಾಜಸ್ಥಾನ ಸರ್ಕಾರ ಮಾರ್ಗಸೂಚಿಗಳನ್ನು ಪ್ರಕಟ ಮಾಡಿದ್ದು, ಮದುವೆ ಸಮಾರಂಭಗಳಲ್ಲಿ ಭಾಗಿಯಾಗಲು 100 ಜನರಿಗೆ ಮಾತ್ರ ಅವಕಾಶ ನೀಡಿದೆ. ಒಂದೊಮ್ಮೆ ನಿಯಮಗಳ ಉಲ್ಲಂಘನೆ ಆದ್ರೆ ಸಮಾರಂಭದ ಮುಖ್ಯಸ್ಥರೇ ಹೊಣೆಯಾಗಿರುತ್ತಾರೆ. ಸದ್ಯ ರಾಜಸ್ಥಾನ ಸರ್ಕಾರ ಡಿ.1 ರಿಂದ 31ರವರೆಗೂ ನೈಟ್​ ಕರ್ಫ್ಯೂ ಜಾರಿ ಮಾಡಿದೆ. ರಾತ್ರಿ 9 ರಿಂದ ಬೆಳಗ್ಗೆ 6 ಗಂಟೆವರೆಗೂ ನೈಟ್​ ಕರ್ಫ್ಯೂ ಜಾರಿ ಇರಲಿದೆ.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

LEAVE A REPLY

Please enter your comment!
Please enter your name here