ಕೋವಿಡ್ ನಿಯಮ ಉಲ್ಲಂಘನೆಗಾಗಿ ಲಾಠಿ ಚಾರ್ಜ್; 17ರ ಬಾಲಕ ಸಾವು

0
289
Tap to know MORE!

ಉತ್ತರಪ್ರದೇಶ: ಕೋವಿಡ್ ನಿಯಮ ಉಲ್ಲಂಘನೆಗಾಗಿ ಪೊಲೀಸರಿಬ್ಬರು 17 ವರ್ಷದ ಬಾಲಕನಿಗೆ ಮನಬಂದಂತೆ ಹೊಡೆದ ಕಾರಣ ಬಾಲಕ ಸಾವನ್ನಪ್ಪಿದ ಘಟನೆ ಉನ್ನಾವೋದಲ್ಲಿ ನಡೆದಿದೆ. ಪರಿಣಾಮ ಇಬ್ಬರು ಪೊಲೀಸರನ್ನು ಅಮಾನತು ಮಾಡಲಾಗಿದೆ.

ಉನ್ನಾವೋದ ಬಂಗರ್ಮೌ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಬಾಲಕ ಮನೆಮುಂದೆ ತರಕಾರಿ ಮಾರುತ್ತಿದ್ದ. ಆಗ ಸ್ಥಳೀಯ ಪೊಲೀಸರು ಆತನನ್ನು ಹಿಡಿದು ಠಾಣೆಗೆ ಕರೆದುಕೊಂಡು ಹೋಗಿ ಮನಬಂದಂತೆ ಥಳಿಸಿದ್ದಾರೆ. ಬಾಲಕನ ಆರೋಗ್ಯ ಪರಿಸ್ಥಿತಿ ಹದಗೆಟ್ಟ ಕಾರಣ ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಆ ವೇಳೆಗೆ ಬಾಲಕ ಮೃತಪಟ್ಟಿದ್ದ ಎಂದು ವೈದ್ಯರು ತಿಳಿಸಿದ್ದಾರೆ.

ಘಟನೆಯನ್ನು ವಿರೋಧಿಸಿ ಸ್ಥಳೀಯರು ಆಕ್ರೋಶಕ್ಕೆ ಒಳಗಾಗಿ ಪ್ರತಿಭಟನೆ ನಡೆಸಿದರು. ಇಲಾಖೆಯು ಇಬ್ಬರು ಕಾನ್ಸ್ಟೇಬಲ್ ಗಳು ಮತ್ತು ಓರ್ವ ಹೋಂ ಗಾರ್ಡ್ ನನ್ನು ಅಮಾನತು ಮಾಡಿದೆ.

LEAVE A REPLY

Please enter your comment!
Please enter your name here